ಗೋಧಿ ಹಿಟ್ಟು ಅರ್ಧ ಕಪ್
ಚಿರೋಟಿ ರವೆ (ಸೂಜಿರವೆ)ಅರ್ಧಕಪ್
ಹಾಲು ಅರ್ಧ ಲೀಟರ್
ಕಂಡೆನ್ಸಡ್ ಮಿಲ್ಕ್ ಕಾಲು ಕಪ್
ಎಣ್ಣೆ (1 ಚಮಚ ಹಿಟ್ಟಿಗೆ ಮತ್ತು ಪೂರಿ ಕರಿಯಲು)
ಸಕ್ಕರೆ-5 ಚಮಚ
ಏಲಕ್ಕಿ ಪುಡಿ-1 ಚಮಚ
ಕೇಸರಿ ಎಸಳು-ಸ್ವಲ್ಪ
ಬಾದಾಮಿ-3 ಚಮಚ
ಉಪ್ಪು ರುಚಿಗೆ ತಕ್ಕಷ್ಟು.
Advertisement
ಮಾಡುವ ವಿಧಾನಗೋಧಿ ಹಿಟ್ಟು ಮತ್ತು ಚಿರೋಟಿ ರವೆ ಸೇರಿಸಿ ಸ್ವಲ್ಪ ಉಪ್ಪು, 1 ಚಮಚ ಎಣ್ಣೆ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಅನಂತರ ಹಾಲನ್ನು ಕಡಾಯಿಯಲ್ಲಿ ಹಾಕಿ ಕುದಿಸಿ, ಹಾಲು ಚೆನ್ನಾಗಿ ಕುದಿದು ಸ್ವಲ್ಪ ಬತ್ತಿದಾಗ ಕಂಡೆನ್ಸಡ್ ಹಾಲು ಹಾಕಿ, ಕೇಸರಿಯನ್ನು ಬಿಸಿ ಹಾಲಿನಲ್ಲಿ ನೆನೆಸಿ ಸೇರಿಸಿ. ಅನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಹಾಲನ್ನು ಚೆನ್ನಾಗಿ ಕುದಿಸಿ ಅಗಲ ಬಾಯಿಯಿರುವ ಪಾತ್ರೆಯಲ್ಲಿ ಹಾಕಿ. ಕಲಸಿಟ್ಟ ಹಿಟ್ಟಿನಲ್ಲಿ ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಗರಿ ಗರಿ ಕರಿಯಿರಿ. ಕರಿದ ಪೂರಿ ಬಿಸಿ ಇರುವಾಗಲೇ ಮಧ್ಯ ಮಡಚಿ ಹಾಲಿನಲ್ಲಿ ಹಾಕಿ. ಮೇಲೆ ಬಾದಾಮಿ ಚೂರು ಉದುರಿಸಿ. ಒಂದು ಗಂಟೆ ಪೂರಿ ಹಾಲಿನಲ್ಲಿ ನೆನೆದ ಬಳಿಕ ಹಾಲಿನೊಂದಿಗೆ ಸೇರಿಸಿ ಸವಿಯಿರಿ.