ಹೊಸಪೇಟೆ: ವಿಶ್ವಪರಂಪರೆ ಪಟ್ಟಿಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ ಹಂಪಿ. ಇಂದು ನಾವು ಅಂದುಕೊಂಡಂತೆ ವಿಜಯನಗರ ಸಾಮ್ರಾಜ್ಯ ಅಲ್ಲ, ಅದು ಕರ್ನಾಟಕ ಸಾಮ್ರಾಜ್ಯವಾಗಿತ್ತು ಎಂದು ಫ್ರಾನ್ಸ್‌ನಲ್ಲಿ ನೆಲೆಸಿರುವ ಇತಿಹಾಸ ತಜ್ಞೆ ಡಾ| ವಸುಂಧರಾ ಫಿಲಿಯೋಜಾ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾಮ್ರಾಜ್ಯ ಎಂದು ಹೇಳಲು ಸುಮಾರು 30ಕ್ಕೂ ಹೆಚ್ಚು ಮೇಲ್ಟಟ್ಟು ಶಾಸನಗಳು ಹಾಗೂ ಸಾಹಿತ್ಯಾಧಾರಗಳು ಸಿಗುತ್ತವೆ. ಆದರೆ, ವಿಜಯನಗರ ಸಾಮ್ರಾಜ್ಯ ಎಂದು ಹೇಳಲು ಎಲ್ಲಿಯೂ ಪೂರಕ ದಾಖಲೆಗಳು ಸಿಕ್ಕಿಲ್ಲ. ಅಂದು ಹಂಪಿಗೆ ಭೇಟಿ ನೀಡಿದ್ದ ರಾಬರ್ಟ್ ಸಿವೆಲ್ ಎಂಬ ವಿದೇಶಿ ಪ್ರವಾಸಿಗ ಕರ್ನಾಟಕ ಸಾಮ್ರಾಜ್ಯ ಎಂದು ಬರೆಯುವ ಬದಲಾಗಿ ವಿಜಯನಗರ ಸಾಮ್ರಾಜ್ಯ ಎಂದು ತಪ್ಪು ಬರೆಯುವ ಮೂಲಕ ಇತಿಹಾಸ ತಿರುಚಿದ್ದಾರೆ ಎಂದು ಆರೋಪಿಸಿದರು.
ವಿಜಯ ನಗರ ಸಾಮ್ರಾಜ್ಯ ಎಂಬುದೇ ಶುದ್ಧ ಸುಳ್ಳು. ಅದು ಸ್ಥಾಪನೆಗೊಳ್ಳಲಿಲ್ಲ. ಕ್ರಿಶ 1336-1337 ಹೊತ್ತಿನಲ್ಲಿ ಹೊಯ್ಸಳ ಮುಮ್ಮಡಿ ಬಲ್ಲಾಳನು ಮುಸ್ಲಿಂರನ್ನು ದಕ್ಷಿಣ ಭಾರತದಿಂದ ಹೊರ ಹಾಕಲು ಹರಸಹಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬಹುಶಃ ಅವನು ಶೃಂಗೇರಿ ಪೀಠದ ವಿದ್ಯಾತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಹೊರ ದಾಳಿಗಳನ್ನು ಎದುರಿಸಲು ಹಿಂದೂಗಳಿಗೆ ಒಬ್ಬನೇ ರಾಜನಿರಬೇಕು ಎಂದು ಅದರಂತೆ ನಡೆದುಕೊಳ್ಳಲು ತಮ್ಮ ಶಿಷ್ಯರಾದ ಮಾಧವಾಚಾರ್ಯರನ್ನು ನೇಮಿಸಿದನು. ಎಲ್ಲ ಮಾಂಡಲಿಕ ರಾಜರಿಗೂ ಹೊಯ್ಸಳ ಬಳಗ ಗುಟ್ಟಾಗಿ ಸಭೆ ನಡೆಸಿ ಒಬ್ಬ ವೀರನನ್ನು ಹಂಪಿಯಲ್ಲಿ ನೇಮಕ ಮಾಡಿದರು. ಈ ಸಂಬಂಧಕ್ಕೆ ಒಬ್ಬನೇ ಹಿಂದೂ ರಾಜನಂದರೆ ಹೊಯ್ಸಳ ಮುಮ್ಮಡಿ ಬಲ್ಲಾಳ ಹಾಗೂ ಅವರ ಮಗ ನಾಲ್ಮಡಿ ಬಲ್ಲಾಳ. ಅವನಿಗೆ ಹಂಪಿಯ ಒಡೆಯ, ವಿರೂಪಾಕ್ಷ ಬಲ್ಲಾಳ ಎಂಬ ಹೆಸರಿದ್ದವು. ಹೊಯ್ಸಳರಿಗೆ ಸಮಕಾಲೀನವರಾದ ಸೇವುಣರು, ಕರ್ನಾಟಕದ ರಾಜರು ಎಂದು ಕರೆಯುತ್ತಿದ್ದರು ಎಂದರು.
ಹೊಯ್ಸಳರಿಗೆ ಕರ್ನಾಟಕಧೀಶರರು ಎಂದು ಕರೆಯುತ್ತಿದ್ದರು. ಮುಂದೆ ಅವರ ರಾಜ್ಯಕ್ಕೆ ಕರ್ನಾಟಕ ಎಂದು ರಾಜಧಾನಿಯನ್ನಾಗಿಸಿಕೊಂಡರು. ಈ ಸಂಬಂಧಕ್ಕೆ ಮುಖ್ಯಪಾತ್ರ ವಹಿಸಿದವರು ವಿದ್ಯಾರಣ್ಯರಲ್ಲ, ಅವರ ಗುರುಗಳಾದ ವ್ಯಾಸತೀರ್ಥರು. ವ್ಯಾಸತೀರ್ಥರ ಶಿಷ್ಯರಾಗಿದ್ದ ಮಾಧವಾಚಾರ್ಯರು ಮುದೊಂದು ದಿನ ಸನ್ಯಾಸ ದೀಕ್ಷೆ ಪಡೆದು ವಿದ್ಯಾರಣ್ಯರಾದರು. ಕಾಲ ಕ್ರಮೇಣ ಗುರುವಿನ ಹೆಸರು ಮರೆಯಾದಂತೆ ದಂತಕಥೆಗಳು 17-18ನೇ ಶತಮಾನದಲ್ಲಿ ಹುಟ್ಟಿಕೊಂಡವು ಎಂದರು.
ಮಾಧವಾಚಾರ್ಯರೇ ವಿದ್ಯಾರಣ್ಯರಾದರು ಎಂಬುದುನ್ನು ಅವರ ಕೃತಿಗಳಾದ ಪುರಾಣಸಾರ, ಪರಶರ ಮಾಧವೀಯ ಹಾಗೂ ಜೀವನ ಮುಕ್ತಿಯಿಂದ ತಿಳಿದು ಬರುತ್ತದೆ. ಅವರು ಹರಿಹರ ಬುಕ್ಕರಿಗೆ ಮಂತ್ರಿಯಾಗಿದ್ದರು ಎಂಬುದು ಈ ಕೃತಿಗಳಲ್ಲಿ ಉಲ್ಲೇಖವಿದೆ. ಈ ಎಲ್ಲ ಮೂಲಗಳಿಂದ ಹಂಪಿ ವಿಜಯನಗರ ಸಾಮ್ರಾಜ್ಯವಲ್ಲ, ಕರ್ನಾಟಕ ಸಾಮ್ರಾಜ್ಯ ಎಂದರು. ಅವರ ಪತಿ ಪಿಯರ್ ಸಿಲ್ವೆ„ನ್ ಫಿಲಿಯೋಜಾ ಇದ್ದರು.