Advertisement
ಕಾರ್ಕಳ ಪುರಸಭೆಯ ಅರ್ಧ ಅವಧಿ ಪೂರ್ಣಗೊಂಡಿ ದ್ದರೂ ಇನ್ನೂ ಅರ್ಧಕ್ಕರ್ಧ ಹುದ್ದೆಗಳು ಖಾಲಿ ಬಿದ್ದಿವೆ. ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎನ್ನುವ ದೂರುಗಳಿವೆ. ಇದಕ್ಕೆ ಸಿಬಂದಿ ಕೊರತೆ ಕಾರಣ. ತೆರವಾದ ಸ್ಥಾನಕ್ಕೆ ಮರು ನೇಮಕ ಆಗದಿರುವುದು ಆಡಳಿತಕ್ಕೆ ತಲೆನೋವಾಗಿದೆ.
Related Articles
Advertisement
ತೆರಿಗೆ, ಸಂಪನ್ಮೂಲ ಸಂಗ್ರಹಕ್ಕೆ ತೊಡಕುಪುರಸಭೆ ವ್ಯಾಪ್ತಿಯಲ್ಲಿ ಸರಕಾರದ ವಿವಿಧ ಹಣಕಾಸು ಯೋಜನೆಗೆ ಸಂಬಂಧಿಸಿ ಯೋಜನೆಗಳು ಕಾರ್ಯಗತವಾಗಿದ್ದರೂ, ಅಭಿಯಂತರ ಹು¨ªೆ ಸಹಿತ ಪ್ರಮುಖ ಹುದ್ದೆ ತೆರವಾಗಿರುವ ಕಾರಣ ಎಸ್ಟಿಮೇಟ್ ಮಾಡಿಸಲಾಗುತ್ತಿಲ್ಲ. ಮಳೆಗಾಲ ಪೂರ್ವ ಸಿದ್ಧತೆ ಸೇರಿ ವಿವಿಧ ಕೆಲಸ ಕಾರ್ಯ ಕ್ಲಪ್ತ ಸಮಯದಲ್ಲಿ ನೆರವೇರಿಸಲೂ ತೊಂದರೆಯಾಗುತ್ತಿದೆ. ತೆರಿಗೆ ಮತ್ತಿತರ ಸಂಪನ್ಮೂಲ ಸಂಗ್ರಹಕ್ಕೂ ತೊಡಕಾಗಿದೆ. ಈ ಎಲ್ಲ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಸರಕಾರಿ ಮಟ್ಟದಲ್ಲಿ ಸಿಬಂದಿ ನೇಮಕ ಪ್ರಕ್ರಿಯೆಗಳಿಗೆ ಆದ್ಯತೆ ಸಿಗುವಂತೆ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಖಾಲಿ ಹುದ್ದೆಗಳು
ಪ್ರಥಮ ದರ್ಜೆ ಸಹಾಯಕ ಹುದ್ದೆ 2; ಸ್ಟೆನೋಗ್ರಾಫರ್, ಜೂನಿಯರ್ ಪ್ರೋಗ್ರಾಮ್ ಆಫೀಸರ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ನೀರು ಸರಬರಾಜು ಅಪರೇಟರ್ 4 ಹುದ್ದೆ, ಕಂಪ್ಯೂಟರ್ ಡಾಟಾ ಎಂಟ್ರಿ, ಜೂನಿಯರ್ ಆರೋಗ್ಯ ಇನ್ಸ್‌ಪೆಕ್ಟರ್ 2 ಹುದ್ದೆ, ದ್ವಿತೀಯ ದರ್ಜೆ ಸಹಾಯಕ 3, ಬಿಲ್ ಕಲೆಕ್ಟರ್, ಚಾಲಕ 2 ಹುದ್ದೆ, ಸಹಾಯಕ ನೀರು ಸರಬರಾಜು ಅಪರೇಟರ್ 4 ಹುದ್ದೆ, ಸ್ಯಾನಿಟರಿ ಸೂಪರ್‌ವೈಸರ್ 2, ಸೀನಿಯರ್ ವಾಲ್‌ಮೆನ್ 2 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. 18 ಪೌರ ಕಾರ್ಮಿಕರ ಕೊರತೆ
ನಗರದಲ್ಲಿ ತ್ಯಾಜ್ಯ ಹೆಚ್ಚುತ್ತಿದ್ದು, ಇದರ ವಿಲೇವಾರಿ ಸಮಸ್ಯೆ ಆಡಳಿತಕ್ಕೆ ಸವಾಲಾಗಿದೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಾಗಿ ಬೇಕಾಗಿರುವುದು ಇಲ್ಲಿ ಪೌರ ಕಾರ್ಮಿಕರು, ಪುರಸಭೆ ವ್ಯಾಪ್ತಿಯಲ್ಲಿ 38 ಪೌರ ಕಾರ್ಮಿಕರು ಇರಬೇಕಿದ್ದು, 18 ಪೌರ ಕಾರ್ಮಿಕರ ಕೊರತೆಯಿದೆ. ಈಗಿರುವುದು ಕೇವಲ 20 ಮಂದಿ ಮಾತ್ರ. ಇಷ್ಟು ಮಂದಿಯನ್ನು ಬಳಸಿಕೊಂಡು ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ನಡೆಸುವುದು ಆಡಳಿತಕ್ಕೆ ತ್ರಾಸದಾಯಕವಾಗಿದೆ. -ಬಾಲಕೃಷ್ಣ ಭೀಮಗುಳಿ