Advertisement
1. ಸೇಬುಹಣ್ಣಿನ ಹಲ್ವ ಬೇಕಾಗುವ ಸಾಮಗ್ರಿ: ಸೇಬುಹಣ್ಣು-5, ಸಕ್ಕರೆ- ಅರ್ಧ ಕಪ್, ತುಪ್ಪ -10 ಚಮಚ, ಗೋಡಂಬಿ, ದ್ರಾಕ್ಷಿ, ಕೇಸರಿ.
ಬೇಕಾಗುವ ಸಾಮಗ್ರಿ: ಬೀಟ್‌ರೂಟ್- 5, ತುಪ್ಪ -10 ಚಮಚ, ಹಾಲು- 1/2 ಕಪ್, ಸಕ್ಕರೆ - ಅರ್ಧ ಕಪ್, ಹಾಲಿನ ಪೌಡರ್- 5 ಚಮಚ.
ಮಾಡುವ ವಿಧಾನ: ಬಾಣಲೆಗೆ ತುಪ್ಪ ಹಾಕಿ, ತುರಿದ ಬೀಟ್‌ರೂಟ್ ಅನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದಕ್ಕೆ ಹಾಲು ಹಾಕಿ ಮುಚ್ಚಳ ಮುಚ್ಚಿ , ಹತ್ತು ನಿಮಿಷ ಕುದಿಸಿ. ಇನ್ನೊಂದು ಬಾಣಲೆಗೆ ತುಪ್ಪ, ಹಾಲು, ಹಾಲಿನ ಪೌಡರ್ ಹಾಕಿ ಮಗುಚಿಕೊಳ್ಳಿ, ಈ ಮಿಶ್ರಣಕ್ಕೆ ಈಗಾಗಲೇ ಹುರಿದ ಬೀಟ್‌ರೂಟ್, ಗೋಡಂಬಿ ಹಾಕಿ ಕಲಿಸಿದರೆ ಹಲ್ವ ರೆಡಿ.
Related Articles
ಬೇಕಾಗುವ ಸಾಮಗ್ರಿ: ಪಪಾಯ ಹೋಳು-20, ಹಾಲು- ಅರ್ಧ ಕಪ್, ತುಪ್ಪ -10 ಚಮಚ , ಸಕ್ಕರೆ ಪುಡಿ- ಅರ್ಧ ಕಪ್, ಗೋಡಂಬಿ, ದ್ರಾಕ್ಷಿ, ಏಲಕ್ಕಿಪುಡಿ.
ಮಾಡುವ ವಿಧಾನ: ಪಪಾಯ ಹಣ್ಣಿನ ಹೋಳನ್ನು ತುರಿಯಿರಿ ಅಥವಾ ಚಮಚದಿಂದ ಸ್ಮ್ಯಾಶ್ ಮಾಡಿ. ಬಾಣಲೆಗೆ ತುಪ್ಪ ಹಾಕಿ, ತುರಿದ ಪಪಾಯವನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಆ ಮಿಶ್ರಣಕ್ಕೆ ಹಾಲು, ಸಕ್ಕರೆ ಪೌಡರ್ ಹಾಕಿ ಕಲಸಿ, ಏಲಕ್ಕಿಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಸೇರಿಸಿ, ಮಗುಚಿ.
Advertisement
4. ಮೈದಾ ಹಲ್ವಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು- 1 ಕಪ್, ಸಕ್ಕರೆ- 3 ಕಪ್, ತುಪ್ಪ- 1 ಕಪ್, ಕೇಸರಿ ಬಣ್ಣ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ. ಮಾಡುವ ವಿಧಾನ: ಮೈದಾ ಹಿಟ್ಟಿಗೆ ಸ್ವಲ್ಪ ನೀರು ಹಾಕಿ, ಗಂಟಿಲ್ಲದಂತೆ ಮಗುಚಿ, ತೆಳ್ಳನೆಯ ಪೇಸ್ಟ್ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಅರ್ಧ ಲೋಟ ನೀರು ಹಾಕಿ, ಪಾಕ ಮಾಡಿ. ನಂತರ, ಮೈದಾ ಹಿಟ್ಟಿನ ಮಿಶ್ರಣವನ್ನು ಸಕ್ಕರೆ ಪಾಕಕ್ಕೆ ಹಾಕಿ, ಸಣ್ಣ ಉರಿಯಲ್ಲಿ ಮಗುಚಿ. ಮಿಶ್ರಣ ಗಟ್ಟಿಯಾಗುತ್ತಾ ಬಂದಂತೆ, ಒಂದೊಂದೇ ಚಮಚ ತುಪ್ಪವನ್ನು ಸೇರಿಸುತ್ತಾ ಬನ್ನಿ. ಮಿಶ್ರಣವು, ಪಾತ್ರೆಯ ತಳವನ್ನು ಬಿಡುವವರೆಗೆ ಮಗುಚಿ, ದ್ರಾಕ್ಷಿ-ಗೋಡಂಬಿ ತುಣುಕುಗಳನ್ನು ಸೇರಿಸಿ. ತುಪ್ಪ ಹಚ್ಚಿದ ತಟ್ಟೆಗೆ ಮಿಶ್ರಣವನ್ನು ವರ್ಗಾಯಿಸಿ, ತಣ್ಣಗಾದ ಮೇಲೆ ಚೌಕಾಕಾರದಲ್ಲಿ ಕತ್ತರಿಸಿ. 5. ರಾಗಿ ಹಲ್ವ
ಬೇಕಾಗುವ ಸಾಮಗ್ರಿ: ರಾಗಿ- ಅರ್ಧ ಕಪ್, ತುಪ್ಪ- 6 ಚಮಚ, ಬಿಸಿಹಾಲು- 1 ಲೋಟ, ಸಕ್ಕರೆ- ಕಾಲು ಕಪ್, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ, ದ್ರಾಕ್ಷಿ. ಮಾಡುವ ವಿಧಾನ: ಬಾಣಲೆಗೆ ತುಪ್ಪ ಬಿಸಿ ಮಾಡಿ, ಅದಕ್ಕೆ ರಾಗಿ ಹಿಟ್ಟನ್ನು ಹಾಕಿ ಮಗುಚಿ. (ರಾಗಿ ಹಿಟ್ಟು ಗಂಟುಗಂಟಾಗದಂತೆ ಮಗುಚಬೇಕು) ಹಿಟ್ಟಿನಲ್ಲಿ ಗುಳ್ಳೆಗಳು ಏಳತೊಡಗಿದಾಗ, ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗಿ ನೀರಾಗುತ್ತಿದ್ದಂತೆ ಬಿಸಿ ಹಾಲು ಹಾಕಿ, ಮಗುಚಿ (ಹಾಲನ್ನು ಮೊದಲೇ ಬಿಸಿ ಮಾಡಿಟ್ಟುಕೊಳ್ಳಿ) ಆ ಮಿಶ್ರಣವು ಗಟ್ಟಿಯಾಗಿ, ಪಾತ್ರೆಯ ತಳ ಬಿಡುವವರೆಗೂ ಮಧ್ಯಮ ಉರಿಯಲ್ಲಿಟ್ಟು ಕೈಯಾಡಿಸಿ. ನಂತರ, ಏಲಕ್ಕಿಪುಡಿಯನ್ನು ಸೇರಿಸಿ ಮಗುಚಿ ಒಲೆಯಿಂದ ಇಳಿಸಿ. ಬಾದಾಮಿ, ಗೋಡಂಬಿ, ದ್ರಾಕ್ಷಿಯಿಂದ ಅಲಂಕರಿಸಿ. -ಭಾಗ್ಯ ಬುಳ್ಳಾ