Advertisement

Hanagerekatte; ಸಂಗ್ರಹವಾಯ್ತು ಅರ್ಧ ಕೋಟಿ ರೂ.ಗೂ ಹೆಚ್ಚಿನ ಕಾಣಿಕೆ ಹಣ !

07:27 PM Jan 18, 2024 | Team Udayavani |

ತೀರ್ಥಹಳ್ಳಿ : ತಾಲೂಕಿನ ಹಿಂದೂ-ಮುಸ್ಲಿಂ ಭಾವೈಕ್ಯ ಕೇಂದ್ರವಾಗಿರುವ ಹಣಗೆರೆ ಕಟ್ಟೆಯಲ್ಲಿರುವ ಭೂತರಾಯ ಚೌಡೇಶ್ವರಿ ದೇವಾಲಯ ಮತ್ತು ಸೈಯದ್ ಹಜರತ್ ದರ್ಗಾದ‌ ಕಾಣಿಕೆ ಹುಂಡಿಯನ್ನು ಬುಧವಾರ ತೆಗೆಯಲಾಗಿದ್ದು ಅರ್ಧ ಕೋಟಿಗೂ ಹೆಚ್ಚಿನ ಹಣ ಸಂಗ್ರಹವಾಗಿದೆ.

Advertisement

ಬುಧವಾರ ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರದಲ್ಲಿ ಮುಜರಾಯಿ ಇಲಾಖೆಯ ಸಿಬಂದಿಗಳು ಕಾಣಿಕೆ ಹುಂಡಿ ಎಣಿಕೆಗೆ ಹೋದಾಗ ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತಿತರರು ಕೆಲ ಬೇಡಿಕೆಯನ್ನಿಟ್ಟು ಪ್ರತಿಭಟಿಸಿದ್ದರು. ಈ ಪ್ರತಿಭಟನೆಯಿಂದ ಹುಂಡಿ ಎಣಿಕೆ ಕಾರ್ಯ ತಡವಾಗಿ ಆರಂಭವಾಗಿತ್ತು.

ತಡವಾಗಿ ಹುಂಡಿ ಎಣಿಕೆ ಕಾರ್ಯ ಆರಂಭಿಸಿದ್ದ ಕಾರಣ ರಾತ್ರಿ 9 ರವರೆಗೆ ಎಣಿಕೆ ನಡೆಯಿತು. ನಾಣ್ಯದ ಎಣಿಕೆ ಹೊರತುಪಡಿಸಿ ಒಟ್ಟು ನೋಟುಗಳ ಎಣಿಕೆಗಳನ್ನ ಮಾಡಲಾಗಿದ್ದು 54ಲಕ್ಷದ 50ಸಾವಿರದ760 ರೂ. ಸಂಗ್ರಹವಾಗಿದೆ. ಪ್ರತಿ ಮೂರು ತಿಂಗಳಿಗೆ ಈ ಧಾರ್ಮಿಕ‌ ಕೇಂದ್ರದಲ್ಲಿ ಇಷ್ಟೇ ಹಣ ಸಂಗ್ರಹವಾಗುತ್ತಿದೆ.

ಈ ಕಾಣಿಕೆಯ ಸಂಗ್ರಹದ ಆಧಾರದ ಮೇಲೆಯೇ ಧಾರ್ಮಿಕ ಕೇಂದ್ರ ಯಾವ ಶ್ರೇಣಿಯಲ್ಲಿದೆ ಎಂಬುದನ್ನ ನಿಗದಿಪಡಿಸಲಾಗುತ್ತದೆ. ಹಣಗೆರೆಕಟ್ಟೆಯ ಈ ಧಾರ್ಮಿಕ ಕೇಂದ್ರ ‘ಎ’ ಶ್ರೇಣಿಯ ಧಾರ್ಮಿಕ ಕೇಂದ್ರ ಎನಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next