Advertisement

ಹಂಪನಕಟ್ಟೆ ರಸ್ತೆ ಕಾಮಗಾರಿ: ನಗರದ ಹಲವೆಡೆ ಟ್ರಾಫಿಕ್‌ ಜಾಮ್‌

10:06 PM Nov 09, 2020 | mahesh |

ಮಹಾನಗರ: ಹಂಪನಕಟ್ಟೆ ಜಂಕ್ಷನ್‌ನಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಂಡಿದ್ದು, ಸುತ್ತ- ಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿ ಸಲಾಗಿದೆ. ಪರಿಣಾಮ ಸೋಮವಾರ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Advertisement

ಸ್ಮಾರ್ಟ್‌ಸಿಟಿಯಿಂದ ಹಂಪನಕಟ್ಟೆ ಜಂಕ್ಷನ್‌ನಲ್ಲಿ ರಸ್ತೆ ಕಾಂಕ್ರೀಟ್‌, ಒಳಚರಂಡಿ, ನೀರಿನ ಪೈಪ್‌ ಅಳವಡಿಕೆ ಕಾಮಗಾರಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಹಂಪನಕಟ್ಟೆ ಸಂಪರ್ಕಿಸುವ ಮುಖ್ಯರಸ್ತೆಗಳಲ್ಲಿ ರವಿ ವಾರದಿಂದ ಸಂಚಾರ ನಿಷೇಧಿಸ‌ಲಾಗಿದೆ. ಪರಿಣಾಮ ನಗರದ ಹಲವೆಡೆ ಜನರು ಅದರಲ್ಲಿಯೂ ಕಚೇರಿ ವೇಳೆಯಲ್ಲಿ ಸಂಚಾರ ದಟ್ಟಣೆ ಕಿರಿಕಿರಿಗೆ ಸಿಲುಕಿ ಸಂಕಷ್ಟ ಅನುಭವಿಸಿದರು.

ರವಿವಾರ ರಜಾ ದಿನವಾಗಿದ್ದು, ವಾಹನ ಸಂಚಾರ ಕಡಿಮೆ ಇದ್ದರೂ ಕೂಡ ಸಂಚಾರ ಸಮಸ್ಯೆ ಇತ್ತು. ಸೋಮವಾರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದುದ ರಿಂದ ಸಂಚಾರ ಸಮಸ್ಯೆ ಉಲ್ಬಣಿಸಿತ್ತು. ಕೆಎಸ್‌ ರಾವ್‌ ರಸ್ತೆ, ಪಿವಿಎಸ್‌-ಬಂಟ್ಸ್‌ಹಾಸ್ಟೆಲ್‌ ರಸ್ತೆ, ಮಿಲಾ ಗ್ರಿಸ್‌ ರಸ್ತೆ, ಎ.ಬಿ. ಶೆಟ್ಟಿ ಸರ್ಕಲ್‌ ಸಹಿತ ಹಲವೆಡೆ ವಾಹನ ಸಂಚಾರ ಕಷ್ಟಸಾಧ್ಯವಾಯಿತು. ಜ್ಯೋತಿ, ಪಿವಿಎಸ್‌ ಕಡೆಯಿಂದಾಗಿ ಸ್ಟೇಟ್‌ಬ್ಯಾಂಕ್‌ ಕಡೆಗೆ ತೆರಳಲು ಬೆಳಗ್ಗೆ, ಸಂಜೆ ವೇಳೆ ಸುಮಾರು ಒಂದು ಗಂಟೆ ತಗಲಿತು. ಹಂಪನಕಟ್ಟೆ ಕಡೆಯಿಂದ ಕೆ.ಎಸ್‌. ರಾವ್‌ ರಸ್ತೆ ಮೂಲಕ ಪಿವಿಎಸ್‌, ಜ್ಯೋತಿ ಕಡೆಗೆ ತೆರಳುವುದಕ್ಕೂ ಹರಸಾಹಸ ಪಡುವಂತಾಯಿತು.

ಜನರ ಅಸಮಾಧಾನ
ಹಂಪನಕಟ್ಟೆ ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ಸಂಚಾರ ನಿಷೇಧಿಸಿರುವುದಕ್ಕೆ ಜನತೆ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದರು. ನಗರದ ರಥಬೀದಿ, ಬಂದರು ಪ್ರದೇಶ ಸಹಿತ ಹಲವೆಡೆ ಕಾಮಗಾರಿಗಳು ನಡೆ ಯುತ್ತಿವೆ. ಅದಕ್ಕಾಗಿ ಈಗಾಗಲೇ ರಸ್ತೆ ಸಂಚಾರ ಮಾರ್ಪಾಡು ಮಾಡಲಾಗಿದೆ. ಜತೆಗೆ ಹಂಪನಕಟ್ಟೆ ಸಂಪರ್ಕ ರಸ್ತೆಗಳನ್ನು ಕೂಡ ಮಾರ್ಪಾಡು ಮಾಡಿರು ವುದು ಸರಿಯಲ್ಲ. ಒಂದು ಭಾಗದ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ತೆರವು ಮಾಡಿ ಅನಂತರ ಇನ್ನೊಂದು ಭಾಗದ ಕಾಮಗಾರಿ ಕೈಗೊಳ್ಳಬೇಕಿತ್ತು ಎಂದು ಬಸ್‌, ಆಟೋ, ಕಾರು ಚಾಲಕರು ಸಹಿತ ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದರು.

“ಮುಕ್ಕಾಲು ಗಂಟೆ ಬೇಕಾಯಿತು’
“ಎ.ಬಿ. ಶೆಟ್ಟಿ ಸರ್ಕಲ್‌ನಿಂದ ಬಂಟ್ಸ್‌ ಹಾಸ್ಟೆಲ್‌ಗೆ ಪ್ರಯಾಣಿಕರೋರ್ವರಿಗೆ ತುರ್ತಾಗಿ ಹೋಗಬೇಕಿತ್ತು. ಬೇರೆ ದಿನಗಳಲ್ಲಿ 10ರಿಂದ 15 ನಿಮಿಷ ಬೇಕಾಗುತ್ತಿತ್ತು. ಆದರೆ ಸೋಮವಾರ ಮುಕ್ಕಾಲು ಗಂಟೆ ಬೇಕಾಯಿತು’ ಎಂದು ರಿಕ್ಷಾ ಚಾಲಕ ವಿಶ್ವನಾಥ್‌ ಹೇಳಿದರು. “ಸೀಮಿತ ಬಸ್‌ಗಳನ್ನು ಸ್ಟೇಟ್‌ಬ್ಯಾಂಕ್‌ ವರೆಗೆ ತೆರಳಲು ಅವಕಾಶ ನೀಡಿದರೆ ಉತ್ತಮ. ಪರ್ಯಾಯವಾಗಿ ಸೂಚಿಸಿದ ರಸ್ತೆಗಳು ಇಕ್ಕಟ್ಟಾಗಿವೆ. ರಸ್ತೆ ಬಂದ್‌ ಮಾಡುವ ಮೊದಲು ಬಸ್‌ ಚಾಲಕರು, ರಿಕ್ಷಾ ಚಾಲಕರಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರೆ ಇಷ್ಟು ಗೊಂದಲವಾಗುತ್ತಿರಲಿಲ್ಲ. ಏಕಾಏಕಿ ಸಂಚಾರದಲ್ಲಿ ಮಾರ್ಪಾಡುಗೊಳಿಸಿದ ಕಾರಣ ಭಾರೀ ತೊಂದರೆಯಾಗಿದೆ ಎಂದು ಖಾಸಗಿ ಬಸ್‌ ನಿರ್ವಾಹಕರೊಬ್ಬರು ಹೇಳಿದರು.

Advertisement

“ಒಂದೇ ಬಾರಿ ಕಾಮಗಾರಿ ನಡೆಸು ವುದು ತಪ್ಪು’ ಎಂದು ಪಾದಚಾರಿ ವಿಕ್ಟರ್‌ ಹೇಳಿದರು. ಸಂಚಾರಿ ಪೊಲೀಸರು ವಾಹನಗಳ ಸುಗಮ ಓಡಾಟಕ್ಕೆ ಸಾಕಷ್ಟು ಶ್ರಮ ವಹಿಸಿದರೂ ವಾಹನ ಗಳ ದಟ್ಟಣೆಯಿಂದಾಗಿ ಅದು ಸಾಧ್ಯ ವಾಗಲಿಲ್ಲ. ವಾಹನಗಳು ತಮಗೆ ಸ್ಥಳಾವಕಾಶ ಸಿಕ್ಕಿದಲ್ಲಿ ಸಂಚರಿಸಿದವು. ಕೆಲವೆಡೆ ಫ‌ುಟ್‌ಪಾತ್‌, ಪಾರ್ಕಿಂಗ್‌ ಸ್ಥಳಗಳನ್ನೂ ಆಕ್ರಮಿಸಿದವು. ರಸ್ತೆ, ಫ‌ುಟ್‌ಪಾತ್‌ಗಳಲ್ಲಿದ್ದವರು ಪ್ರಾಣಭೀತಿ ಎದುರಿಸುವಂತಾಯಿತು.

ಶಾಸಕರಿಂದ ಸಭೆ
ಸಂಚಾರ ಸಮಸ್ಯೆಗಳನ್ನು ಪರಿಹರಿ ಸುವ ನಿಟ್ಟಿನಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅವರು ಸೋಮವಾರ ಪಾಲಿಕೆಯ ಅಧಿಕಾರಿಗಳು, ಪೊಲೀಸ್‌ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಮಸ್ಯೆಯನ್ನು ಸಾಧ್ಯ ವಾದಷ್ಟು ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಂಗಳವಾರದಿಂದ ರಿಲೀಫ್ ಸಾಧ್ಯತೆ
ಮಂಗಳವಾರದಿಂದ ಸಂಚಾರ ಸಂಕಷ್ಟಕ್ಕೆ ಸ್ವಲ್ಪ ರಿಲೀಫ್ ಸಿಗುವ ಸಾಧ್ಯತೆ ಇದೆ. ಶಾರದಾ ವಿದ್ಯಾ ಲಯ ರಸ್ತೆಯನ್ನು ತೆರವುಗೊಳಿಸಲಾಗುವುದು. ಕೆ.ಎಸ್‌. ರಾವ್‌ ರಸ್ತೆಯಲ್ಲಿ ಹಳೆ ಬಸ್‌ ನಿಲ್ದಾಣ ದಿಂದ ಲೈಟ್‌ಹೌಸ್‌ ಹಿಲ್‌ಗೆ ಸಂಪರ್ಕ ಮಾಡಿಕೊಡ ಲಾಗುವುದು. ಪಿವಿಎಸ್‌ನಿಂದ ಕೆ.ಎಸ್‌.ರಾವ್‌ ರಸ್ತೆ ಮೂಲಕ ಲೈಟ್‌ಹೌಸ್‌ ಹಿಲ್‌ ಕಡೆಗೆ ಹಾಗೂ ಬಲ ಬದಿಗೆ ಶರವು ದೇವಸ್ಥಾನದ ಮೂಲಕ ಕ್ಲಾಕ್‌ಟವರ್‌ಗೆ ತೆರಳಲು ಅವಕಾಶ ನೀಡಲಾಗುವುದು. ಸಾಧ್ಯವಿರುವ ಎಲ್ಲ ಪರ್ಯಾಯ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

ಮಾಹಿತಿ ಸಿಗದೆ ಗೊಂದಲ
ಸೋಮವಾರ ಕೆಲವರು ಸರಿಯಾದ ಮಾಹಿತಿ ಇಲ್ಲದೆ ಸಂಚಾರ ನಿಷೇಧಗೊಂಡ ರಸ್ತೆಗಳಲ್ಲಿಯೂ ಸಂಚರಿಸಲು ಮುಂದಾಗಿದ್ದಾರೆ. ಇದರಿಂದಾಗಿಯೂ ಸಮಸ್ಯೆಯಾಗಿದೆ. ಅಧಿಕಾರಿಗಳು, ಪೊಲೀಸರು ಸಾಕಷ್ಟು ದಿನಗಳ ಮೊದಲೇ ಸಂಚಾರ ಮಾರ್ಪಾಡಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದಿರುವುದರಿಂದ ಗೊಂದಲ ಉಂಟಾಗಿದೆ. ಮಂಗಳವಾರದಿಂದ ಇತರ ಕೆಲವು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾ ಗುವುದು. ಹಂಪನಕಟ್ಟೆಯಲ್ಲಿ 22 ವರ್ಷಗಳಿಂದ ಒಳಚರಂಡಿ ಬ್ಲಾಕ್‌ ಆಗಿದೆ. ಅದನ್ನು ಇಂದಲ್ಲ ನಾಳೆ ಮಾಡಲೇಬೇಕಿದೆ. ಕಾಮಗಾರಿಗಳನ್ನು ನಿಗದಿತ ದಿನಗಳಲ್ಲಿಯೇ ಪೂರ್ಣಗೊಳಿಸಲಾಗುವುದು.
-ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next