Advertisement

ಕೊನೇ ಹಂತದಲ್ಲಿ ಕೈನಾಯಕರ ಪ್ರಚಾರ

11:05 AM May 03, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿ ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್‌, ಮತದಾನದ ದಿನಾಂಕ ಹತ್ತಿರ ಇರುವಾಗ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮೂಲಕ ನಗರದಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ.

Advertisement

ಈಗಾಗಲೇ ಎರಡು ಬಾರಿ ರಾಜ್ಯ ಪ್ರವಾಸ ಮಾಡಿರುವ ರಾಹುಲ್‌ ಗಾಂಧಿ ಮೇ 7 ರಿಂದ 9 ರ ವರೆಗೆ ರಾಜಧಾನಿಯಲ್ಲಿಯೇ ಠಿಕಾಣಿ ಹೂಡಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದುವರೆಗೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿಲ್ಲ. ಹೀಗಾಗಿ ಪಕ್ಷದ ಅಭ್ಯರ್ಥಿಗಳು ನಾಯಕರ ಬರುವಿಕೆಗೆ ಕಾಯುತ್ತಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತ್ರ ಇತರ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದು ಉಳಿದ ರಾಜ್ಯ ನಾಯಕರಾರು ನಗರದಲ್ಲಿ ಪ್ರಚಾರ ಕೈಗೊಳ್ಳದಿರುವುದು ಅಭ್ಯರ್ಥಿಗಳು ನಾಯಕರ ನಿರೀಕ್ಷೆಯಲ್ಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಕೂಡ ತಮ್ಮ ಕ್ಷೇತ್ರ ಬಿಟ್ಟು ಬೇರೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿಲ್ಲ. ಹೊರ ರಾಜ್ಯದ ನಾಯಕರುಗಳು ಕೂಡ ಇನ್ನೂ ಬೆಂಗಳೂರಿನಲ್ಲಿ ಪ್ರಚಾರ ಕೈಗೊಂಡಿಲ್ಲ. ಬಹುತೇಕ ಪಕ್ಷದ ನಾಯಕರು ತಮ್ಮ ಕ್ಷೇತ್ರಗಳ ಕಡೆಗೆ ಹೆಚ್ಚಿನ ಗಮನ ಹರಿಸಿರುವುದರಿಂದ ರಾಜಧಾನಿಯ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಪಕ್ಷದ ನಾಯಕರು ಸಿಗದಂತಾಗಿದೆ.

ಚಾಂಡಿ ಪ್ರಚಾರ: ಕೇರಳದ ಮಾಜಿ ಸಿಎಂ ಓಮನ್‌ ಚಾಂಡಿ ಮೇ 4 ಮತ್ತು 5 ರಂದು ನಗರದ ಅಭ್ಯರ್ಥಿ ಗಳ ಪರ
ಪ್ರಚಾರ ನಡೆಸಲಿದ್ದಾರೆ. ಮಲಯಾಳಿ ಸಮುದಾಯ ಹೆಚ್ಚಿರುವ ಕ್ಷೇತ್ರಗಳಾದ ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಶಾಂತಿನಗರ, ಸಿ.ವಿ. ರಾಮನ್‌ ನಗರ, ಚಾಮರಾಜ್‌ ಪೇಟೆ, ಶಿವಾಜಿನಗರ, ಬ್ಯಾಟರಾಯನಪುರ, ಕೆ.ಆರ್‌.ಪುರ,
ಬಿಟಿಎಂ ಲೇಔಟ್‌ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next