Advertisement
ಮಿನಿವಿಧಾನಸೌಧದ ಕೆಳಭಾಗದಲ್ಲಿ ಅಂಡರ್‌ಪಾಸ್‌ನಲ್ಲಿ ಇತ್ತೀಚೆಗೆ ತೆರೆಯ ಲಾಗಿರುವ ತಿಂಡಿತಿನಸುಗಳ ಮಳಿಗೆಗಳು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಉದ್ಯಾನವನ ಕೂಡ ಆಹ್ಲಾದಕರ ಅನುಭವ ನೀಡುತ್ತಿದೆ. ಆದರೆ ಅಂಡರ್‌ಪಾಸ್‌ನ ಮತ್ತೂಂದು ಭಾಗದಲ್ಲಿ (ಪುರಭವನದ ಎದುರು ಭಾಗದ ರಸ್ತೆಯ ಬಳಿ) ಗುಟ್ಕಾ ಜಗಿದು ನೆಲ, ಮೆಟ್ಟಿಲುಗಳಿಗೆ ಉಗುಳಿರುವುದು, ಸಿಗರೇಟ್‌ಗಳನ್ನು ಸೇದಿ ಅದರ ತಂಡುಗಳನ್ನು, ಇತರೆ ಕಸಗಳನ್ನು ಎಸೆದಿರುವುದು ಕಂಡುಬರುತ್ತಿದೆ.
ಅಂಡರ್‌ಪಾಸ್‌ನಿಂದಾಗಿ ನಿತ್ಯ ನೂರಾರು ಮಂದಿಗೆ ಪ್ರಯೋಜನವಾಗಿದೆ. ರಸ್ತೆಯ ನಡುವೆ ಅಪಾಯಕಾರಿಯಾಗಿ ನಡೆದಾಡು ವುದನ್ನು ಇದು ತಪ್ಪಿಸುತ್ತದೆ. ವಾಹನಗಳ ಅಡ್ಡಿ ಆತಂಕವಿಲ್ಲದೆ ಪಾದಚಾರಿಗಳು ಮಿನಿವಿಧಾನ ಸೌಧ ಕಡೆಯಿಂದ ಲೇಡಿಗೋಷನ್ ಕಡೆಗೆ ನೇರವಾಗಿ ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿದೆ. ಇಲ್ಲಿರುವ ಸಣ್ಣ ಉದ್ಯಾನವನವೂ ಆಕರ್ಷಿಸುತ್ತಿದೆ. ಹಾಗಾಗಿ ಈ ಪರಿಸರದ ಸ್ವತ್ಛತೆ ಕಾಪಾಡುವುದಕ್ಕೂ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಸಾರ್ವಜನಿಕರು ಕೂಡ ಕಾಳಜಿ ತೋರಿಸುವುದು ಅಗತ್ಯ. ಸಾಧ್ಯವಾದರೆ ಅಂಡರ್‌ಪಾಸ್ ಪರಿಸರದ ಸ್ವತ್ಛತೆ, ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬಂದಿಯನ್ನು ನಿಯೋಜಿಸುವುದು ಸೂಕ್ತ ಎನ್ನುತ್ತಾರೆ ಅಂಡರ್‌ಪಾಸ್ ಬಳಕೆದಾರರು.