Advertisement

ಮೆಹುಲ್ ಚೋಕ್ಸಿಯನ್ನು ನಮಗೆ ಹಸ್ತಾಂತರಿಸಿ: ಡೊಮೆನಿಕಾಗೆ ಭಾರತ ಆಗ್ರಹ

12:30 PM May 30, 2021 | Team Udayavani |

ನವದೆಹಲಿ: ಡೊಮೆನಿಕಾದಲ್ಲಿ ಬಂಧಿಸಲ್ಪಟ್ಟಿರುವ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಈ ಕೂಡಲೇ ಭಾರತಕ್ಕೆ ಹಸ್ತಾಂತರಿಸಿ ಎಂದು ಡೊಮೆನಿಕಾ ಸರ್ಕಾರಕ್ಕೆ ಭಾರತ  ಆಗ್ರಹಿಸಿದೆ ಎಂದು ವರದಿಯಾಗಿದೆ,

Advertisement

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಗೆ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್‌ ಚೋಸ್ಕಿಯನ್ನು ಡೊಮೆನಿಕಾದಲ್ಲಿ ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ವಾಪಸ್ ಕರೆತರಲು ತನಿಖಾ ಸಂಸ್ಥೆಗಳು ಎಲ್ಲ ರೀತಿಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ.

ಮೆಹುಲ್ ಚೋಕ್ಸಿಯನ್ನು ಪರಾರಿಯಾದ ಭಾರತೀಯ ಪ್ರಜೆಯಂತೆ ಪರಿಗಣಿಸಬೇಕು. ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಇದ್ದು, ಕೂಡಲೇ ಆತನನ್ನು ಗಡೀಪಾರು ಮಾಡಿ ಭಾರತೀಯ ಅಧಿಕಾರಿಗಳಿಗೆ  ಹಸ್ತಾಂತರಿಸಬೇಕು ಭಾರತ ಹೇಳಿದೆ.

ಇದನ್ನೂ ಓದಿ:  ಪ್ರೇಯಸಿಯ ಜೊತೆಗೆ ವಿವಾಹ ಬಂಧನಕ್ಕೆ ಒಳಗಾದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

ಮೆಹುಲ್ ಚೋಕ್ಸಿ ಬೇರೆ ವಿದೇಶಗಳ ಪೌರತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಆ್ಯಂಟಿಗುವಾ ಸರ್ಕಾರ ಕೂಡ ಡೊಮಿನಿಕಾಗೆ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ.

Advertisement

ಮತ್ತೊಂದೆಡೆ ಮೆಹುಲ್ ಚೋಕ್ಸಿಯನ್ನು ಕರೆದೊಯ್ಯಲು ಭಾರತದಿಂದ ಖಾಸಗಿ ವಿಮಾನ ಡೊಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣ ತಲುಪಿದೆ ಎಂದು ಆ್ಯಂಟಿಗುವಾ ಪ್ರಧಾನಿ ಗಾಸ್ಟನ್ ಬ್ರೌನ್ ಭಾನುವಾರ (ಮೇ 30) ತಿಳಿಸಿದ್ದಾರೆ.

ಇದನ್ನೂ ಓದಿ:  ಡೊಮಿನಿಕಾದಲ್ಲಿ ಕಂಬಿಯ ಹಿಂದೆ ಮೆಹುಲ್ ಚೋಕ್ಸಿ: ಕೈ ಮೇಲೆ ಸುಟ್ಟಗಾಯಗಳು ಪತ್ತೆ; ಹಲ್ಲೆ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next