ಹನೂರು: ಮಲೆ ಮಹದೇಶ್ವರ ಬೆಟ್ಟ ದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಹಾಲರವಿ ಉತ್ಸವ ಮತ್ತು ಅಮಾವಾಸ್ಯೆ ಪೂಜಾ ಕೈಂಕರ್ಯಗಳು ಜರುಗಿದವು. ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ದೇವರಿಗೆ ತ್ರಿಕಾಲ ಅಭಿಷೇಕ ನೆರವೇರಿಸ ಲಾಯಿತು. ತೈಲಾಭಿಷೇಕ ಬಳಿಕ ಮಾದ ಪ್ಪನಿಗೆ ರುದ್ರಾಭಿಷೇಕ, ವಿಭೂತಿ ಅಭಿ ಷೇಕ, ಬಿಲ್ವಾರ್ಚನೆ ನಡೆಸಲಾಯಿತು.
ಹಾಲರುವೆ ಉತ್ಸವ: ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆ ಗುರು ವಾರ ಬೆಳಗ್ಗೆ ಬೇಡಗಂಪಣ ಕುಲದ 108 ಹೆಣ್ಣುಮಕ್ಕಳು ದಟ್ಟಡವಿಯ ಮಧ್ಯದಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಮಹದೇಶ್ವರ ಸ್ವಾಮಿಯ ಪರಮ ಶಿಷ್ಯರಾದ ಕಾರಯ್ಯ ಮತ್ತು ಬಿಲ್ಲಯ್ಯನ ಮಡುವನ್ನು ತಲುಪಿ ಪವಿತ್ರ ಸ್ನಾನ ಮಾಡಿ ಹಾಲರವಿ ಗುಂಬಗಳಿಗೆ ಧೂಪ, ದೀಪ ಮಂಗಳಾರತಿ ಮಾಡಿದರು. ಬಳಿಕ ಬೇಡಗಂಪಣ ಅರ್ಚಕರಿಂದ ಕತ್ತಿ ಪವಾಡ ಸೇವೆಯನ್ನು ನೆರವೇರಿಸಲಾಯಿತು.
ಇದನ್ನೂ ಓದಿ:- ಈ ವಾರ ತೆರೆಗೆ ‘ಗುಲಾಲ್ ಡಾಟ್ ಕಾಂ’
ಬಳಿಕ ಸತ್ತಿಗೆ ಸುರಪಾನಿ, ನಂದಿಕಂಬ, ತಮಟೆ, ವಾದ್ಯಮೇಳ, ಜಾಗಟೆ ಸಮೇತ ಮೆರವಣಿಗೆಯಲ್ಲಿ ಸಾಗಿ ದೇವಾಲಯವನ್ನು ತಲುಪಿ ಮಾದಪ್ಪನಿಗೆ ಮಜ್ಜನ ಸೇವೆ ನೆರವೇರಿಸಲಾಯಿತು. ಬಳಿಕ ಪೂಜೆ ನೆರವೇರಿಸಿ ಹಾಲರವಿ ಉತ್ಸವದಲ್ಲಿ ಭಾಗವಹಿಸಿದ್ದವರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಪ್ರಾಧಿಕಾರದಿಂದ ಉಚಿತ ಸೀರೆ, ಕುಪ್ಪಸ: ಗುರುವಾರ ಜರುಗಿದ ಹಾಲರವಿ ಉತ್ಸವದಲ್ಲಿ ಭಾಗವಹಿಸುವ ಹೆಣ್ಣು ಮಕ್ಕಳಿಗೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದವತಿ ಯಿಂದ ಉಚಿತ ಸೀರೆ ಮತ್ತು ಕುಪ್ಪಸ ವಿತರಿಸಲಾಗಿತ್ತು. ಅಲ್ಲದೆ ಹರಕೆ ಹೊತ್ತ ಭಕ್ತಾದಿಗಳು ಹಾಲರವಿ ಉತ್ಸವದಲ್ಲಿ ಭಾಗವಹಿಸುವ ಬಾಲಕಿಯರಿಗೆ ಕೈಬಳೆ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ನೀಡಿ ಭಕ್ತಿ ಮೆರೆದರು.
ಮಹಾರಥೋತ್ಸವ, ತೆಪ್ಪೋತ್ಸವ ರದ್ದು: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಬಲಿಪಾಡ್ಯಮಿ ಯ ಬೆಳಗ್ಗೆ ಮಹಾರಥೋತ್ಸವ ಮತ್ತು ರಾತ್ರಿ ತೆಪ್ಪೋತ್ಸವ ಜರುಗುತ್ತಿತ್ತು. ಈ ಮಹಾರಥೋತ್ಸವ ವನ್ನು ಕಣ್ತುಂಬಿ ಕೊಳ್ಳಲು 4 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕಾದ ಹಿನ್ನೆಲೆ ಮಹಾಥೋ ತ್ಸವ ಮತ್ತು ತೆಪ್ಪೋತ್ಸವವನ್ನು ರದ್ದು ಮಾಡಲಾಗಿದೆ.