Advertisement

ನೇಣು ಬಿಗಿದು ಗ್ರೇಡ್‌ SI ಆತ್ಮಹತ್ಯೆ

09:10 PM Apr 13, 2023 | Team Udayavani |

ಕಾಸರಗೋಡು: ಕಾಸರಗೋಡು ಟ್ರಾಫಿಕ್‌ ಸ್ಟೇಶನ್‌ ಪರಿಸರದಲ್ಲಿರುವ ಕ್ವಾರ್ಟರ್ಸ್‌ನಲ್ಲಿ ಗ್ರೇಡ್‌ ಎಸ್‌.ಐ. ಕೊಲ್ಲಂ ನಿವಾಸಿ ಬೈಜು(54) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಬುಧವಾರ ಮಧ್ಯಾಹ್ನ ಡ್ನೂಟಿಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ವಾರ್ಟರ್ಸ್‌ಗೆ ತೆರಳಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಯಿತು. ಹಿರಿಯ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಕಾಸರಗೋಡಿನಲ್ಲಿ ಅವರ ಕುಟಂಬ ವಾಸ್ತವ್ಯ ಹೂಡಿತ್ತು. ವರ್ಷಗಳ ಹಿಂದೆ ಪತ್ನಿಗೆ ಸರಕಾರಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಪತ್ನಿ ಊರಿಗೆ ಹೋಗಿದ್ದರು. ಬೈಜು ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಬೈಜು ಅವರಿಗೆ ಆರೋಗ್ಯ ಸಮಸ್ಯೆಗಳಿತ್ತೆನ್ನಲಾಗಿದೆ. ಈ ಕಾರಣದಿಂದ ನೇಣು ಬಿಗಿದಿರಬೇಕೆಂದು ಶಂಕಿಸಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
————————————————————————————————————–
ರಬ್ಬರ್‌ ತೋಟದಲ್ಲಿ ಶವ ಪತ್ತೆ
ಕುಂಬ್ಡಾಜೆ, ಎ.12: ಕುಂಬ್ಡಾಜೆಯ ರಬ್ಬರ್‌ ತೋಟದಲ್ಲಿ ಅಲ್ಲಿನ ಕಾರ್ಮಿಕ ಬಂದಡ್ಕ ಕುಂಬಿಚ್ಚಿಮೂಲೆ ಪರಂದಾನ ಹೌಸ್‌ನ ದಿವ್ಯ ಕುಮಾರ್‌(56) ಅವರ ಶವ ಪತ್ತೆಯಾಗಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
————————————————————————————————————–

Advertisement

Udayavani is now on Telegram. Click here to join our channel and stay updated with the latest news.

Next