Advertisement

ಹಂಗಾರಕಟ್ಟೆ ಕಲಾಕೇಂದ್ರ; ಯಕ್ಷಗಾನ ತರಬೇತಿ ಶಿಬಿರ

07:55 AM Aug 21, 2017 | Team Udayavani |

ಕೋಟ: ಜಾನಪದ ಕಲೆಗಳಲ್ಲಿ ನಾವು ಗುಣಾತ್ಮಕವಾದ ಅಂಶಗಳನ್ನು ಕಾಣಬಹುದಾಗಿದೆ. ಇಂದು ಪ್ರಾದೇಶಿಕ ಸಾಂಪ್ರದಾಯಿಕ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯ ಇದೆ ಎಂದು ರಂಗಕರ್ಮಿ ಗೋಪಾಲಕೃಷ್ಣ ನಾೖರಿ ಹೇಳಿದರು.

Advertisement

ಅವರು ಸಾಲಿಗ್ರಾಮ ಗುಂಡ್ಮಿಯಲ್ಲಿರುವ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ, ಚಿತ್ರದುರ್ಗ ಹೊಸದುರ್ಗದ ಸಾಣೆಹಳ್ಳಿಯ ಶಿವಕುಮಾರ್‌ ರಂಗ ಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಗೆ 20ದಿನಗಳ ಕಾಲ ನಡೆಯುವ ಯಕ್ಷಗಾನ ಶಿಬಿರಕ್ಕೆ ಆ. 20ರಂದು ಚಾಲನೆ ನೀಡಿ ಮಾತನಾಡಿದರು.
ಯಕ್ಷಗುರು ಸದಾನಂದ ಐತಾಳ ಮಾತನಾಡಿ, ಭಾರತೀಯ ಕಲೆಗಳು ಜನರಿಂದಲೇ ಹುಟ್ಟಿರುವಂತಹದ್ದು. ಅಂತರಂಗದ ತುಡಿತವಾಗಿ ಈ ಕಲೆಗಳು ಜನಮಾನಸದಲ್ಲಿ ಇಂದೂ ಉಳಿದಿವೆ ಎಂದರು.

ಶಿವಕುಮಾರ್‌ ರಂಗ ಪ್ರಯೋಗ ಶಾಲೆಯ ಪ್ರಾಂಶುಪಾಲ ಜಗದೀಶ್‌, ಯಕ್ಷಗಾನ ಕಲಾಕೇಂದ್ರದ ವೈಕುಂಠ ಹೆಬ್ಟಾರ್‌ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್‌ ಹೆಬ್ಟಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next