Advertisement

ಪ್ರಶಸ್ತಿ ಹಣ ಸಂತ್ರಸ್ತರಿಗೆ ನೀಡಿದ ಹಂಸಲೇಖ

12:41 PM Aug 20, 2018 | |

ಬೆಂಗಳೂರು: ಕೊಡಗಿನಲ್ಲಿ ಮಳೆ ಹಾಗೂ ಪ್ರವಾಹದಿಂದ ತೊಂದರೆಗೊಳಗಾಗಿರುವ ಸಂತ್ರಸ್ತರ ನೆರವಿಗೆ ಬಂದಿರುವ ನಾದಬ್ರಹ್ಮ ಹಂಸಲೇಖ, ತನಗೆ ಬಂದಿರುವ ಪ್ರಶಸ್ತಿ ಮೊತ್ತವನ್ನು ಪ್ರವಾಹ ಸಂತ್ರಸ್ತರಿಗಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

Advertisement

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಡಾ.ವೇಮಗಲ್‌ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ನೀಡಿದ ಪ್ರಶಸ್ತಿ ಸ್ವೀಕರಿಸಿದ ಅವರು ನಂತರ ಆ ಪ್ರಶಸ್ತಿಯ ಮೊತ್ತವನ್ನು ಕೊಡಗಿನ ಸಂತ್ರಸ್ತರಿಗೆ ನೀಡುವಂತೆ ಪ್ರತಿಷ್ಠಾನಕ್ಕೆ ಮರಳಿಸಿದರು.

ವೃತ್ತಿಯಲ್ಲಿ ಪೊಲೀಸ್‌ ಆದರೂ ಪ್ರವೃತಿಯಲ್ಲಿ ಕಲಾವಿದರಾಗಿರುವ ಡಾ.ವೇಮಗಲ್‌ ನಾರಾಯಣಸ್ವಾಮಿ ಅವರು ತಮ್ಮ ಪ್ರತಿಷ್ಠಾನದ ಮೂಲಕ ನೀಡಿರುವ ಪ್ರಶಸ್ತಿಗೆ ನಾನು ಋಣಿ. ಆದರೆ, ಈ ಪ್ರಶಸ್ತಿಯಿಂದ ಸಂದ ಹಣ 25 ಸಾವಿರ ರೂ.ವನ್ನು  ಮಳೆಯಿಂದಾಗಿ ತೊಂದರೆಗೊಳಗಾದ ಕೊಡಗಿನವರಿಗೆ ನೀಡಲು ಮನ ಬಯಸುತ್ತಿದೆ. ಹೀಗಾಗಿ ಈ ಹಣವನ್ನು ಪ್ರತಿಷ್ಠಾನಕ್ಕೆ ಮರಳಿಸುತ್ತಿದ್ದೇನೆ. ಹಣದ ಚೆಕ್‌ ಅನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸಿ ಎಂದು ಪ್ರತಿಷ್ಠಾನದವರಿಗೆ ಸೂಚಿಸಿದರು.

ಪ್ರಶಸ್ತಿ ಸ್ವೀಕರಿಸಿದ ಮತ್ತೋರ್ವ ಸಾಧಕಿ ಬಿ.ಕೆ.ಸುಮಿತ್ರಾ ಮಾತನಾಡಿ, ಕಳೆದ ಎರಡು ದಿನಗಳಿಂದ ಕೊಡಗಿನ ಸಂತ್ರಸ್ತರಿಗೆ ನನ್ನ ಕೈಲಾಸ ಸಹಾಯ ಮಾಡಿರುವೆ. ಹೊಸ ಬಟ್ಟೆಗಳನ್ನು ಹಾಗೂ ದಿನಸಿ ಸಾಮಾನುಗಳನ್ನು ಕಳುಹಿಸಿಕೊಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹಾಗೂ ನಿವೃತ್ತ ನ್ಯಾ. ವಿ.ಗೋಪಾಲ್‌ಗೌಡ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next