ಹುಬ್ಬಳ್ಳಿ: ಪ್ರಚಾರ ಸಂದರ್ಭದಲ್ಲಿ ಜನರ ನಿರೀಕ್ಷಿತ ಬೆಂಬಲ ಸಿಗದೆ ಕಾಂಗ್ರೆಸ್ ಹೊರ ಹೊಡೆತದಿಂದ ತತ್ತರಿಸಿದ್ದರೆ, ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರುತ್ತಿರುವುದರಿಂದ ಒಳಹೊಡೆತದಿಂದ ಕೂಡ ನಲುಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಚುನಾವಣಾ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ಭರವಸೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರವನ್ನು ವಿಜಯ ಸಂಕೇಶ್ವರ ಛಿದ್ರ ಮಾಡಿದ್ದರು.
ಅವರು 3 ಬಾರಿ ಸಂಸದರಾದರು. ನಂತರ ಪ್ರಹ್ಲಾದ ಜೋಶಿ 3 ಬಾರಿ ಸಂಸದರಾದರು. ಮತ್ತೂಂದು ಬಾರಿ ಪ್ರಹ್ಲಾದ ಜೋಶಿ ಗೆಲ್ಲುವುದರಲ್ಲಿ ಸಂಶಯವಿಲ್ಲ. ನಾವೆಲ್ಲ ಪ್ರಚಂಡ ಬಹುಮತದಿಂದ ಅವರನ್ನು ಗೆಲ್ಲಿಸಲು ಯತ್ನಿಸಬೇಕು ಎಂದು ಹೇಳಿದರು.
ವಿನಯ ಕುಲಕರ್ಣಿ ಟಿಕೆಟ್ ಪಡೆಯುವುದರಲ್ಲಿಯೇ ಹೈರಾಣಾಗಿದ್ದಾರೆ. ಇಷ್ಟು ಕಷ್ಟ ಪಟ್ಟು ಯಾಕೆ ಟಿಕೆಟ್ ಪಡೆದುಕೊಂಡರೋ
ಗೊತ್ತಿಲ್ಲ. ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ವಿನಯ ಕುಲಕರ್ಣಿ ಮತ್ತೂಮ್ಮೆ ಸೋಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಮಾಜಿ ಸಂಸದ ವಿಜಯ ಸಂಕೇಶ್ವರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 58 ವರ್ಷಗಳ ಕಾಲ ನಾವು ದೇಶವನ್ನು ಅಯೋಗ್ಯರ ಕೈಗೆ ನೀಡಿದ್ದೇವೆ. ಅವರು ಕೇವಲ ಅಯೋಗ್ಯರಷ್ಟೇ ಅಲ್ಲ, ದೇಶದ್ರೋಹಿಗಳು ಕೂಡ ಆಗಿದ್ದಾರೆ ಎಂದು ಹೇಳಿದರು.
ನರೇಂದ್ರ ಮೋದಿ ಜನರ ಮನಗೆದ್ದ ನಿಜವಾದ ಚೌಕಿದಾರ. ಮತ್ತೂಮ್ಮೆ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಕೇವಲ ದೇಶವಾಸಿಗಳಷ್ಟೇ ಅಲ್ಲ, ವಿದೇಶದಲ್ಲಿಯೂ ಅನೇಕರು ಅಪೇಕ್ಷಿಸಿರುವುದು ಮೋದಿಯ ತಾಕತ್ತನ್ನು ತೋರಿಸುತ್ತದೆ. ಸಂಸದ ಪ್ರಹ್ಲಾದ ಜೋಶಿ 15 ವರ್ಷಗಳಿಂದ ಉತ್ತಮ ಕಾರ್ಯ ಮಾಡಿದ್ದಾರೆ. ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳನ್ನು
ಬಳಕೆ ಮಾಡಿಕೊಂಡು ಮತದಾನ ಮಾಡುವಂತೆ ಪ್ರಚಾರ ಮಾಡಬೇಕು ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಪ್ರಸ್ತುತ ಲೋಕಸಭಾ ಚುನಾವಣೆ ರಾಷ್ಟ್ರ ಭಕ್ತರು ಹಾಗೂ ರಾಷ್ಟ್ರ ವಿರೋಧಿಗಳ ನಡುವಿನ ಕದನವಾಗಿದ್ದು, ಇದರಲ್ಲಿ ರಾಷ್ಟ್ರ ಪ್ರೇಮಿಗಳನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಎಸ್.ಐ. ಚಿಕ್ಕನಗೌಡರ, ಅಶೋಕ ಕಾಟವೆ,
ವೀರಭದ್ರಪ್ಪ ಹಾಲಹರವಿ, ಮಾ.ನಾಗರಾಜ, ನಾಗೇಶ ಕಲಬುರ್ಗಿ ಮೊದಲಾದವರಿದ್ದರು.
ಕ್ಷೇತ್ರದ ಪ್ರಗತಿ ಮುಂದಿಟ್ಟು ಮತಯಾಚನೆ: ಜೋಶಿ
ಹುಬ್ಬಳ್ಳಿ: ಐದು ವರ್ಷಗಳ ಕ್ಷೇತ್ರದ ಪ್ರಗತಿ ವರದಿ ಜನರ ಮುಂದಿಟ್ಟಿದ್ದು, ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಲೋಕಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ಜನರು ಅಧಿಕಾರ ನೀಡುವ ವಿಶ್ವಾಸವಿದೆ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಮಾಡಿದ ಅಭಿವೃದ್ಧಿ ಕಾರ್ಯಗಳೊಂದಿಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕಾರ್ಯಗಳನ್ನು ಮೆಚ್ಚಿ ಜನರು ಬಿಜೆಪಿಗೆ ಮತ ನೀಡುವುದು ನಿಶ್ಚಿತ. ನಾನು ಮಾಡಿದ ಅಭಿವೃದ್ಧಿ
ಕಾರ್ಯಗಳನ್ನು ಹೇಳಲು ನಾನು ಸಿದ್ಧನಾಗಿದ್ದೇನೆ.
ಅದರಂತೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸಚಿವರಾಗಿದ್ದಾಗ ಮಾಡಿದ ಕಾರ್ಯಗಳ ಬಗ್ಗೆ ಮೊದಲು ತಿಳಿಸಲಿ. ವಿನಯ ಕುಲಕರ್ಣಿ ಸಚಿವರಾಗಿ ಮಾಡಿದ ಕಾರ್ಯಗಳಿಗೆ 2018ರ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಿದ್ದಾರೆ
ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ರಾಜ್ಯದೆಲ್ಲೆಡೆ ಬಿಜೆಪಿ ಪರ ಅಲೆಯಿದ್ದು, 22 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತ. ನರೇಂದ್ರ ಮೋದಿ ಅಭಿವೃದ್ಧಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದು ಹೇಳಿದರು.
ಜನರು ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ನಿಶ್ಚಯಿಸಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವಂತೆ ಮಾಡಬೇಕು. ಶೇ. 90ಕ್ಕಿಂತ ಹೆಚ್ಚು ಮತದಾನವಾಗಬೇಕು. ಆಗ ಪ್ರಹ್ಲಾದ ಜೋಶಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು. ಮಾಜಿ ಸಂಸದ ವಿಜಯ ಸಂಕೇಶ್ವರ, ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ
ಮುನೇನಕೊಪ್ಪ, ಮಾಜಿ ಶಾಸಕರಾದ ಅಶೋಕ ಕಾಟವೆ, ಎಸ್.ಐ.ಚಿಕ್ಕನಗೌಡರ, ಮುಖಂಡರಾದ ನಾಗೇಶ ಕುಲಬುರ್ಗಿ ಇದ್ದರು.
ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು. ಒಂದೆಡೆ ಭಾರತ್ ತೇರೆ ತುಕಡೆ ಹೋಂಗೆ ಎಂದು ಹೇಳಿಕೆ ನೀಡಿದ ಉಮರ್ ಖಲೀದ್‌ನನ್ನು ಕರೆಸಿ ಧಾರವಾಡದಲ್ಲಿ ಕಾಂಗ್ರೆಸ್ ಪರ ಭಾಷಣ ಮಾಡಿಸಲಾಗುತ್ತದೆ. ಇನ್ನೊಂದೆಡೆ ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರಿಗೆ ಕೇಸರಿ ಪೇಟಾ ಹಾಗೂ ಶಾಲು ಹಾಕಿಸಿ ಹಿಂದೂಗಳ ಮತಯಾಚನೆ ಮಾಡಲಾಗುತ್ತದೆ.
ಪ್ರಹ್ಲಾದ ಜೊಶಿ, ಬಿಜೆಪಿ ಅಭ್ಯರ್ಥಿ
ಮಲ್ಲನಗೌಡ ರಾಜೀನಾಮೆ
ಧಾರವಾಡ: ಭಾರತೀಯ ಜನತಾ ಪಾರ್ಟಿಯ ಗ್ರಾಮಾಂತರ ಜಿಲ್ಲಾ ಘಟಕದ ಖಜಾಂಚಿ ಮಲ್ಲನಗೌಡ ಪಾಟೀಲ ಪಕ್ಷಕ್ಕೆ
ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಈರಣ್ಣ ಜಡಿ ಅವರಿಗೆ ಗುರುವಾರ ಪಾಟೀಲ ತಮ್ಮ
ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಧಾರವಾಡ ತಾಲೂಕಿನ ನಿಗದಿ ಜಿಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಲ್ಲನಗೌಡ ಪಾಟೀಲ ಇದೀಗ ಬಿಜೆಪಿಯಿಂದ ಹೊರಬಂದಿದ್ದು, ಶೀಘ್ರವೇ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಿಂಗಾಯತರನ್ನು ಒಡೆಯಲು ಯತ್ನಿಸಿದ ವಿನಯ ಕುಲಕರ್ಣಿ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ
ಜನರು ತಕ್ಕ ಪಾಠ ಕಲಿಸಿದ್ದಾರೆ. ಈಗ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಅಪ್ರಸ್ತುತ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ.
ವಿಜಯ ಸಂಕೇಶ್ವರ, ಮಾಜಿ ಸಂಸದ
ನಾನು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಖುಷಿ ತಂದಿದೆ. ನನ್ನನ್ನು ಹಾಗೂ ನನ್ನ ಬೆಂಬಲಿಗರನ್ನು ಆತ್ಮೀಯವಾಗಿ ಪಕ್ಷಕ್ಕೆ
ಬರಮಾಡಿಕೊಳ್ಳಲಾಗಿದೆ. ಮೋದಿಯನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ದೇಶದ ಜನರು ಕಾಯುತ್ತಿದ್ದಾರೆ. ಧಾರವಾಡ
ಕ್ಷೇತ್ರದಲ್ಲಿ ಮತ್ತೂಮ್ಮೆ ಕಮಲ ಅರಳುವುದರಲ್ಲಿ ಅನುಮಾನವಿಲ್ಲ.
ಡಾ| ಮಹೇಶ ನಾಲವಾಡ