Advertisement

ಹಾನಗಲ್ಲ ಉಪಚುನಾವಣೆ: 3 ಗಂಟೆಯವರೆಗೆ ಶೇ. 62.72 ರಷ್ಟು ಮತದಾನ

04:26 PM Oct 30, 2021 | Team Udayavani |

ಹಾವೇರಿ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದ್ದು ಮಧ್ಯಾಹ್ನ 3 ಗಂಟೆಗೆ ವರೆಗೆ ಶೇ.62.72ರಷ್ಟು ಮತದಾನವಾಗಿದೆ.

Advertisement

ಬೆಳಗ್ಗೆ 11 ಗಂಟೆವರೆಗೆ ನಿರಸವಾಗಿದ್ದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿದೆ. ಮಧ್ಯಾಹ್ನ 3 ಗಂಟೆವರೆಗೆ ಶೇ.62.72ರಷ್ಟು ಮತದಾನವಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಸುಗಮ ಮತದಾನಕ್ಕಾಗಿ 239 ಮೂಲ ಹಾಗೂ 24 ಹೆಚ್ಚುವರಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ:ಪುನೀತ್ ಅಂತ್ಯ ಸಂಸ್ಕಾರ ಹಿನ್ನೆಲೆ: ಸಂಚಾರ ಮಾರ್ಗದಲ್ಲಿ ಬದಲಾವಣೆ

ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದ್ದು, ಮಧ್ಯಾಹ್ನ  3 ಗಂಟೆ ವರೆಗೆ ಶೇ.62.72 ರಷ್ಟು ಮತದಾನವಾಗಿದೆ.

Advertisement

ಮತಯಂತ್ರ ದೋಷ: ಹಾನಗಲ್ಲ ತಾಲೂಕಿನ ಆಕ್ಕಿ ಆಲೂರಲ್ಲಿ ಸಖಿ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡುಬಂತು. ಮತಗಟ್ಟೆ ಸಂಖ್ಯೆ 122 ರಲ್ಲಿ ಮತ ಯಂತ್ರ ಕೈ ಕೊಟ್ಟ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ತೊಂದರೆಯಾಯಿತು. 970 ಮತದಾರರಲ್ಲಿ ಅದಾಗಲೇ 519 ಮಂದಿ ಮತ ಚಲಾವಣೆಯಿಸಿದ್ದರು. ನಂತರ ಯಂತ್ರ ಏಕಾಏಕಿ ಸ್ಥಗಿತಗೊಂಡಿತು. ತಕ್ಷಣವೇ ಸ್ಥಳಕ್ಕೆ ತಾಂತ್ರಿಕ ಸಿಬ್ಬಂದಿ ಆಗಮಿಸಿ ಹೊಸ ಮತ ಯಂತ್ರ ಅಳವಡಿಸಿ ಮತದಾನಕ್ಕೆ ಅವಕಾಶ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next