Advertisement

ಕೂಲಿಗಾಗಿ ಆಗ್ರಹಿಸಿ ಹಮಾಲರ ಪ್ರತಿಭಟನೆ

12:13 PM Dec 31, 2019 | Suhan S |

ರಾಯಚೂರು: ಲಾರಿ ಮಾಲೀಕರು ಹಾಗೂ ವರ್ತಕರು ಸರಿಯಾಗಿ ಕೂಲಿ ಹಣ ನೀಡುತ್ತಿಲ್ಲ. ನೇರವಾಗಿ ಹಮಾಲರಿಗೆ ಕೂಲಿ ಕೊಡಿಸುವ ಮೂಲಕ ವಂಚನೆ ತಡೆಗಟ್ಟುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ಹಮಾಲರ ಸಂಘದಿಂದ ನಗರದ ಎಪಿಎಂಸಿ ಕಚೇರ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ಎಪಿಎಂಸಿ ವ್ಯಾಪ್ತಿಯ ವರ್ತಕರ ಅಂಗಡಿಗಳಲ್ಲಿ ಸುಮಾರು 150ಕ್ಕೂ ಅಧಿಕ ಹಮಾಲರು ಮೂರ್‍ನಾಲ್ಕು ದಶಕದಿಂದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾರಿಗಳಿಂದ ಲೋಡಿಂಗ್‌, ಅನ್‌ ಲೋಡಿಂಗ್‌ ಮಾಡುವ ಮೂಲಕ ದುಡಿಯುತ್ತಿದ್ದಾರೆ. ಆದರೆ, ಎರಡು ವರ್ಷದಿಂದ ಕೂಲಿ ಹಣ ತಾವೇ ಪಡೆಯುತ್ತಿರುವ ವರ್ತಕರು ನಮ್ಮ ಶ್ರಮಕ್ಕೆ ತಕ್ಕ ಕೂಲಿ ನೀಡದೆ ವಂಚಿಸುತ್ತಿದ್ದಾರೆ. ಹೀಗಾಗಿ ಕೆಲಸ ಮಾಡಿದ ಹಮಾಲಿಗಳಿಗೆ ನೇರವಾಗಿ ನೀಡುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ದಿನವಿಡೀ ಶ್ರಮ ವಹಿಸಿ ದುಡಿಯುವ ಹಮಾಲರಿಗೆ ಇದರಿಂದ ಅನ್ಯಾಯವಾಗುತ್ತಿದೆ. ಈ ಕುರಿತು ಕಾರ್ಮಿಕ ಇಲಾಖೆ ಹಾಗೂ ಮುಖಂಡರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳದಿದ್ದಲ್ಲಿ ಎಲ್ಲ ಹಮಾಲಿಗಳು ಸೇವೆ ಸ್ಥಗಿತಗೊಳಿಸಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹಮಾಲರ ಸಂಘದ ಸಣ್ಣ ಮಾರೆಪ್ಪ, ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶ ಯಾದವ್‌, ಗೌರವಾಧ್ಯಕ್ಷ ಆದೆಪ್ಪ ಕಾಡೂರು, ಕಾನೂನು ಸಲಹೆಗಾರ ಜಿ.ಎಸ್‌. ವೀರಭದ್ರಪ್ಪ, ಉಪಾಧ್ಯಕ್ಷ ಶಿವಣ್ಣ ಸೇರಿದಂತೆ ಹಮಾಲರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next