ಗಾಜಾ: ಗಾಜಾದ ಮೇಲೆ ಬಾಂಬ್ ದಾಳಿಯನ್ನು ನಿಲ್ಲಿಸದಿದ್ದರೆ ಇಸ್ರೇಲ್ ಒತ್ತೆಯಾಳುಗಳನ್ನು ಕೊಲ್ಲಲಾಗುವುದು ಎಂದು ಎಚ್ಚರಿಸಿದ ಬೆನ್ನಲ್ಲೇ ಹಮಾಸ್ ಸೋಮವಾರ ಇಬ್ಬರು ಇಸ್ರೇಲಿ ಒತ್ತೆಯಾಳುಗಳ ಮೃತ ದೇಹಗಳನ್ನು ತೋರಿಸುವ ವಿಡಿಯೋ ಬಿಡುಗಡೆ ಮಾಡಿದೆ.
ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯನ್ನು ನಿಲ್ಲಿಸದಿದ್ದರೆ ಇಸ್ರೇಲ್ ಒತ್ತೆಯಾಳುಗಳನ್ನು ಹತ್ಯೆ ಮಾಡಲಾಗುವುದು ಎಂದು ಭಯೋತ್ಪಾದಕ ಸಂಘಟನೆಯ ವಕ್ತಾರ ಅಬು ಒಬೈದಾ ಹೇಳಿಕೆ ನೀಡಿದ್ದು ಇದೀಗ ಹಮಾಸ್ ಇಬ್ಬರು ಒತ್ತೆಯಾಳುಗಳನ್ನು ಹತ್ಯೆ ಮಾಡಿದ್ದು ಅವರ ವಿಡಿಯೋ ಅನ್ನು ಬಿಡುಗಡೆ ಮಾಡಿ ಎಚ್ಚರಿಕೆಯ ಸಂದೇಶವನ್ನು ಇಸ್ರೇಲ್ ಗೆ ನೀಡಿದ್ದಾರೆ.
ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಬಿಡುಗಡೆ ಮಾಡಿದ ಹೊಸ ವೀಡಿಯೊದಲ್ಲಿ ಇಸ್ರೇಲ್ ಒತ್ತೆಯಾಳುಗಳಾದ ಯೋಸ್ಸಿ ಶರಾಬಿ (53) ಮತ್ತು ಇಟಾಯ್ ಸ್ವಿರ್ಸ್ಕಿ,(38) ರ ಶವಗಳನ್ನು ತೋರಿಸಿದೆ.
ಇಸ್ರೇಲ್‌ನ ಮಿಲಿಟರಿ ವಕ್ತಾರರು ವೀಡಿಯೊದಲ್ಲಿ ಸತ್ತಿದ್ದಾರೆ ಎಂದು ಹೇಳಲಾದ ಒತ್ತೆಯಾಳುಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಇಸ್ರೇಲ್, ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ‘ಮಾನಸಿಕ ನಿಂದನೆ’ ನಡೆಸುತ್ತಿದೆ ಎಂದು ಆರೋಪಿಸಿದೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ಹಠಾತ್ ದಾಳಿಯ ಸಂದರ್ಭದಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ನ 240 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿಯನ್ನು ನವೆಂಬರ್ ನಲ್ಲಿ ಕದನ ವಿರಾಮದ ಸಮಯದಲ್ಲಿ ಬಿಡುಗಡೆ ಮಾಡಲಾಗಿತ್ತು, ಆದರೆ ಇನ್ನೂ 132 ಮಂದಿ ಒತ್ತೆಯಾಳುಗಳು ಗಾಜಾ ದಲ್ಲೇ ಇದ್ದು ಅದರಲ್ಲಿ 25 ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.