Advertisement
ಸಜ್ಜನ ರಾಜಕಾರಣಿಗಳು ಪ್ರತಿನಿಧಿಸಿದ ಕ್ಷೇತ್ರ ಎನ್ನುವುದನ್ನು ಹೊರತುಪಡಿಸಿದರೆ ಇಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಆಗಿಲ್ಲ. ಕ್ಷೇತ್ರದಲ್ಲಿ ಲಿಂಗಾಯತರು, ದಲಿತರು (ಮಾದಿಗರು), ವಾಲ್ಮೀಕಿ, ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೊಲ್ಲ, ಭೋವಿ, ಲಂಬಾಣಿ, ರೆಡ್ಡಿ, ಕುಂಚಿಟಿಗ ಜಾತಿಗಳ ಮತಗಳು ನಿರ್ಣಾಯಕವಾಗಿವೆ.
ಕೋಟೆ ಆಳಿದ ವಾಲ್ಮೀಕಿ ವಂಶಸ್ಥರು ರೂಪಿಸಿರುವ ಮಳೆ ನೀರು ಕೊಯ್ಲು ಅತ್ಯಂತ ವೈಜ್ಞಾನಿಕವಾಗಿದೆ. ಹನಿ ನೀರು ಎಲ್ಲಿಯೂ ಪೋಲಾಗದೆ ಹೊಂಡ, ಪುಷ್ಕರಣಿ, ಬಾವಿ ಭರ್ತಿಯಾದ ತಕ್ಷಣ ಕೆರೆಗಳಿಗೆ ಸೇರುತ್ತದೆ. ನಗರದ ಎಲ್ಲ 35 ವಾರ್ಡ್‌ಗಳಿಗೆ ವಾಣಿವಿಲಾಸ ಸಾಗರ, ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅಲ್ಲಲ್ಲಿ ಕೊಳವೆ ಬಾವಿಗಳನ್ನು ಕೊರೆಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದಿಲ್ಲ.ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಟೆಲ್‌ಗಳಿದ್ದು ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ.
Related Articles
ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಸಮಸ್ಯೆ ಇಲ್ಲ. ಆದರೆ ಜಿಲ್ಲಾ ಕೇಂದ್ರವಾಗಿರುವ ಚಿತ್ರದುರ್ಗದ ರಸ್ತೆಗಳೇ ಅತ್ಯಂತ ಕಿರಿದಾಗಿವೆ. ರಸ್ತೆ ಅಗಲೀಕರಣ ಮಾಡುತ್ತಿಲ್ಲ. ನಗರದ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿವೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿ ವಾಣಿಜ್ಯ ಮಳಿಗೆಗಳು, ಮನೆಗಳು, ಹೋಟೆಲ್, ಪೆಟ್ರೋಲ್ ಬಂಕ್, ಮನೆ ನಿರ್ಮಾಣ ಮಾಡಿಕೊಂಡಿದ್ದರೂ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರಿ ಜಾಗಗಳ ಒತ್ತುವರಿಯಂತೂ ನಿತ್ಯ ನಿರಂತರವಾಗಿದೆ.
Advertisement
ಶಾಸಕರು ಏನಂತಾರೆ?24 ವರ್ಷಗಳ ನನ್ನ ಶಾಸಕತ್ವದ ಅವಧಿಯಲ್ಲಿ ಎಂದೂ ಕೋಮುಗಲಭೆ ಆಗಿಲ್ಲ. ನಗರದಲ್ಲಿ 8 ಸಾವಿರ, ಹಳ್ಳಿಗಳಲ್ಲಿ 30 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದೇನೆ. ಕ್ಷೇತ್ರದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿದ್ದು, ಕಾಮಗಾರಿ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ಮಾಡಬೇಕಿತ್ತು.
ಜಿ.ಎಚ್. ತಿಪ್ಪಾರೆಡ್ಡಿ, ಶಾಸಕರು ಕ್ಷೇತ್ರ ಮಹಿಮೆ
ಚಿತ್ರದುರ್ಗ ಕ್ಷೇತ್ರ, ಏಳು ಸುತ್ತಿನ ಕೋಟೆ, ಚಂದ್ರವಳ್ಳಿ ತೋಟ, ಮುರುಘಾ ಮಠ, ಸಿರಿಗೆರೆ ಮಠ, ಮಾದಾರ ಚನ್ನಯ್ಯ ಗುರುಪೀಠ, ಯಾದವ, ಭೋವಿ, ಸೇವಾಲಾಲ್, ಮಡಿವಾಳ, ಕುಂಬಾರ, ಕುಂಚಿಟಿಗ, ಕುರುಬ ಸಮುದಾಯಗಳ ಮಠಗಳನ್ನು ಹೊಂದಿದೆ. ಜೋಗಿಮಟ್ಟಿ, ಆಡುಮಲ್ಲೇಶ್ವರ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಇಲ್ಲಿವೆ. ಬೆಳಗೆರೆ ಕೃಷ್ಣಶಾಸ್ತ್ರಿ, ಟಿ.ಎಸ್. ವೆಂಕಣ್ಣಯ್ಯ, ತರಾಸು ಅವರಂತಹ ಮಹಾನ್ ಸಾಹಿತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಹಿರಿಮೆ ಹೊಂದಿದೆ. ರಸ್ತೆ, ಚರಂಡಿ ಇಲ್ಲ. ಬಡವರು ಬುದುಕುವುದೇ ದುಸ್ತರವಾಗಿದೆ. ಚನ್ನಕ್ಕಿ ಹೊಂಡ ಬಡಾವಣೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶಾಸಕರು, ವಾರ್ಡ್ ಸದಸ್ಯರು, ಸರ್ಕಾರ ಬಡವರ ಸಮಸ್ಯೆ ಕೇಳುತ್ತಿಲ್ಲ.
ಶಾರದಮ್ಮ, ಚನ್ನಕ್ಕಿ ಹೊಂಡ ನಿವಾಸಿ. ಎಲ್ಲಾ ಪಕ್ಷಗಳ ಶಾಸಕರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಶುದ್ಧ ಕುಡಿಯುವ ನೀರಂತೂ ಕನಸಿನ ಮಾತು. ಬೀದಿದೀಪ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆ.ಎಚ್. ಶಂಕರ್, ಜೆ.ಸಿ.ಆರ್. ಬಡಾವಣೆ, ಚಿತ್ರದುರ್ಗ. ಮನೆ ಇಲ್ಲದವರಿಗೆ, ವಿಧವೆಯರಿಗೆ ಮನೆಗಳನ್ನು ನೀಡುತ್ತಿಲ್ಲ. ಒಂದೊಂದು ಗುಡಿಸಲಿನಲ್ಲಿ ಐದಾರು ಜನ ವಾಸ ಮಾಡಬೇಕಾಗಿದೆ. ಬಡವರದು ನರಕಯಾತನೆಯ ಜೀವನ.
ರಾಜಮ್ಮ, ಸ್ಲಂ ನಿವಾಸಿ, ಚಿತ್ರದುರ್ಗ ಯಾವ ಜನಪ್ರತಿನಿಧಿಗಳಿಗೂ ಚಿತ್ರದುರ್ಗದ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಬೇಕಾಗಿರುವುದು ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಮತಗಳು ಅಷ್ಟೇ.
ಎಸ್. ಯಶವಂತ್, ಧರ್ಮಶಾಲಾ ರಸ್ತೆ, ಚಿತ್ರದುರ್ಗ.