Advertisement

ಮಧ್ಯಪ್ರದೇಶದಲ್ಲೂ ಕೈನಿಂದ ಉಚಿತ

12:22 AM Jul 27, 2023 | Team Udayavani |

ಭೋಪಾಲ್‌: ಕರ್ನಾಟಕದಲ್ಲಿ ಉಚಿತಗಳನ್ನು ಘೋಷಿಸಿ ಚುನಾವಣೆ ಗೆದ್ದಿರುವ ಕಾಂಗ್ರೆಸ್‌ ಮಧ್ಯಪ್ರದೇಶದಲ್ಲೂ ಅದೇ ಮಾದರಿ ಅನುಸರಿಸಿದೆ. ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಕೃಷಿಕರ ವಿದ್ಯುತ್‌ ಬಿಲ್‌ ಮನ್ನಾ ಮಾಡುತ್ತೇವೆ, ಹಳೆಯ ಬಿಲ್‌ಗ‌ಳನ್ನೂ ಕಟ್ಟುವ ಅಗತ್ಯವಿಲ್ಲ, ಕೃಷಿ ಸಾಲವೂ ಮನ್ನಾ ಆಗುತ್ತದೆ ಎಂದು ಹೇಳಿದ್ದಾರೆ.

Advertisement

ಪ್ರಸ್ತುತ ಬಿಜೆಪಿ ಸರಕಾರದ ಕ್ರಮಗಳಿಂದ ಕೃಷಿಕರ ಮೇಲಿನ ಹೊರೆ ಏರುತ್ತಿದೆ. ಸಾಲದ ಸುಳಿಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದರೆ ಕೃಷಿಕ ನ್ಯಾಯ ಯೋಜನೆಯನ್ನು ಜಾರಿ ಮಾಡುತ್ತೇವೆ. ನಮ್ಮ ಯೋಜನೆಗಳಿಂದ 37 ಲಕ್ಷ ರೈತರಿಗೆ ಉಪಯೋಗವಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next