Advertisement

ಹಲುವಾಗಲು: ಬಿಜೆಪಿ ಅಭ್ಯರ್ಥಿಗೆ ಗೆಲುವು

11:01 AM Jan 05, 2019 | Team Udayavani |

ಹರಪನಹಳ್ಳಿ: ತಾಲೂಕಿನ ಹಲುವಾಗಲು ತಾಲೂಕು ಪಂಚಾಯ್ತಿ ಉಪ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಹುಲಿಕಟ್ಟಿ ಕೇಶವಗೌಡ ವಿಜೇತರಾಗಿದ್ದಾರೆ. ಮೈತ್ರಿ ಅಭ್ಯರ್ಥಿ ಯರಬಾಳು ರುದ್ರಪ್ಪ-3060, ಬಿಜೆಪಿ ಅಭ್ಯರ್ಥಿ ಹುಲಿಕಟ್ಟಿ ಕೇಶವಗೌಡ-3194 ಮತಗಳನ್ನು ಪಡೆದು 134 ಮತಗಳ ಅಂತರದಿಂದ ಕೇಶವಗೌಡ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಮೈತ್ರಿ ಅಭ್ಯರ್ಥಿಗೆ ಮುಖಭಂಗವಾಗಿದೆ. 97 ನೋಟಾ ಮತಗಳು ಚಲಾವಣೆಗೊಂಡಿವೆ.

Advertisement

ಈ ಹಿಂದೆ ಹಲುವಾಗಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿ.ಗಣೇಶ್‌ ಗೆಲುವು ಸಾಧಿಸಿದ್ದರು. ನಂತರ ಜೆಡಿಎಸ್‌ ಪಾಳೆಯದಲ್ಲಿ ಗುರುತಿಸಿಕೊಂಡ ಪರಿಣಾಮ ಜಿ.ಗಣೇಶ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಿಂದ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಲಾಗಿತ್ತು. ಆದರೆ ಬಿಜೆಪಿ ಪಕ್ಷ ಕ್ಷೇತ್ರವನ್ನು ಪುನಃ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
 
ಯಡಿಹಳ್ಳಿ ಗ್ರಾಮ ಪಂಚಾಯ್ತಿ: ಅಳಗಂಚಿಕೇರಿ ಗ್ರಾಮದ ಸದಸ್ಯ ಸ್ಥಾನಕ್ಕೆ ಈಶ್ವರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು. ನಂದಿಬೇವೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣವಿಹಳ್ಳಿ ಗ್ರಾಮದ 4 ಸದಸ್ಯ ಸ್ಥಾನಕ್ಕೆ ಸತತವಾಗಿ 6ನೇ ಬಾರಿಗೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ.

 ಸಾಧನೆಗೆ ಸಂದ ಗೆಲುವು: ಬಿಜೆಪಿ ಪಕ್ಷದ ಕಚೇರಿಯಲ್ಲಿ ವಿಜೇತ ಕೇಶವಗೌಡ ಅವರನ್ನು ಅಭಿನಂದಿಸಲಾಯಿತು. ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಾಚರಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ. ನಾಯ್ಕ ಮಾತನಾಡಿ, ಶಾಸಕ ಜಿ.ಕರುಣಾಕರರೆಡ್ಡಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡು ಜನರು ಬಿಜೆಪಿ ಬೆಂಬಲಿಸಿದ್ದಾರೆ ಎಂದರು.

ತಾ.ಪಂ ಉಪಾಧ್ಯಕ್ಷ ಎಲ್‌.ಮಂಜ್ಯನಾಯ್ಕ, ಪಕ್ಷದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಮುಖಂಡರಾದ ಮಲ್ಕಪ್ಪ ಅಕಾರ್‌, ಕರೇಗೌಡ, ಸತ್ತೂರು ಹಾಲೇಶ್‌, ಎಚ್‌.ಟಿ.ಗಿರೀಶಪ್ಪ, ಸಂತೋಷ್‌, ನವೀನ ಪಾಟೀಲ್‌, ಮಾಡ್ಲಿಗೇರಿ ನಾಗರಾಜ್‌, ಬಸವರಾಜ್‌, ದ್ಯಾಮಪ್ಪ, ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ನಾಗರಾಜಪ್ಪ ಅವಿರೋಧ ಆಯ್ಕೆ 
ಹೊನ್ನಾಳಿ: ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಪಂ ವ್ಯಾಪ್ತಿಯ ಬಿದರಹಳ್ಳಿ ಕ್ಷೇತ್ರದ ಸದಸ್ಯರಾಗಿ ನಾಗರಾಜಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಶುಕ್ರವಾರ ಗ್ರಾಪಂ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ, ಸೌಳಂಗ ಗ್ರಾಮದ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಬಸವರಾಜಪ್ಪ ಆಯ್ಕೆಯನ್ನು ಘೋಷಿಸಿದರು. ಹಿಂದಿನ ಗ್ರಾಪಂ ಸದಸ್ಯ ಎಸ್‌.ಯಶವಂತರಾವ್‌ ನಿಧನದಿಂದಾಗಿ ತೆರವಾಗಿದ್ದ ಗ್ರಾಪಂ ಸದಸ್ಯ ಸ್ಥಾನಕ್ಕೆ ನಾಗರಾಜಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದ
ಪ್ರಯುಕ್ತ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು. ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ತಮ್ಮ ಕಚೇರಿಯಲ್ಲಿ ಸದಸ್ಯತ್ವದ ಪ್ರಮಾಣ ಪತ್ರ ವಿತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next