Advertisement

ಹೊರನಾಡು ಅನ್ನಪೂರ್ಣೇಶ್ವರಿಗೆ ಹಂಸಾರೂಢಾ ಸರಸ್ವತಿ ಅಲಂಕಾರ  

11:02 PM Sep 29, 2019 | Lakshmi GovindaRaju |

ಮೂಡಿಗೆರೆ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆ ಶ್ರೀ ಕ್ಷೇತ್ರ ಹೊರನಾಡಲ್ಲಿ ಶರನ್ನವರಾತ್ರಿ ಉತ್ಸವ ಆರಂಭಗೊಂಡಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.

Advertisement

ನವರಾತ್ರಿಯ ಮೊದಲ ದಿನ ಭಾನುವಾರ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂಣೇಶ್ವರಿ ಅಮ್ಮನವರಿಗೆ ಹಂಸಾರೂಢಾ ಸರಸ್ವತಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 6.30ಕ್ಕೆ ಪಂಚದುರ್ಗಾ ಹೋಮ ಆರಂಭಗೊಂಡಿತು. ಸಪ್ತಶತಿ, ವೇದ, ಸುಂದರಕಾಂಡ ಪಾರಾಯಣ ಮತ್ತು ಕುಂಕುಮಾರ್ಚನೆಗಳು ನಡೆದವು.

ನಂತರ, ಕ್ಷೇತ್ರದ ಧರ್ಮಕರ್ತರಾದ ಡಾ|ಭೀಮೇಶ್ವರ ಜೋಶಿ ದಂಪತಿ ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 11 ಗಂಟೆಗೆ ಮೈಸೂರಿನ ವಿದ್ವಾನ್‌ ಶ್ರೀ ಎಸ್‌.ಯು.ಆದರ್ಶ ಅವರಿಂದ ಮ್ಯಾಂಡೋಸ್‌ ವಾದನ ಮತ್ತು ಸಂಜೆ 7ರಿಂದ ಬೆಂಗಳೂರಿನ ದಿವ್ಯಶ್ರೀ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next