Advertisement

ಪೈಪುಗಳನ್ನೇ ಬಳಸಿ ಮಾಡಿದ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ತಯಾರಿಸಿದ ಮಂಗಳೂರಿಗ

09:42 PM Apr 29, 2020 | keerthan |

ಮಂಗಳೂರು: ಕೋವಿಡ್-19 ವೈರಸ್ ಕಾಲಿಟ್ಟ ನಂತರ ಅತೀ ಹೆಚ್ಚು ಬೇಡಿಕೆ ಪಡೆದ ವಸ್ತುವೆಂದರೆ ಹ್ಯಾಂಡ್ ಸ್ಯಾನಿಟಸರ್. ಕೈಯನ್ನು ಶುದ್ಧ ಮಾಡುವ ಸ್ಯಾನಿಟೈಸರ್ ನ ಬಾಟಲಿಯನ್ನು ಕೈಯಿಂದ ಮುಟ್ಟದೆ ಬಳಸಲು ಸಹಾಯವಾಗುವಂತೆ ಮಾಡಿದ್ದಾರೆ ಮಂಗಳೂರಿನ ಯೋಗೇಶ್ ಕಾಮತ್.

Advertisement

ಸರಕಾರಿ ಕಚೇರಿ ಸ್ಯಾನಿಟೈಸಸರ ಬಳಸುವಾಗ ಅದ್ನು ಬಂದವರಿಗೆ ನೀಡಲು ಒಬ್ಬರು ಬೇಕಾಗುತ್ತದೆ. ಇದನ್ನು ತಪ್ಪಿಸಲು ಯೋಗೇಶ್ ಕಾಮತ್ ಅವರು  ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ಹೊಸ ಉಪಕರಣವನ್ನು ಸಿದ್ದಪಡಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿರುವ ಉಳಿದ ಪೈಪುಗಳನ್ನು ಬಳಸಿ ಕಾಮತ್ ಅವರು ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಸಿದ್ದಪಡಿಸಿದ್ದಾರೆ.

ಸ್ಯಾನಿಟೈಸರನ್ನು ಕೈಗಳಿಂದ ಮುಟ್ಟದೇ ಕೇವಲ ಕಾಲುಗಳಿಂದ ಒತ್ತಡ ಹಾಕಿ ಸ್ಯಾನಿಟೈಸರ್ ಕೈಗೆ ಬೀಳುವಂತೆ ರೂಪಿಸಲಾಗಿರುವ ಇದು ಸದ್ಯ ಪ್ರಸಿದ್ದವಾಗಿದೆ. ಇದರ ಹತ್ತಿರ ಬಂದು ಕೆಳಗಿರುವ ಪ್ರೆಸ್ಸರ್ ಅನ್ನು ಕಾಲಿನಿಂದ ಒತ್ತಿದಾಗ ಸ್ಯಾನಿಟೈಸರ್ ನೇರ ಕೈಗೆ ಬೀಳುತ್ತದೆ.

ಇದೀಗ ಮಂಗಳೂರಿನ ಸೇವಾಂಜಲೀ ಟ್ರಸ್ಟ್ ನವರು ಸುಮಾರು 50ರಷ್ಟು ಈ ಸಲಕರಣೆಯನ್ನು ಜಿಲ್ಲಾಡಳಿತ, ಪೊಲೀಸ್ ಕಮಿಷನರ್ ಕಚೇರಿ , ಎಸ್ಪಿ ಕಚೇರಿ , ಬ್ಯಾಂಕ್ , ಸಂಸದರ,ಶಾಸಕರ ಕಛೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ವಿತರಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next