Advertisement

ಚರಂಡಿ ಕಾಮಗಾರಿ ಅರ್ಧಕ್ಕೆ, ದಾರಿ ದೀಪಗಳೂ ಇಲ್ಲ!

12:36 AM Jan 10, 2020 | Sriram |

ಪಡುಬಿದ್ರಿ: ಹೆದ್ದಾರಿ ವಿಸ್ತರಣೆ ಹೆಸರಲ್ಲಿ ಹಲವು ವರ್ಷಗಳಿಂದ ಕಾಮಗಾರಿಗಳು ನಡೆಯುತ್ತಿದ್ದರೂ ಅದಿನ್ನೂ ಪೂರ್ಣಗೊಳ್ಳುವ ಮಟ್ಟಕ್ಕೆ ಬಂದಿಲ್ಲ. ಇದರಿಂದ ಪಡುಬಿದ್ರಿಯಲ್ಲಿ ಇನ್ನೂ ಸಮಸ್ಯೆಗಳು ಮುಂದುವರಿದೇ ಇದೆ. ಮಳೆಗಾಲದಲ್ಲಿ ಇದು ಇನ್ನಷ್ಟು ಅಧ್ವಾನಕ್ಕೆ ಕಾರಣವಾಗುತ್ತದೆ.

Advertisement

ಪೇಟೆಯ ಹೃದಯಭಾಗದಲ್ಲೇ ಒಳ ಚರಂಡಿ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ. ಇಲ್ಲಿನ ಪಂಚಾಯತ್‌ ಬದಿಯಲ್ಲಿ ಕೆಲಸ ಮುಗಿಸಿದ್ದರೂ ಕಾಮಗಾರಿ ಗುಣಮಟ್ಟವಿಲ್ಲ. ಇದರಲ್ಲಿನ ಕಾಂಕ್ರೀಟ್‌ ಸ್ಲಾéಬ್‌ ಈಗಲೇ ಒಳಚರಂಡಿ ಒಳಗೆ ಬಿದ್ದಿದೆ.

ದಾರಿದೀಪ ಉರಿಯುತ್ತಿಲ್ಲ
ವರ್ಷಗಳ ಹಿಂದೆ ರಸ್ತೆ ಮಧ್ಯೆ ದಾರಿದೀಪ ಅಳವಡಿಸಿದ್ದರೂ ಅವುಗಳು ಉರಿಯುತ್ತಿಲ್ಲ. ಮೆಸ್ಕಾಂ ಸಂಪರ್ಕಕ್ಕೆ ಅವುಗಳನ್ನು ಜೋಡಿಸಿಲ್ಲ. ದೀಪಗಳು ರಾತ್ರಿ ಹೊತ್ತಲ್ಲಿ ಉರಿಯದೇ ಪ್ರಯಾಣಿಕರು, ಪಾದಚಾರಿಗಳು ತೊಂದರೆಗೊಳಗಾಗಿದ್ದಾರೆ. ಒಂದು ಅಪಘಾತವೂ ಇತ್ತೀಚೆಗೆ ನಾರಾಯಣ ಗುರು ಸಭಾಭವನದ ಎದುರು ಭಾಗದಲ್ಲಿ ನಡೆದಿತ್ತು. ಈ ಎರಡೂ ವಿಚಾರಗಳ ಬಗ್ಗೆ ನವಯುಗ ಅಧಿಕಾರಿ ಶಂಕರ್‌ ರಾವ್‌ ಅವರು ಪತಿಕ್ರಿಯಿಸಿದ್ದು, ಸರಿಪಡಿಸಲು ಜನರನ್ನು ರವಾನಿಸುವುದಾಗಿ ಹೇಳಿದ್ದಾರೆ.

ತುರ್ತಾಗಿ ಆಗಬೇಕಾದ್ದು
ಬಾಯ್ದೆರೆದಿರುವ ಚರಂಡಿ ಸ್ಲಾéಬ್‌ಗಳನ್ನು ಸರಿಯಾಗಿ ಮುಚ್ಚುಬೇಕು. ಇದರಿಂದ ಸಂಭಾವ್ಯ ಅವಘಡ ತಪ್ಪಿಸಬಹುದು. ಬೀದಿ ದೀಪಗಳನ್ನು ತತ್‌ಕ್ಷಣ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕಾದ್ದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next