Advertisement
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಟ್ಟು ತಪ್ಪು ಮಾಡಿದೆ ಎಂದು ತಮ್ಮ ಹೇಳಿಕೆಗೆ ಸಮಜಾಯಿಸಿ ನೀಡಿದ ಅವರು, ಕಾರ್ಯಕರ್ತರು ನೀವೇಕೆ ಪಕ್ಷ ಬಿಟ್ಟು ಹೋದಿರಿ, ನಮ್ಮನ್ನು ಏಕೆ ಕೇಳಲಿಲ್ಲ ಎಂದೆಲ್ಲ ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸುವಾಗ ನಿಮಗೆ ಕೇಳದೇ ಹೋಗಿದ್ದು ತಪ್ಪಾಯ್ತಪ್ಪಾ ಅಂತ ಹೇಳಿದ್ದೆ. ಆದರೆ ಮಾಧ್ಯಮಗಳು `ಕೇಳದೇ’ ಎನ್ನುವ ಪದ ಕತ್ತರಿಸಿ ಕೇವಲ ನಾನು ಹೋಗಿ ತಪ್ಪು ಮಾಡಿದೆ ಎಂಬುದನ್ನು ಪ್ರಸಾರ ಮಾಡಿ ಗೊಂದಲ ಸೃಷ್ಟಿಸಿವೆ ಎಂದರು.
Related Articles
Advertisement
ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲೇ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಗೆದ್ದು ಬರುತ್ತೇನೆ ಎಂದರು.
ಇದನ್ನೂ ಓದಿ : ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಪಠ್ಯಕ್ರಮದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅಂತಿಮ ನಿರ್ಮಾನ ಶಿಕ್ಷಣ ಸಚಿವ ನಾಗೇಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟದ್ದು ಎಂದರು.
ಬಿಜೆಪಿ ಪಕ್ಷದಲ್ಲಿ ಯಡಿಯೂಪ್ಪ ಹಾಗೂ ಬಿ.ಎಲ್.ಸಂತೋಷ ಮಧ್ಯೆ ಗುಂಪುಗಾರಿಕೆ, ಬಣ ರಾಜಕಾರಣವಿಲ್ಲ. ಎಲ್ಲರೂ ಬಿಜೆಪಿ ಪಕ್ಷದವರೇ, ಇದೆಲ್ಲ ಊಹಾಪೋಹ ಮಾತ್ರ ಎಂದರು.
ಸಂಘಟನಾ ಚತುರರಾಗಿರುವ ಕೇಂದ್ರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪಕ್ಷದ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಸಂಪುಟ ವಿಸ್ತರಣೆ ವೇಳೆ ವರಿಷ್ಠರು ಅವಕಾಶ ನೀಡುವ ನಿರೀಕ್ಷೆ ಇದೆ ಎಂದರು.