Advertisement
ಫೋನ್-ಇನ್‌ನಲ್ಲಿ ದೂರುರಾತ್ರಿ 8 ಗಂಟೆ ಕಳೆದ ಮೇಲಂತೂ, ಈ ಗುಂಪುಗಳು ರಾಜಾರೋಷವಾಗಿ ರಸ್ತೆ ಯಲ್ಲಿ ಹೆಮ್ಮಕ್ಕಳನ್ನು ಚುಡಾಯಿಸುತ್ತಾರೆ. ಲೇಡಿಗೋಶನ್ ಆಸ್ಪತ್ರೆ ಎದುರು, ಸ್ಟೇಟ್ ಬ್ಯಾಂಕ್, ನೆಹರೂ ಮೈದಾನದ ಸುತ್ತಮುತ್ತ ಬೀದಿ ಕಾಮಣ್ಣರ ಹಾವಳಿ ಬಗ್ಗೆ ಪೊಲೀಸ್ ಕಮಿಷನರ್‌ರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರು ನೀಡಿದ್ದರು. ಇಂಥ ಸ್ಥಳಗಳಲ್ಲಿ ಗಸ್ತು ಪೊಲೀಸರನ್ನು ನಿಯೋಜಿಸುವ ಅಥವಾ ಮಫ್ತಿಯಲ್ಲಿ ಕಾರ್ಯಾಚರಿಸುವ ಭರವಸೆಯೂ ಆಯುಕ್ತರಿಂದ ಸಿಕ್ಕಿತ್ತು. ಆದರೂ ಕಿಡಿಗೇಡಿಗಳ ಹಾವಳಿ ತಪ್ಪಿಲ್ಲ ಎಂಬುದು ಜನರ ಆತಂಕಕ್ಕೆ ಕಾರಣ. ಇದಕ್ಕೆ ಪುಷ್ಟಿ ನೀಡುವಂತೆ ಕಿರುಕುಳಕ್ಕೆ ಒಳಗಾದ ಕೆಲವು ಮಹಿಳೆಯರು ‘ಉದಯವಾಣಿ’ ಕಚೇರಿಗೂ ಫೋನ್ ಮಾಡಿ ದೂರು ನೀಡಿದ್ದಾರೆ.
Related Articles
Advertisement
ಪಾಂಡೇಶ್ವರ ಠಾಣೆಯವರೇ ಇಲ್ಲಿಗೆ ಕಳುಹಿಸಿದ್ದಾರೆ ಎಂಬುದಾಗಿ ತಿಳಿ ಹೇಳಿದ ಬಳಿಕ ಮಹಿಳಾ ಪೊಲೀಸರು ಅಹವಾಲು ಆಲಿಸಿ ವಿವರಗಳನ್ನು ಬರೆದುಕೊಂಡರು. ಆದರೆ ದೂರು ದಾಖಲಾದರೆ ಫಾಲೋಅಪ್ ಗಾಗಿ ಮತ್ತೆ ಠಾಣೆಗೆ ಬರ ಬೇಕಾದೀತೆಂದು ಪೊಲೀಸರು ತಿಳಿಸಿದಾಗ ದಂಪತಿ ಕೇಸು ದಾಖಲಿಸಲು ಹಿಂದೇಟು ಹಾಕಿದರು.
ಘಟನೆ ಎರಡು: ನಂತೂರು ಜಂಕ್ಷನ್. ಹತ್ತು ದಿನಗಳ ಹಿಂದೆ ಸಂಜೆ 7-7.30. ಮಹಿಳೆಯೊಬ್ಬರು ಬಸ್ಸಿಗೆ ಕಾಯುತ್ತಿದ್ದರು. ಯುವಕನೊಬ್ಬ ಬೈಕ್ ನಿಲ್ಲಿಸಿ ಕೆಳಗಿಳಿದು ಬಳಿ ಬಂದು ಏನೇನೊ ಮಾತನಾಡ ತೊಡಗಿದ್ದ. ಅವರು ಪ್ರತಿಕ್ರಿಯಿಸದಿದ್ದರೂ ಅವನು ಮತ್ತೆ ಮಾತನಾಡಿಸಲು ಪ್ರಯತ್ನಿಸಿದ. ಅಷ್ಟರಲ್ಲಿ ಇತರರು ಅವನನ್ನು ತರಾಟೆಗೆ ತೆಗೆದುಕೊಂಡದ್ದರಿಂದ ಬೈಕ್‌ನಲ್ಲಿ ಪರಾರಿಯಾದ.
ಇಂಥ ಘಟನೆಗಳು ನಗರದ ಅಲ್ಲಲ್ಲಿ ಆಗಾಗ್ಗೆ ನಡೆಯುತ್ತಲೇ ಇವೆ. ಆದರೆ ಬಹುತೇಕ ಹೆಮ್ಮಕ್ಕಳು ಮತ್ತವರ ಕುಟುಂಬದವರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡುವುದಿಲ್ಲ. ಇದೇ ಈ ಬೀದಿ ಕಾಮಣ್ಣರಿಗೆ ವರವಾಗಿದೆ. ಜತೆಗೆ ಕೆಲವು ಮಹಿಳೆಯರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರೆ ಪೊಲೀಸರೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹಾಗಾಗಿ, ಇಂತಹ ಸ್ಥಳಗಳಲ್ಲಿ ಪುರುಷ ಪೊಲೀಸ್ ಸಿಬಂದಿ ನಿಯೋಜಿಸಿ ಕಠಿನ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
ಕೇರಾಫ್ ಫುಟ್‌ಪಾತ್!ನೆಹರೂ ಮೈದಾನ ಸುತ್ತಮುತ್ತ ಪಾದಚಾರಿಗಳ ಸರ ಎಳೆಯುವುದು, ಜೇಬುಗಳ್ಳತನ, ಸುಲಿಗೆ ಮತ್ತಿತರ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಘಟನೆಗಳೂ ಇವೆ. ಕೆಲವೊಂದು ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಈ ಎಲ್ಲ ಪ್ರಕರಣಗಳ ಆರೋಪಿಗಳ ವಿಳಾಸ ಕೇರಾಫ್ ಫುಟ್‌ಪಾತ್ ! ಪೊಲೀಸ್ ನಿಯೋಜನೆ
ಪುರಭವನ, ಗಾಂಧಿ ಪಾರ್ಕ್ ನಡುವಣ ಕಾಲುದಾರಿಯಲ್ಲಿ ಹೆಮ್ಮಕ್ಕಳಿಗೆ ಕಿಡಿಗೇಡಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಇದುವರೆಗೆ ನಿರ್ದಿಷ್ಟ ದೂರು ಬಂದಿಲ್ಲ. ಆದರೂ ಜನರ ಆತಂಕ ದೂರವಾಗಿಸಲು ಈ ಪ್ರದೇಶವೂ ಸಹಿತ ಕೆಲವು ಪ್ರಮುಖ ಸ್ಥಳಗಳಲ್ಲಿ ಮುಖ್ಯವಾಗಿ ಸಂಜೆ ವೇಳೆ ಸಿಬಂದಿ ನಿಯೋಜಿಸಲಾಗುವುದು.
– ಟಿ.ಆರ್. ಸುರೇಶ್, ಪೊಲೀಸ್ ಕಮಿಷನರ್ ಕಿಡಿಗೇಡಿಗಳ ಪತ್ತೆಗೆ ಕ್ರಮ
ನೆಹರೂ ಮೈದಾನ ಸುತ್ತ ಮುತ್ತ ಹೆಮ್ಮಕ್ಕಳಿಗೆ ಕಿರುಕುಳ ಕೊಡುವುದನ್ನು ತಡೆಯಲು ಸಂಜೆ ಹೊತ್ತಿನಲ್ಲಿ ಸಿಬಂದಿ ನಿಯೋಜಿಸಿ ಕಿಡಿಗೇಡಿಗಳಿಗೆ ಕಡಿವಾಣ ಹಾಕಲಾಗುವುದು.
-ಉಮಾ ಪ್ರಶಾಂತ್, ಡಿಸಿಪಿ ಸಹಾಯಕ್ಕೆ ಬರುವುದಿಲ್ಲ
ನೆಹರೂ ಮೈದಾನ ಸುತ್ತ ಮುತ್ತಲು ಮಹಿಳೆಯರು ಒಬ್ಬೊಬ್ಬರು ಓಡಾಡುವುದು ಕಷ್ಟ. ಬೊಬ್ಬೆ ಹಾಕಿ ದರೂ ಯಾರೂ ಸಹಾಯಕ್ಕೆ ಬರುವುದಿಲ್ಲ. ಪುರುಷ ಪೊಲೀಸ್ ಸಿಬಂದಿಯನ್ನು ನಿಯೋಜಿಸಬೇಕು. ಸಂಜೆ ವೇಳೆಯಂತೂ ಸಿಬಂದಿ ಬೇಕೇಬೇಕು.
-ಮನೋಜ್, ನಾಗರಿಕ ಹಿಲರಿ ಕ್ರಾಸ್ತಾ