ಕುಟೀರ ಎಂದ ಕೂಡಲೇ ಋಷಿ ಮುನಿಗಳ ಪರ್ಣಕುಟೀರ ನೆನಪಾಯ್ತಾ? ಆದರೆ ಇದನ್ನು ಪರ್ಣಕುಟೀರ ಅನ್ನುವುದಕ್ಕಿಂತ “ವರ್ಣ ಕುಟೀರ’ ಅಂದರೆ ಹೆಚ್ಚು ಸೂಕ್ತ. ಯಾಕಂದ್ರೆ, ಈ ಕುಟೀರದಲ್ಲಿ ರಂಗು ರಂಗಿನ, ಚಿತ್ತಾಕರ್ಷಕ ಕರಕುಶಲ ವಸ್ತುಗಳು ಪ್ರದರ್ಶನಕ್ಕಿವೆ. ಕರ್ನಾಟಕ ಕರಕುಶಲ ಮಂಡಳಿಯ ವತಿಯಿಂದ “ಕುಟೀರ-2018′ ನಡೆಯುತ್ತಿದ್ದು, ಈ ಬಾರಿಯ ಉತ್ಸವದಲ್ಲಿ ದೇಶಾದ್ಯಂತದ 35 ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಉತ್ತಮ ಗುಣಮಟ್ಟದ, ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಯ ಉತ್ಪನ್ನಗಳು, ಆಕ್ಸೆಸರಿಗಳು ಇಲ್ಲಿ ದೊರೆಯಲಿವೆ.
ಆಂಧ್ರದ ಚರ್ಮದ ಬೊಂಬೆಗಳು, ರಾಜಸ್ಥಾನದ ಚಿತ್ರಕಲೆ, ಮಣಿಪುರದ ಕಪ್ಪು ಮಣ್ಣಿನ ಮಡಕೆಗಳು ಮತ್ತು ಬುಟ್ಟಿಗಳು, ನಾಗಾಲ್ಯಾಂಡ್‌ನ ಟ್ರೆ„ಬಲ್ ಜ್ಯುವೆಲ್ಲರಿಗಳು, ಮಣಿಪುರದ ಕೈಮಗ್ಗ ವಸ್ತ್ರಗಳು, ಉತ್ತರ ಪ್ರದೇಶದ ಕಾಪೆìಟ್‌ಗಳು, ಕಲಂಕಾರಿ ಅಜ್ರಕ್ ಮತ್ತು ಬಾಂದಿನಿ ವಸ್ತ್ರಗಳಷ್ಟೇ ಅಲ್ಲದೆ, ಟೆರ್ರಾಕೋಟಾ, ಸೆರಾಮಿಕ್ ಚಿತ್ರಗಳು ಕೂಡ ಪ್ರದರ್ಶನದಲ್ಲಿ ಇರಲಿವೆ.
ಎಲ್ಲಿ?: ಗ್ಯಾಲರಿ 3-4, ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಯಾವಾಗ?: ಆ. 4-10 ಬೆಳಗ್ಗೆ 10.30-7.30