ಜೆರುಸೆಲಮ್: ಹಮಾಸ್ ಭಾನುವಾರ ಬಿಡುಗಡೆ ಮಾಡಲಿರುವ ಮೂರನೇ ಬ್ಯಾಚ್ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್ ಸ್ವೀಕರಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಹಮಾಸ್ ಇಸ್ರೇಲ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ತಾತ್ಕಾಲಿಕ ಒಪ್ಪಂದದ ಭಾಗವಾಗಿ ಹಮಾಸ್ ಹಸ್ತಾಂತರಿಸಲಿರುವ ಒತ್ತೆಯಾಳುಗಳ ಕುಟುಂಬಗಳಿಗೆ ಇಸ್ರೇಲ್ ಸೂಚನೆ ನೀಡಲು ಪ್ರಾರಂಭಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಮಧ್ಯವರ್ತಿ ಪಾತ್ರವನ್ನು ನಿರ್ವಹಿಸುತ್ತಿರುವ ಕತಾರ್ ಇಸ್ರೇಲ್‌ಗೆ ಪಟ್ಟಿಯನ್ನು ನೀಡಿದೆ ಎನ್ನಲಾಗಿದೆ.
ಇದು ನಾಲ್ಕು ದಿನಗಳ ಕದನ ವಿರಾಮದ ಮೂರನೇ ದಿನವಾಗಿದ್ದು, ಹೆಚ್ಚಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಉದ್ದೇಶ ಇದೆ ಎಂದು ಕತಾರ್ ಹೇಳಿದೆ.
ಶನಿವಾರ ರಾತ್ರಿ, ಒತ್ತೆಯಾಳುಗಳ ಎರಡನೇ ಬ್ಯಾಚ್‌ನಲ್ಲಿ, ಹಮಾಸ್‌ನಿಂದ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು. ಇವರಲ್ಲಿ 13 ಇಸ್ರೇಲಿಗಳು ಮತ್ತು ನಾಲ್ಕು ಥಾಯ್ ಪ್ರಜೆಗಳು ಸೇರಿದ್ದಾರೆ. ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆಯಿಂದ ಗಾಜಾಕ್ಕೆ ಮಾನವೀಯ ನೆರವಿನ ಮೇಲೆ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದೆ.
ನಾಲ್ಕು ದಿನಗಳ ಅವಧಿಯಲ್ಲಿ ಒಟ್ಟು 50 ಒತ್ತೆಯಾಳುಗಳನ್ನು 150 ಪ್ಯಾಲೇಸ್ಟಿನಿಯನ್ ಕೈದಿಗಳಿಗೆ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಮೊದಲೇ ನಿರ್ಧಾರ ಮಾಡಿಕೊಳ್ಳಲಾಗಿದೆ. ಒತ್ತೆಯಾಳುಗಳಿಗೆ ಬದಲಾಗಿ ಇಸ್ರೇಲ್ 39 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: Gulf ಕುಂದಗನ್ನಡ ಉತ್ಸವಕ್ಕೆ ಮೆರುಗು ತಂದ “ಪಾಪಣ್ಣ ವಿಜಯ ಗುಣ ಸುಂದರಿ’