ಇಟಾನಗರ/ಅಗರ್ತಲಾ: ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಪರಿಣತಿಯನ್ನು ಪಡೆದಿದ್ದರೆ ಸಿಪಿಎಂ ಹಿಂಸೆಯಲ್ಲಿ ಎತ್ತಿದ ಕೈ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಫೆ.18ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ತ್ರಿಪುರಾದಲ್ಲಿ ಗುರುವಾರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ತ್ರಿಪುರಾದಲ್ಲಿ ಅಧಿಕಾರದಲ್ಲಿರುವ ಮಾಣಿಕ್ ಸರ್ಕಾರ್ ನೇತೃತ್ವದ ಸಿಪಿಎಂ ಸರ್ಕಾರ ಚಹಾ ತೋಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿದೆ. ಹೀಗಾಗಿ ಎಡಪಕ್ಷಗಳ ನಾಯಕರಿಗೆ ಕಾರ್ಮಿಕರು ಮತ್ತು ಬಡವರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಅಧಿಕಾರ ಇಲ್ಲ ಎಂದು ಟೀಕಿಸಿದ್ದಾರೆ ಪ್ರಧಾನಿ. ದೇಶಾದ್ಯಂತ ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾಗಿದ್ದರೆ ತ್ರಿಪುರಾದಲ್ಲಿ ಇನ್ನೂ ನಾಲ್ಕನೇ ವೇತನ ಆಯೋಗದ ಶಿಫಾರಸು ಜಾರಿಯಲ್ಲಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಗಣತಂತ್ರವನ್ನು “ಗನ್ ತಂತ್ರವನ್ನಾಗಿ ಮಾರ್ಪಡಿಸಲು ಮುಂದಾ ಗಿದೆ ಎಂದು ಎಂದು ಪ್ರಧಾನಿ ಆರೋಪಿಸಿ ದ್ದಾರೆ. ಸಿಪಿಎಂ ಕಾರ್ಯಕರ್ತರು ಹತ್ತು ಲಕ್ಷ ಕಾರ್ಯ ಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರಧಾನಿ ದೂರಿದ್ದಾರೆ. “ರಸ್ತೆಯಲ್ಲಿನ ಕೆಂಪು ದೀಪ ವಾಹನಗಳನ್ನು ನಿಲ್ಲಿಸುತ್ತದೆ. ಆದರೆ ತ್ರಿಪುರಾದಲ್ಲಿ ಕೆಂಪು ಬಾವುಟ ಇರುವ ಸರ್ಕಾರ ಅಭಿವೃದ್ಧಿಯನ್ನೇ ನಿಲ್ಲಿಸಿದೆ’ ಎಂದರು ನರೇಂದ್ರ ಮೋದಿ. ನವದೆಹಲಿ ಯಲ್ಲಿ ವಿವಿಧ ವಿಚಾರಗಳಿಗಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಎಡಪಕ್ಷಗಳು ಈಶಾನ್ಯ ರಾಜ್ಯದಲ್ಲೇಕೆ ಕುಸ್ತಿ ಮಾಡುತ್ತಿವೆ ಎಂದು ಪ್ರಧಾನಿ ಕಾಲೆಳೆದಿದ್ದಾರೆ.
ಕೇಂದ್ರ ಸರ್ಕಾರ ವಿವಿಧ ಯೋಜನೆಗಳಿಗಾಗಿ ರಾಜ್ಯಕ್ಕೆ ಹಣ ಬಿಡುಗಡೆ ಮಾಡಿತ್ತು. ಪುಟ್ಟ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಗೂ ಶೇ.80ರಷ್ಟು ಹಣವನ್ನು ಕೇಂದ್ರವೇ ನೀಡಿದೆ. ಆದರೆ ಅದನ್ನು ಬಳಕೆ ಮಾಡಿಯೇ ಇಲ್ಲ ಎಂದು ದೂರಿದ್ದಾರೆ. ಹಾಲಿ ಸರ್ಕಾರದಲ್ಲಿರುವ ಪ್ರಮುಖ ಸಚಿವರು ರೋಸ್‌ವ್ಯಾಲಿ ಚಿಟ್‌ಫಂಡ್‌ನಂಥ ಹಗರಣದಲ್ಲಿ ಭಾಗಿಯಾಗಿ ದ್ದಾರೆ ಎಂದರು ಟೀಕಿಸಿದರು ಪ್ರಧಾನಿ.
“ಆಯುಷ್ಮಾನ್ ಭಾರತ’ ಬದಲಾವಣೆ ತರಲಿದೆ
ಇದಕ್ಕೂ ಮೊದಲು ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮ ದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ “ಆಯುಷ್ಮಾನ್ ಭಾರತ’ ಯೋಜನೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ ಎಂದಿದ್ದರು.
ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ವಿಮೆ 10 ಕೋಟಿ ಮಂದಿಗೆ ನೆರವಾಗಲಿದೆ ಎಂದಿದ್ದರು. ಅರುಣಾಚಲ ಪ್ರದೇಶದ ಸಾಂಪ್ರ ದಾಯಿಕ ದಿರಿಸು ಧರಿಸಿ ಪ್ರಧಾನಿ ಭಾಷಣ ಮಾಡಿದ್ದರು.
ದಿನೇಶ್ ನಿರ್ದೇಶಕ: “ಆಯುಷ್ಮಾನ್ ಭಾರತ’ದ ನಿರ್ದೇಶಕರಾಗಿ ದಿನೇಶ್ ಅರೋರಾ (41) ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಅವರು ನೀತಿ ಆಯೋಗದ ಆರೋಗ್ಯ ವಿಭಾಗದ ನಿರ್ದೇಶಕರಾಗಿದ್ದಾರೆ.