Advertisement
ಹಂಪಿ ವಿದ್ಯಾರಣ್ಯ ಪೀಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಶ್ರೀಗಳು, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ವಿಗ್ರಹಕ್ಕೆ ಅಭಿಷೇಕ ನಡೆಸಿ ನಂತರ ರೇಷ್ಮೆ ನೂಲಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ನೂಲು ಹುಣ್ಣಿಮೆ ಪ್ರಯುಕ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹಂಪಿಗೆ ಭೇಟಿ ನೀಡಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾಂಬಿಕೆ ದೇವಿ ದರ್ಶನ ಪಡೆದು ಹೂವು, ಹಣ್ಣು ಹಾಗೂ ಕಾಣಿಕೆ ಸಲ್ಲಿಸಿದರು. ವಿರೂಪಾಕ್ಷನಿಗೆ ಐದು ದಿನಗಳ ಕಾಲ ರೇಷ್ಮೆ ನೂಲಿನ ಅಲಂಕಾರ ಮಾಡಲಾಗುತ್ತದೆ. ನಂತರ ದೇವರಿಗೆ ಸಮರ್ಪಿಸಲಾಗಿದ್ದ ರೇಷ್ಮೆ ನೂಲನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಪ್ರಸಾದ ರೂಪದಲ್ಲಿ ಇದನ್ನು ಸ್ವೀಕರಿಸುವ ಭಕ್ತರು ದಾರಗಳನ್ನು ಧರಿಸುತ್ತಾರೆ.