Advertisement

ಹಳಿಯಾಳ ಪಿಎಸ್‌ಐ ಪತ್ನಿ ಆತ್ಮಹತ್ಯೆಗೆ ಶರಣು

11:54 AM Dec 20, 2017 | udayavani editorial |

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಿಎಸ್‌ಐ ಮಲ್ಲಪ್ಪ ಎಸ್‌ ಹೂಗಾರ ಅವರ ಪತ್ನಿ ವಿಜಯಲಕ್ಷ್ಮೀ ಹೂಗಾರ (28) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

Advertisement

ಪಿಎಸ್‌ಐ ಮಲ್ಲಪ್ಪ ಅವರು ರಾತ್ರಿ ಪಾಳಿಯ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಮರಳಿದಾಗ ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ದಿಗ್ಭ್ರಮೆಗೊಂಡರು. ಸುಮಾರು 7.30 ರ ಹೊತ್ತಿಗೆ ವಿಜಯಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 

ಪಿಎಸ್‌ಐ ಮಲ್ಲಪ್ಪ ಹೂಗಾರ ಮತ್ತು ವಿಜಯಲಕ್ಷ್ಮೀ ಅವರಿಗೆ ಆರು ವರ್ಷಗಳ ಹಿಂದೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿ  ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಮಲ್ಲಪ್ಪ ಹೌಹಾರಿ ಬೊಬ್ಬಿಟರು. ಇದನ್ನು ಕೇಳಿ ಕ್ವಾರ್ಟರ್ಸ್‌ನಲ್ಲಿದ್ದ ಸಿಪಿಐ ಧಾವಿಸಿ ಬಂದು ವಿಜಯಲಕ್ಷ್ಮೀ ಅವರನ್ನು ನೇಣಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next