ಚಿಕ್ಕಮಗಳೂರು:ಪ್ರಜಾಪ್ರಭುತ್ವದ ಹಬ್ಬ ಕಾಫಿನಾಡಿನಲ್ಲಿ ಜೋರಾಗಿದ್ದು, ಯುವಕರು, ಯುವತಿಯರು, ಮಹಿಳೆಯರು, ಪುರುಷರು ಅತ್ಯುತ್ಸಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಜಿಲ್ಲೆಯ ಮೂಡಿಗೆರೆಯಲ್ಲಿ ಬುಧವಾರ (ಮೇ 10) ಮದು ಮಗಳು ಹಸೆಮಣೆ ಏರುವ ಮೊದಲು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಯವ ಮೂಲಕ ಮತದಾನದ ಮಹತ್ವವನ್ನು ಸಾರಿದ್ದಾರೆ.
ಇದನ್ನೂ ಓದಿ:Vote ಹಾಕಲು ಅಮೆರಿಕದಿಂದ ಲಕ್ಷಾಂತರ ರೂ ಖರ್ಚು ಮಾಡಿ ಬಂದರು, ಆದರೆ ಆಗಿದ್ದೇ ಬೇರೆ!
ಮೂಡಿಗೆರೆಯ ಚಂದ್ರಾಪುರ ಗ್ರಾಮದ ಎಸ್.ಎಂ.ರಾಜು ಅವರ ಮಗಳಾದ ಸುಶ್ಮಿತ ಅವರ ವಿವಾಹವು ಬುಧವಾರ ಮೂಡಿಗೆರೆ ರೈತಭವನದಲ್ಲಿ ಇದ್ದು, ಮದುಮಗಳು ಶೃಂಗಾರಗೊಂಡು ಮಾಕೋನ ಹಳ್ಳಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ನಂತರ ಮದುವೆ ಮಂಟಪಕ್ಕೆ ಆಗಮಿಸಿದ್ದರು.
Related Articles
ಮತಗಟ್ಟೆ ಅಧಿಕಾರಿ ಯಡವಟ್ಟು; ಚಾಮನೂರು ಮತ ಕೇಂದ್ರದಲ್ಲಿ ಗಲಾಟೆ
ಕಲಬುರಗಿ: ಚಿತ್ತಾಪುರ ತಾಲೂಕಿನ ಚಾಮನೂರು ಮತ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಮತದಾರನ ಮತವನ್ನು ಬದಲಿ ಪಕ್ಷಕ್ಕೆ ಹಾಕಿದ್ದರಿಂದ ಗಲಾಟೆ ಆಗಿರುವ ಘಟನೆ ಜರುಗಿದೆ. ಬಿ.ಸಿ. ಚವ್ಹಾಣ ಎಂಬ ಚುನಾವಣಾ ಅಧಿಕಾರಿಯೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ.
ಈ ಅಧಿಕಾರಿ ಮತ ಗಟ್ಟೆಗೆ ಬಂದಿದ್ದ ಬಸಮ್ಮ ಯಂಟ್ಮನ ಎಂಬ ಮಹಿಳೆ ಮತಗಟ್ಟೆಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಗೆ ಬಟನ್ ಒತ್ತಲು ತಿಳಿಸಿದ್ದಾಳೆ. ಆದರೆ ಅಧಿಕಾರಿ ಬಿಜೆಪಿ ಅಭ್ಯರ್ಥಿಯ ಮುಂದಿರುವ ಬಟನ್ ಒತ್ತಿದ್ದಾರೆ. ಅದು ಮಹಿಳೆ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದಾಗ ಘಟನೆ ಬಯಲಿಗೆ ಬಂದು ಗಲಾಟೆಯಾಗಿದೆ.
ಇದಕ್ಕೂ ಮೊದಲು ಮತಯಂತ್ರ ಪರೀಕ್ಷೆ ಸಮಯದಲ್ಲಿ ಸಹ ಬಿಜೆಪಿಗೆ ಸುಮಾರು ಐವತ್ತಕ್ಕೂ ಅಧಿಕ ಮತ ಹಾಕಲಾಗಿದೆ ಎಂದು ಹೇಳಲಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಚಿತ್ತಾಪುರ ಚುನಾವಣಾಧಿಕಾರಿಗೆ ವಿಷಯ ತಿಳಿಸಿ ಅಧಿಕಾರಿಯನ್ನು ಬದಲಿಸಲು ಒತ್ತಾಯಿಸಿದ್ದರು.
ಇದರಿಂದಾಗಿ ಅಧಿಕಾರಿಯನ್ನು ಬದಲಾವಣೆ ಮಾಡಿದ ಬಳಿಕ ಮತದಾನ ಪುನರಾರಂಭಗೊಂಡಿತು ಎಂದು ಮೂಲಗಳು ತಿಳಿಸಿವೆ.
45 ನಿಮಿಷ ಮತದಾನ ವಿಳಂಬ:
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಗೋಕುಲಂ ಲಯನ್ಸ್ ಶಾಲೆಯ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟ ಪರಿಣಾಮ ಸುಮಾರು 45 ನಿಮಿಷಗಳ ಕಾಲ ತಡವಾಗಿ ಮತದಾನ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ.
ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಮತಗಟ್ಟೆ ಸಂಖ್ಯೆ 105ರಲ್ಲಿ ಇವಿಎಂ ದೋಷದಿಂದಾಗಿ 8ಗಂಟೆಯಾದರೂ ಮತದಾನ ಆರಂಭವಾಗಿಲ್ಲ. ಏತನ್ಮಧ್ಯೆ ಹಲವು ಮತದಾರರು ಮತದಾನ ಮಾಡದೇ ವಾಪಸ್ ತೆರಳಿದ್ದಾರೆಂದು ವರದಿ ವಿವರಿಸಿದೆ.
ಕಾರ್ಕಳ ತಾಲೂಕಿನ ಈದುವಿನಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ವಿಳಂಬವಾಗಲು ಕಾರಣವಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯ ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವಿಎಂ ನಿಧಾನಗತಿಯಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಮತದಾನ ವಿಳಂಬವಾಗುತ್ತಿದೆ ಎಂದು ಮತದಾರರು ಆರೋಪಿಸಿದ್ದಾರೆ.