Advertisement
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್ ಕೆ. ಅವರು ಎಕ್ಸ್ ಪೋವನ್ನು ಉದ್ಘಾಟಿಸಿ, ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳು, ಬಟ್ಟೆ ಸಹಿತ ವಿವಿಧ ವಸ್ತುಗಳು ಒಂದೇ ಸೂರಿನಡಿ ಲಭ್ಯವಿವೆ. ಮಂಗಳೂರಿನ ಜನರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಯಾ ರಾಜ್ಯಗಳಿಗೆ ತೆರಳುವ ಬದಲು ನಾವು ಇರುವಲ್ಲಿಗೇ ಎಕ್ಸ್ ಪೋ ಮೂಲಕ ವಸ್ತುಗಳು ಬಂದಿವೆ ಎಂದರು.
ದೇಶದ ವಿವಿಧ ರಾಜ್ಯಗಳ 50 ಸಾವಿರಕ್ಕೂ ಹೆಚ್ಚಿನ ಕುಶಲ ಕರ್ಮಿಗಳು ಹಾಗೂ ನೇಕಾರರು ತಯಾರಿಸಿರುವ ಕರಕುಶಲ ವಸ್ತುಗಳು ಎಕ್ಸ್‌ಪೋದಲ್ಲಿ ಲಭ್ಯವಿವೆ. 100ಕ್ಕೂ ಹೆಚ್ಚು ಮಳಿಗೆಗಳಿದ್ದು, ಲಕ್ನೋದ ಸಂಗೀತಾ ಕೈಮಗ್ಗ ಮತ್ತು ಕೈಮಗ್ಗ ಕಲ್ಯಾಣ ಕೇಂದ್ರದ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಉಚಿತ ಪ್ರವೇಶವಿದ್ದು, ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ. ಬೆಳಗ್ಗೆ 10.30ರಿಂದ ರಾತ್ರಿ 9 ಗಂಟೆಯ ವರೆಗೆ 30 ದಿನಗಳ ಕಾಲ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Related Articles
ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಕಾಶ್ಮೀರ, ಶಿಮ್ಲಾ, ಪಂಜಾಬ್, ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಕರಕುಶಲ ವಸ್ತುಗಳು ಪ್ರದರ್ಶನದಲ್ಲಿ ಸಮಂಜಸ ಬೆಲೆಗೆ ಲಭ್ಯವಿವೆ.
Advertisement
ಕೈಯಿಂದ ಮಾಡಿದ ಗಿಫ್ಟ್ ಐಟಮ್ಸ್, ಆಭರಣಗಳು, ಟೆರಾ ಕೋಟಾ ಗೃಹಾಲಂಕಾರ, ಖುರ್ಜಾ ಕ್ರಾಕರಿ, ಡಿಸೈನರ್ ಬಟ್ಟೆಗಳು, ವಾರಾಣಸಿ ಸೀರೆ, ಕೋಲ್ಕತಾ, ಅಸ್ಸಾಮಿ ಬಟ್ಟೆಗಳು, ಪಂಜಾಬಿ-ರಾಜಸ್ಥಾನಿ ಚಪ್ಪಲ್, ಪಾಣಿಪತ್ ಸೋಫಾ ಕವರ್, ಕುಶನ್ ಕವರ್, ಬೆಡ್ ಕವರ್, ಕಾಶ್ಮೀರಿ ಶಾಲುಗಳು, ಸೂಟ್‌ಗಳು, ಖಾದಿ ಶರ್ಟ್, ಮಕ್ಕಳ ಆಟಿಕೆಗಳು, ಚರ್ಮದ ವಸ್ತುಗಳು, ಮರದ ಕೆತ್ತನೆ, ಆಯು ರ್ವೇದ ಉತ್ಪನ್ನಗಳು, ಉಪ್ಪಿನಕಾಯಿ, ಹಪ್ಪಳ, ಚಟ್ನಿ, ಹೇರ್ ಆಯಿಲ್ ಮುಂತಾದ ಉತ್ಪನಗಳು ಲಭ್ಯವಿವೆ.