Advertisement
1 ಬ್ಯಾಂಗಲ್ ಬ್ರೇಸ್ಲೆಟ್ ಇವುಗಳು ಒಂದು ಅಥವಾ ಹೆಚ್ಚು ಬಳೆಗಳನ್ನು ಜೋಡಿಸಿದಂತಿರುವ ಮಾದರಿಯ ಬ್ರೇಸ್ಲೆಟುಗಳು. ಇವುಗಳಿಗೆ ಓಪನ್ ಎಂಡ್ ಇರುವುದಿಲ್ಲ. ಬಳೆಯಂತೆಯೇ ಧರಿಸುವುದರಿಂದ ಇವಕ್ಕೆ ಬ್ಯಾಂಗಲ್ ಬ್ರೇಸ್ಲೆಟುಗಳೆಂದು ಕರೆಯಲಾಗುತ್ತದೆ. ಬಹಳಷ್ಟು ಬಣ್ಣಗಳಿಂದ ತಯಾರಾದ ಇವುಗಳಲ್ಲಿ ಹಲವು ಮಾದರಿಗಳು ಲಭಿಸುತ್ತವೆ. ಸಾಮಾನ್ಯ ದಿರಿಸುಗಳಿಗೆ ಉತ್ತಮವಾಗಿ ಹೊಂದುತ್ತವೆ. ಆದ್ದರಿಂದ ಕ್ಯಾಶುವಲ್‌ವೇರ್ ಆಗಿ ಬಳಸಬಹುದು ಅಲ್ಲದೆ ವಯಸ್ಸಿನ ಮಿತಿಯಿರುವುದಿಲ್ಲ. ಹಲವು ಬಗೆಯ ವಸ್ತುಗಳಿಂದ ತಯಾರಾದ ಬ್ಯಾಂಗಲ್ ಬ್ರೇಸ್ಲೆಟುಗಳು ದೊರೆಯುತ್ತವೆ.
ಬ್ಯಾಂಗಲ್ ಬ್ರೇಸ್ಲೆಟುಗಳಿಗೆ ಹೋಲುವಂತಿರುತ್ತವೆ. ಆದರೆ ಇವುಗಳು ಓಪನ್ ಎಂಡೆಡ್ ಆಗಿರುತ್ತವೆ. ಇವುಗಳು ರಿಸ್ಟಿನ ಮುಕ್ಕಾಲು ಭಾಗವನ್ನಷ್ಟೇ ಆವರಿಸುವಂತಿರುತ್ತವೆ. ಇವುಗಳಲ್ಲಿ ಮೆಟಲ್ ಕಪ್‌ಗ್ಳು ಅತ್ಯಂತ ಟ್ರೆಂಡಿಯಾಗಿರುವ ಬಗೆಯಾಗಿದೆ. ಇವುಗಳು ಬೇರೆ ಬ್ರೇಸ್ಲೆಟುಗಳಂತೆ ಮೂವ್ ಆಗುವುದಿಲ್ಲ ಬದಲು ರಿಸ್ಟಿನಲ್ಲಿಯೇ ಫಿಕ್ಸ್ ಆದಂತಿರುವುವು. ಈ ಬಗೆಯ ಆಭರಣಗಳು ಬಹಳ ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿದ್ದವು ಎನ್ನಲಾಗುತ್ತದೆ. ಇವುಗಳು ತಮ್ಮ ಲುಕ್ಕಿನಿಂದ ಬಹಳ ಸ್ಟೈಲಿಶ್ ಎನಿಸಿಕೊಳ್ಳುತ್ತಿವೆ. ಹೆಚ್ಚಾಗಿ ಮಾಡರ್ನ್ ಡ್ರೆಸ್ಸುಗಳಿಗೆ ಬಹಳ ಚೆನ್ನಾಗಿ ಹೊಂದುತ್ತವೆ. 3 ಲೆದರ್ ಬ್ರೇಸ್ಲೆಟುಗಳು
ಇವುಗಳು ಕಪ್ ಬ್ರೇಸ್ಲೆಟ್ಟುಗಳಾಗಿವೆ. ಮೆಟಲ್‌ಗಳಿಂದ ಅಲರ್ಜಿಯಿರುವಂತವರು ಇವುಗಳನ್ನು ಬಳಸಿ ಸ್ಟೈಲಿಶ್ ಆಗಿ ಕಾಣಬಹುದು. ಇವುಗಳು ಲೆದರಿನಿಂದ ತಯಾರಿಸಲಾಗಿದ್ದು ಅವುಗಳಿಗೆ ಬೀಡುÕಗಳನ್ನು ಜಡಿಸಲಾಗಿರುತ್ತವೆ. ಇವುಗಳು ಹೆಚ್ಚಾಗಿ ಯುವಕ ಯುವತಿಯರಿಗೆ ಧರಿಸಲು ಸೂಕ್ತವಾದುದು.
4 ಬೀಡೆಡ್ ಬ್ರೇಸ್ಲೆಟುಗಳು
ಇವುಗಳು ಕಡಿಮೆ ಬೆಲೆಯಲ್ಲಿ ದೊರೆಯುವಂತಹ ಬ್ರೇಸ್ಲೆಟ್ಟುಗಳು. ಹರಳುಗಳು, ವುಡನ್ ಬೀಡುÕಗಳು, ಅಥವ ಪ್ಲಾಸ್ಟಿಕ್ ಬೀಡುÕಗಳನ್ನು ಎಲ್ಯಾಸ್ಟಿಕ್ ಅಥವ ಸಾಧಾರಣ ದಾರಕ್ಕೆ ಪೋಣಿಸಿ ತಯಾರಿಸಲಾದ ಬಗೆಯಾಗಿದೆ. ಇವುಗಳನ್ನು ಬಹಳ ಸುಲಭವಾಗಿ ನಾವೇ ತಯಾರಿಸಿಕೊಳ್ಳಬಹುದು.
Related Articles
ಮೆಟಲ್ ಚೈನುಗಳಿಗೆ ಅಥವಾ ಹರಳುಗಳನ್ನು ಜೋಡಿಸಿ ತಯಾರಿಸಿದ ಬ್ರೇಸ್ಲೆಟುಗಳು. ಇವುಗಳು ಕೇವಲ ಆರ್ಟಿಫಿಷಿಯಲ… ಅಷ್ಟೇ ಅಲ್ಲದೆ ಗೋಲ್ಡ… ಮತ್ತು ಸಿಲ್ವರುಗಳಲ್ಲಿಯೂ ದೊರೆಯುತ್ತವೆ. ಹವಳಗಳು, ಮುತ್ತುಗಳು, ವಜ್ರಗಳಿಂದ ತಯಾರಿಸಲಾದ ಆಭರಣಗಳೂ ದೊರೆಯುತ್ತವೆ.
Advertisement
6 ಸ್ಟ್ರೆಚ್ ಬ್ರೇಸ್ಲೆಟುಗಳು ಹೆಸರೇ ಹೇಳುವಂತೆ ಇವು ಎಲಾಸ್ಟಿಕ್ ಬ್ರೇಸ್ಲೆಟುಗಳು. ಧರಿಸಲು ಆರಾಮದಾಯಕ ಮತ್ತು ಟ್ರೆಂಡಿ ಲುಕ್ಕನ್ನು ಕೊಡುತ್ತವೆ. ಇವುಗಳು ಕೇವಲ ಮಾಡರ್ನ್ ಡ್ರೆಸ್ಸುಗಳಿಗಷ್ಟೇ ಅಲ್ಲದೆ ಫ್ಯೂಷನ್‌ವೇರ್ ಗಳಿಗೂ ಧರಿಸಬಹುದಾಗಿದೆ. ಬೇಕಾದ ಬಣ್ಣಗಳಲ್ಲಿ ದೊರೆಯುತ್ತವೆ. 7 ಐಡೆಂಟಿಫಿಕೇಶನ್ ಬ್ರೇಸ್ಲೆಟುಗಳು
ಇವುಗಳು ಲಿಂಕ ಬ್ರೇಸ್ಲೆಟುಗಳಾಗಿದ್ದು ಹೆಸರುಗಳು, ಅಕ್ಷರಗಳು ಅಥವ ಸಂದೇಶಗಳನ್ನು ಬರೆದ ಪ್ಲೇಟುಗಳನ್ನು ಜೋಡಿಸಿದಂತಿರುತ್ತವೆ. ಆದ್ದರಿಂದಲೇ ಇವುಗಳನ್ನು ಐಡೆಂಡಿಟಿಫಿಕೇಷನ್ ಬ್ರೇಸ್ಲೆಟ್ಟುಗಳು ಎಂದು ಕರೆಯಲಾಗುತ್ತದೆ. ಇವುಗಳು ಮಹಿಳೆಯರು ಹಾಗೂ ಪುರುಷರೂ ಬಳಸುವಂತದ್ದು. 8 ಮಲ್ಟಿ ಸ್ಟ್ರಾಡ್ ಬ್ರೇಸ್ಲೆಟುಗಳು
ಇವುಗಳು ಟ್ವಿಸ್ಟೆಡ್ ಬ್ಯಾಂಗಲ್ ಬ್ರೇಸ್ಲೆಟ್ಟುಗಳಾಗಿವೆ. ಹಲವು ಬಳೆಗಳನ್ನು ತಿರುಚಿಟ್ಟಂತಹ ಮಾದರಿಯಾಗಿದ್ದು ಬಹಳ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿರುತ್ತವೆ. 9 ಪರ್ಲ್ ಬ್ರೇಸ್ಲೆಟುಗಳು
ಟ್ರೆಡಿಶನಲ್ ಆಭರಣಗಳನ್ನು ಇಷ್ಟಪಡುವವರನ್ನು ಈ ಬಗೆಯ ಪರ್ಲ್ ಬ್ರೇಸ್ಲೆಟುಗಳು ತಮ್ಮತ್ತ ಆಕರ್ಷಿಸುತ್ತವೆ. ಇವುಗಳಲ್ಲಿ ಶುದ್ಧ ಮುತ್ತುಗಳನ್ನು ಬಂಗಾರದಲ್ಲಿ ಪೋಣಿಸಿದ ಬಗೆಗಳಿಂದ ಇಮಿಟೇಷನ್ ಮುತ್ತುಗಳಿಂದ ತಯಾರಾದ ಬ್ರೇಸ್ಲೆಟುಗಳೂ ಜೆಮ… ಸ್ಟೋನ್ ಬ್ರೇಸ್ಲೇಟುಗಳೂ ದೊರೆಯುತ್ತವೆ. ಇವು ಎಲ್ಲಾ ಬಗೆಯ ದಿರಿಸುಗಳಿಗೂ ಸೂಕ್ತವೆನಿಸುತ್ತವೆ. 10 ಜೆಮ್ ಸ್ಟೋನ್ ಬ್ರೇಸ್ಲೆಟುಗಳು
ಇವು ಬಹಳ ರಿಚ್ ಲುಕ್ಕನ್ನು ನೀಡುವಂತಹ ಬ್ರೇಸ್ಲೆಟುಗಳಾಗಿವೆ. ಇವುಗಳು ವಜ್ರಗಳು, ದುಬಾರಿ ಹರಳುಗಳು, ಹವಳಗಳನ್ನು ಜೋಡಿಸಿ ತಯಾರಿಸಿದವುಗಳಾಗಿರುತ್ತವೆ. ಇವುಗಳು ದುಬಾರಿ ಬೆಲೆಯದಾಗಿರುತ್ತವೆ. ಈ ಬಗೆಯ ಇಮಿಟೇಷನ್ ಬ್ರೇಸ್ಲೆಟುಗಳೂ ದೊರೆಯುತ್ತವೆ. ಬೇಕಾದ ಬಣ್ಣಗಳಲ್ಲಿ ದೊರೆಯುವುದರಿಂದ ಡ್ರೆಸ್‌ಗಳಿಗೆ ಮ್ಯಾಚಿಂಗ್ ಮಾಡಿ ಧರಿಸಬಹುದು. 11 ಟರ್ಕೋಸ್ ಬ್ರೇಸ್ಲೆಟುಗಳು
ಇವುಗಳು ಪುರುಷರು ಧರಿಸುವ ಬ್ರೇಸ್ಲೆಟುಗಳಾಗಿದ್ದು ಸಾಮಾನ್ಯವಾಗಿ ವೈಟ್ ಮೆಟಲ್ಲುಗಳಿಂದ ತಯಾರಾದ ಚೈನ್ ಬ್ರೇಸ್ಲೆಟುಗಳಾಗಿರುತ್ತವೆ. ಇವಗಳಿಗೆ ಸಿಂಗಲ್ ಸ್ಟೋನ್ ಅನ್ನ ಜೋಡಿಸಲಾಗಿರುತ್ತದೆ. 12 ಫ್ರೆಂಡ್‌ಶಿಪ್ ಬ್ರೇಸ್ಲೆಟುಗಳು
ನೈಲಾನ್ ಥೆಡ್‌ಗಳಿಂದ ತಯಾರಾಗುವ ಇವು ಬಗೆ ಬಗೆಗಳಿಂದ ಅಲಂಕಾರಗೊಂಡು ಆಕರ್ಷಕವಾದ ಬ್ರೇಸ್ಲೆಟಾಗಿ ಸಿದ್ಧಗೊಳ್ಳುತ್ತವೆ. ಇವುಗಳನ್ನು ಸಾಮಾನ್ಯವಾಗಿ ಫ್ರೆಂಡ್‌ಶಿಪ್ ಡೇ ಎಂದು ಆಚರಿಸಲ್ಪಡುವ ದಿನದಂದು ಯುವಕ-ಯುವತಿಯರು ಬದಲಾಯಿಸಿಕೊಳ್ಳುವುದು ಸದ್ಯದ ಟ್ರೆಂಡಿ ಫ್ಯಾಷನ್ ಆಗಿ ಪರಿಣಮಿಸಿದೆ. ಆದ್ದರಿಂದಲೇ ಇವುಗಳಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಅಥವ ಫ್ರೆಂಡ್‌ಶಿಪ್ ಬ್ರೇಸ್ಲೇಟ್ ಎಂದು ಕರೆಯಲಾಗುತ್ತದೆ. 13 ಲಿಕ್ವಿಡ್ ಸಿಲ್ವರ್ ಬ್ರೇಸ್ಲೆಟುಗಳು
ಇವುಗಳ ಲಿಕ್ವಿಡ್ ಸಿಲ್ವರ್ ಬೀಡುಗಳಿಂದ ತಯಾರಿಸಿದ ಹಲವು ಥೆÅಡ್‌ಗಳನ್ನು ಜೋಡಿಸಿ ತುದಿಗಳಲ್ಲಿ ಕೋನ್ ಆಕಾರದ ಕ್ಯಾಪಿನೊಂದಿಗೆ ಕೊನೆಗೊಳ್ಳುತ್ತದೆ. 14 ರಿಸ್ಟ್ ವಾಚ್ ಬ್ರೇಸ್ಲೆಟುಗಳು
ಬ್ಯಾಂಗಲ್ ಬ್ರೇಸ್ಲೆಟ್ಟುಗಳ ಮಾದರಿಗೆ ಹೋಲುವ ಇವುಗಳಿಗೆ ವಾಚನ್ನು ಜೋಡಿಸಲಾಗಿರುತ್ತವೆ. ಇವುಗಳು ಬಹಳ ಸ್ಟೈಲಿಶ್ ಲುಕ್ಕನ್ನು ಕೊಡುವುದಲ್ಲದೆ ಟು-ಇನ್-ವನ್ ಆಗಿ ವಾಚ್ ಮತ್ತು ಬಳೆಗಳೆರಡರ ಕೆಲಸವನ್ನೂ ಮಾಡುತ್ತದೆ. ಬಣ್ಣಗಳಲ್ಲಿ, ಮಾದರಿಗಳಲ್ಲಿ ಆಯ್ಕೆಗೆ ಬಹಳಷ್ಟು ಅವಕಾಶಗಳಿವೆ. ಎಲ್ಲಾ ಬಗೆಯ ದಿರಿಸುಗಳಿಗೂ ಸರಿಹೊಂದುತ್ತವೆ. ಇನ್ನೂ ಹಲವಾರ ಬಗೆಯ ಬ್ರೇಸ್ಲೆಟುಗಳು ದೊರೆಯುತ್ತವೆ. ವಿಶೇಷ ಕಾರಣಗಳಿಗಾಗಿ ಧರಿಸುವ ಬ್ರೇಸ್ಲೆಟ್ಟುಗಳೂ ದೊರೆಯುತ್ತವೆ. ಉದಾಹರಣೆಗೆ ಸ್ಫಟಿಕದ ಬ್ರೇಸ್ಲೆಟುಗಳನ್ನ ಧರಿಸುವುದರಿಂದ ಮನಸ್ಸು ಶಾಂತತೆಯಿಂದ ಕೂಡಿರುತ್ತದೆ, ಮ್ಯಾಗ್ನೆಟಿಕ್ ಬ್ರೇಸ್ಲೆಟುಗಳನ್ನು ಕೆಲವು ಬಗೆಯ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಎನ್ನಲಾಗುತ್ತದೆ. ಹಾಗೆ ಬ್ರೇಸ್ಲೆಟುಗಳು ಕೇವಲ ಬಳೆಯ ಪರ್ಯಾಯ ವ್ಯವಸ್ಥೆಯಷ್ಟೇ ಆಗಿರದೆ ಫ್ಯಾಷನ್ ಸ್ಟೇಟೆ¾ಂಟನ್ನು ಸೃಷ್ಟಿಸುವಂಥ ಆಭರಣವಾಗಿ ಪರಿಣಮಿಸಿದೆ. ನೀವೂ ಕೂಡ ಮೇಲಿನ ಕೆಲವು ಬಗೆಗಳನ್ನು ಪ್ರಯೋಗಿಸಿ ಟ್ರೆಂಡಿ ಲುಕ್ಕನ್ನು ಪಡೆಯಬಹುದಾಗಿದೆ. – ಪ್ರಭಾ ಭಟ್