Advertisement

Dharmasthala; ನಮ್ಮೂರು ನಮ್ಮ ಕೆರೆಯಡಿ 800ನೇ ಕೆರೆ ಹಸ್ತಾಂತರ

08:49 AM Dec 18, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ಅನೇಕ ಕಾರ್ಯಕ್ರಮಗಳಲ್ಲಿ ಕೆರೆ ಅಭಿವೃದ್ಧಿ ಅತ್ಯಂತ ಪ್ರಮುಖ ವಾದುದ್ದು. ಕೃಷಿ, ಮನುಷ್ಯರು ಹಾಗೂ ಪ್ರಾಣಿಪಕ್ಷಿಗಳಿಗೆ ನೀರು ಅತಿ ಅಗತ್ಯ. ಇದಕ್ಕಾಗಿ ಜೀವಜಲ ಉಳಿಸುವೆಡೆಗೆ ಕೆರೆ ಪುನಃಶ್ಚೇತನ ಕಾರ್ಯವನ್ನು ಕೈಗೊಂ ಡಿದ್ದೇವೆ. ಕೆರೆಯನ್ನು ಸಂರಕ್ಷಿಸಿದಲ್ಲಿ ಗಂಗೆಯನ್ನು ರಕ್ಷಿಸಿದಂತೆ. ಹಾಗಾಗಿ ಪುನಃಶ್ಚೇತನಗೊಳಿಸಿದ ಕೆರೆಯ ಆರೋಗ್ಯ ಹಾಗೂ ಶುಚಿತ್ವ ಕಾಯ್ದುಕೊಳ್ಳುವುದು ಸಮಿತಿ ಸದಸ್ಯರ ಹೊಣೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೆಂದ್ರ ಹೆಗ್ಗಡೆಯವರು ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ದಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಪುನಃಶ್ಚೇತನಗೊಳಿಸಿದ ಆಯ್ದ 61 ಸಮಿತಿಯ 300 ಕೆರೆ ಸಮಿತಿ ಸದಸ್ಯರೊಂದಿಗೆ ಯೋಜನೆ ಕಚೇರಿಯಲ್ಲಿ ಡಿ.17ರಂದು ಜರಗಿದ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, 800ನೇ ಕೆರೆ ಹಸ್ತಾಂತರಿಸಿ ಮಾತನಾಡಿದರು.
ಕ್ಷೇತ್ರದ ಡಾ| ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ದಕ್ಷಿಣ ಕನ್ನಡದ‌ಲ್ಲಿ ಒಂದು ಕೆರೆಯನ್ನು ಅಭಿ ವೃದ್ಧಿ ಮಾಡಬೇಕೆಂಬ ಕನಸಿತ್ತು. ಇಂದು ರಾಜ್ಯದಲ್ಲಿ 800 ಕೆರೆಗಳು ಪುನಶ್ಚೇತ ನಗೊಂಡಿವೆ. ಎಲ್ಲರೂ ಕ್ಷೇತ್ರ ಪಾಲರಂತೆ ಜಲ ಸಂರಕ್ಷಕರಾಗಿ ಗ್ರಾಮದ ಅಭಿವೃದ್ಧಿಯ ಜತೆಗೆ ಕೆರೆಯನ್ನು ಉಳಿಸಿ ಬೆಳೆಸಿ ಎಂದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‌ ಕುಮಾರ್‌ಎಸ್‌.ಎಸ್‌. ಮಾತನಾಡಿ, ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜಲತಜ್ಞ ಶಿವಾನಂದ ಕಳವೆಯವರು ಕೆರೆಯ ಸಂರಕ್ಷಣೆ ಹಾಗೂ ಜಲಸಂರಕ್ಷಣೆಯಿಂದ ಆಗುವ ಪ್ರಯೋಜನವನ್ನು ವಿವರಿಸಿದರು.

ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿವಾನಂದ ಆಚಾರ್ಯ ನಿರೂಪಿ ಸಿದರು. ಕೆರೆ ಸಮಿತಿ ಸದಸ್ಯರಾದ ಶಿವಕುಮಾರ್‌,, ಮಲ್ಲಿಕಾರ್ಜುನ ಹುದಲಿ ಅನಿಸಿಕೆ ವ್ಯಕ್ತಪಡಿಸಿದರು.

ಒಂದು ಸಾವಿರ ಕೆರೆಗಳಿಗೆ ಕಾಯಕಲ್ಪ
ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ರಾಜ್ಯದಲ್ಲಿ 800 ಕೆರೆಗಳನ್ನು ಪುನಃಶ್ಚೇತನಗೊಳಿಸಿದ್ದು, 2025ರ ಎಪ್ರಿಲ್‌ ಅಂತ್ಯದೊಳಗೆ ಇನ್ನೂ 200 ಕೆರೆಗಳಿಗೆ ಕಾಯಕಲ್ಪ ನೀಡಲಾಗುವುದು. ಈ ಮೂಲಕ 1000 ಕೆರೆಯ ಯೋಜನೆ ಗುರಿ ಹೊಂದಲಾಗಿದೆ ಎಂದು ಡಾ| ಹೆಗ್ಗಡೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next