Advertisement

Hampi-ಆನೆಗೊಂದಿ:ಹೋಂಸ್ಟೇ ರಕ್ಷಣೆಗೆ ಸಚಿವ ಎಚ್.ಕೆ.ಪಾಟೀಲ್‌ಗೆ ಶಾಸಕ ರೆಡ್ಡಿ ಮನವಿ

10:48 PM Jun 17, 2023 | Team Udayavani |

ಗಂಗಾವತಿ:ಹಂಪಿ ಆನೆಗೊಂದಿ ಭಾಗಕ್ಕೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರಿಗೆ ಊಟ ವಸತಿ ಕಲ್ಪಿಸಲು ಸ್ಥಳೀಯರು ಸ್ವಂತ ಹೊಲದಲ್ಲಿ ರೈತರು ನಿರ್ಮಿಸಿಕೊಂಡಿರುವ ಹೋಂಸ್ಟೇಗಳನ್ನು ಸಕ್ರಮಗೊಳಿಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರದ2021 ರ ಮಾಸ್ಟರ್ ಪ್ಲಾನ್(ಮಹಾಯೋಜನೆ)ಯ ಗೆಜೆಟ್‌ನ್ನು ಶೀಘ್ರ ಪ್ರಕಟಿಸಿ ಪ್ರಸ್ತುತ ಇರುವ ಹೋಂಸ್ಟೇಗಳನ್ನು ನಿಗದಿ ಶುಲ್ಕ ಭರಿಸಿಕೊಂಡು ಕಾನೂನು ಬದ್ಧಗೊಳಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳ ಸಭೆ ಕರೆಯುವಂತೆ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿ ಶನಿವಾರ ಭೇಟಿಯಾಗಿ ಮನವಿ ಮಾಡಿದರು.

Advertisement

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಾಕಿ ಮಾಹಿತಿಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಹಂಚಿಕೊಂಡಿದ್ದಾರೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಹಂಪಿ ಮತ್ತು ಆನೆಗೊಂದಿ ಭಾಗದ ಹೋಂ ಸ್ಟೇ ಗಳಿಂದ ಸಾವಿರಾರು ಕುಟುಂಬಗಳು ನೇರ ಮತ್ತು ಪರೋಕ್ಷ ಉದ್ಯೋಗ ಪಡೆದುಕೊಂಡಿದ್ದು ವಿಶೇಷವಾಗಿ ಆನೆಗೊಂದಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರದ್ದೇ ಸ್ವಂತ ಭೂಮಿಯಲ್ಲಿ ಹೋಂಸ್ಟೇ ಗಳನ್ನು ಶಾಶ್ವತ ಅಲ್ಲದ ರೀತಿಯಲ್ಲಿ ತಾತ್ಕಾಲಿಕವಾಗಿ ನೈಸರ್ಗಿಕ ವ್ಯವಸ್ಥೆಯನ್ನು ಮಾಡಿಕೊಂಡು ದೇಶವಿದೇಶಗಳಿಂದ ಬರುವ ಪ್ರವಾಸಿಗರಿಗೆ ಊಟ ವಸತಿ ಕೊಟ್ಟು ಪ್ರವಾಸಿಗರಿಗೆ ತುಂಬಾ ಸ್ನೇಹಪೂರ್ವಕವಾಗಿ ಇದು ನಮ್ಮ ದೇಶ, ನಮ್ಮ ಮನೆ ಎನ್ನುವ ರೀತಿಯಲ್ಲಿ ಆತಿಥ್ಯ ವನ್ನು ನಡೆಸುತ್ತಿರುವ ಹೋಂಸ್ಟೇ ಗಳ ಮಾಲಕರು ಮತ್ತು ಕಾರ್ಮಿಕರು ಅತಂತ್ರ ಪರಿಸ್ಥಿತಿಯಲ್ಲಿರುವುದು ನನ್ನ ಗಮನಕ್ಕೆ ಬಂದಿದೆ. ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರನ್ನು ಭೇಟಿ ಮಾಡಿ ಹೋಂಸ್ಟೇ ಮಾಲಕರಿಗೆ ಯಾವುದೇ ತೊಂದರೆ ಆಗದಂತೆ ಮನವಿ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಪ್ರವಾಸೋದ್ಯಮದ ಮೇಲೆ ಜೀವನ ನಡೆಸುತ್ತಿರುವ ಆನೆಗೊಂದಿ-ಹಂಪಿ ಭಾಗದ ಜನರಿಗೆ ಮುಂಬರುವ ದಿನಗಳಲ್ಲಿ ಯಾವ ರೀತಿ ಸಹಾಯವನ್ನು ಮಾಡಬೇಕೆನ್ನುವ ನನ್ನ ಮನವಿಗೆ ಸ್ಪಂದಿಸಿ ಕೂಡಲೇ ಅಧಿಕಾರಿಗಳ ಸಭೆ ದಿನಾಂಕವನ್ನು ನಿಗದಿ ಮಾಡಲು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ರೆಡ್ಡಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next