Advertisement

ಭಿಕ್ಷೆ ಬೇಡಿ ಹಂಪಿ ಉತ್ಸವ ಆಚರಣೆ:ಮಳೆಯೋಗೀಶ್ವರ ಶಿವಾಚಾರ್ಯ ಶ್ರೀ

06:05 AM Dec 02, 2018 | Team Udayavani |

ಹೂವಿನಹಡಗಲಿ: ಬರದ ನೆಪವೊಡ್ಡಿ ವಿಶ್ವವಿಖ್ಯಾತ ಹಂಪಿ ಉತ್ಸವ ರದ್ದುಗೊಳಿಸಿರುವ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಹಣದ ಕೊರತೆ ಕಾಡುತ್ತಿದ್ದರೆ ಭಿಕ್ಷೆ ಬೇಡಿ ಹಣ ಒಗ್ಗೂಡಿಸಿ ನೀಡಲಾಗುವುದು ಎಂದು ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಹಂಪಿ ಉತ್ಸವಕ್ಕಾಗಿ ತಾಲೂಕಿನ ಮಾಗಳ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶನಿವಾರ ಸಂಚರಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವವನ್ನು ರದ್ದುಗೊಳಿಸಿರುವ ಮೈತ್ರಿ ಸರ್ಕಾರದ ಕ್ರಮ ಒಪ್ಪುವಂತಹದ್ದಲ್ಲ. ಸರಳ ರೀತಿಯಲ್ಲಾದರೂ ಆಚರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಂಪಿ ಉತ್ಸವ ದೇಶವಷ್ಟೇ ಅಲ್ಲ, ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿದೆ. ಬರಗಾಲವಿದೆ ಎಂದು ಹಂಪಿ ಉತ್ಸವ ರದ್ದು ಮಾಡಿರುವ ಸರ್ಕಾರದ ಕ್ರಮ ಸಲ್ಲದು. ಯಾವುದೇ ಕಾರಣಕ್ಕೂ ಉತ್ಸವ ನಿಲ್ಲಿಸಕೂಡದು. ಉತ್ಸವ ಆಚರಣೆಗೆ ಸರ್ಕಾರಕ್ಕೆ ಹಣಕಾಸಿನ ತೊಂದರೆಯಾದರೆ ಭಿಕ್ಷೆ ಬೇಡಿ ಬಂದ ಹಣದಲ್ಲಿ ಉತ್ಸವ ಆಚರಿಸಲಾಗುವುದು. ನನ್ನ ಜೋಳಿಗೆ ದೊಡ್ಡದಿದೆ, ಉತ್ಸವ ನಡೆಸಿ ಎಂದು ಒತ್ತಾಯಿಸಿದರು.

ನಮ್ಮ ಈ ಹೋರಾಟ ಸಾಂಕೇತಿಕವಾಗಿ ನಡೆದಿದೆ. ಸರ್ಕಾರ ನಿರ್ಲಕ್ಷé ವಹಿಸಿದರೆ ಎಲ್ಲ ಸ್ವಾಮೀಜಿಗಳು ಸೇರಿ ಜೋಳಿಗೆಯಿಂದ ಹಣ ನೀಡುತ್ತೇವೆ. ಚಳವಳಿ ತೀವ್ರ ಸ್ವರೂಪ ಪಡೆಯಲಿದೆ ಎಂದರು. ನಂತರ ಜೋಳಿಗೆಯಲ್ಲಿ ಬಂದ 1,708 ರೂ.ಗಳನ್ನು ಮಾಗಳ ಗ್ರಾಮದ ಅಂಚೆ ಕಚೇರಿ ಮೂಲಕ ಜಿಲ್ಲಾಧಿ ಕಾರಿ ಖಾತೆಗೆ ವರ್ಗಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next