Advertisement

ಅರ್ಧದಷ್ಟು ಕೆಎಸ್ಸಾರ್ಟಿಸಿ ನೌಕರರಿಗೆ ಮತದಾನ ಭಾಗ್ಯವಿಲ್ಲ!

02:55 AM Apr 26, 2019 | Team Udayavani |

 ವಿಶೇಷ ವರದಿ-ಮಹಾನಗರ: ಸಾರ್ವ ಜನಿಕರಿಗೆ ಪ್ರತಿದಿನ ಉತ್ತಮ ಸೇವೆ ಸಲ್ಲಿಸುತ್ತಿರುವ ದೇಶದ ನಂಬರ್‌ ಒನ್‌ ಸಾರಿಗೆ ಸಂಸ್ಥೆಯಾದ ಕೆಎಸ್ಸಾರ್ಟಿಸಿಯ ಹೆಚ್ಚಿನ ಸಿಬಂದಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿದ್ದಾರೆ.

Advertisement

ಉತ್ತರ ಕನ್ನಡ ಸಹಿತ ರಾಜ್ಯದ 14 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಮಂಗಳೂರು, ಪುತ್ತೂರು, ಉಡುಪಿ ವಿಭಾಗಗಳಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಕೆಎಸ್ಸಾರ್ಟಿಸಿ ಚಾಲಕ, ನಿರ್ವಾಹಕ ಸಹಿತ ಮೆಕ್ಯಾನಿಕ್‌ ವಿಭಾ ಗದಲ್ಲಿ ದುಡಿಯುತ್ತಿರುವ ಅರ್ಧದಷ್ಟು ಕಾರ್ಮಿಕರು ಮತದಾನಕ್ಕೆ ತೆರಳಲು ಸಾಧ್ಯವಾಗಲಿಲ್ಲ.

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ದಲ್ಲಿ 1,800 ಚಾಲಕರು ನಿರ್ವಾಹಕರು ಸೇರಿ ಒಟ್ಟು ಸುಮಾರು 2,500 ಮಂದಿ ಸಿಬಂದಿ, ಪುತ್ತೂರು ವಿಭಾಗದಲ್ಲಿ 1,824 ಚಾಲಕರು, ನಿರ್ವಾಹಕರು ಸೇರಿ 2,423 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಯಾಣಿಕರಿಗೆ ಬಸ್‌ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು ಎಂಬ ಉದ್ದೇಶದಿಂದ ಹೆಚ್ಚಿನ ಕಾರ್ಮಿ ಕರು ಕೆಲಸ ನಿರ್ವಹಿಸಿದ್ದರು. ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ದಲ್ಲಿ ಉ.ಕ. ಜಿಲ್ಲೆಯ ಶೇ.50ರಷ್ಟು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಅರ್ಧದಷ್ಟು ಮಂದಿ ಮತದಾನಕ್ಕೆಂದು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.

ಮಂಗಳೂರು ಕೆಎಸ್ಸಾರ್ಟಿಸಿ ವಿಭಾ ಗದಿಂದ (ಮಂಗಳೂರಿನಲ್ಲಿ-3, ಕುಂದಾ ಪುರ, ಉಡುಪಿ) ಪ್ರತೀ ದಿನ ವಿವಿಧ ಪ್ರದೇಶಗಳಿಗೆ ಸುಮಾರು 350ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಅದರಂತೆಯೇ ಪುತ್ತೂರು ವಿಭಾಗದಿಂದ (ಪುತ್ತೂರು, ಬಿ.ಸಿ. ರೋಡ್‌, ಧರ್ಮಸ್ಥಳ, ಮಡಿಕೇರಿ, ಸುಳ್ಯ) ಸುಮಾರು 560 ಬಸ್‌ಗಳು ಸಂಚರಿಸುತ್ತವೆ. ಇವುಗಳಲ್ಲಿ ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿ 2ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ಡಿಪೋದ ಸುಮಾರು 50ಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ ಬಸ್‌ಗಳು ಚುನಾವಣ ಕರ್ತವ್ಯಕ್ಕೆ ತೆರಳಿದ್ದವು.

ಶೇ.30ರಷ್ಟು ನೌಕರರಿಗೆ ಮಾತ್ರ ಮತದಾನಕ್ಕೆ ಅವಕಾಶ
ಕೆಎಸ್ಸಾರ್ಟಿಸಿ ಸಿಬಂದಿ ಮತ್ತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಅವರು “ಉದಯ ವಾಣಿ’ಗೆ ಪ್ರತಿಕ್ರಿಯಿಸಿ, ಕೆಎಸ್ಸಾರ್ಟಿಸಿ ಚಾಲಕರು, ನಿರ್ವಾಹಕರು ಸಹಿತ ಇತರ ಸಿಬಂದಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯ ಚುನಾವಣ ಆಯುಕ್ತರಿಗೆ ಈ ಹಿಂದೆಯೇ ಪತ್ರ ಬರೆದಿದ್ದೇವೆ. ಮೇಲಧಿಕಾರಿಗಳಿಗೆ ತಿಳಿ ಸಲಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡುತ್ತಾರೆ.
ಇದರಿಂದಾಗಿ ಸುಮಾರು ಶೇ.30ರಷ್ಟು ನೌಕರರಿಗೆ ಮಾತ್ರ ಮತದಾನಕ್ಕೆ ಅವಕಾಶ ದೊರಕಿದೆ ಎನ್ನುತ್ತಾರೆ.

Advertisement

ಅಂಚೆ ಮತದಾನಕ್ಕೆ ಅವಕಾಶವಿಲ್ಲ
ಚುನಾವಣ ಕರ್ತವ್ಯಕ್ಕೆ ನಿಯೋಜಿಸಿರುವ ಬಸ್‌ ಚಾಲಕ, ನಿರ್ವಾಹಕರಿಗೆ ಮಾತ್ರ ಅಂಚೆ ಮತದಾನಕ್ಕೆ ಅವಕಾಶ. ಆದರೆ ಎಂದಿನಂತೆ ಕರ್ತವ್ಯ ನಿರ್ವಹಿ ಸುತ್ತಿರುವ ಕಾರ್ಮಿಕರಿಗೆ ಮತ ದಾನಕ್ಕೆ ಅವಕಾಶವಿರಲಿಲ್ಲ. ಆದರೂ ಕೆಲವು ಸಿಬಂದಿ ರಜೆ ಹಾಕಿ ಮತದಾನಕ್ಕೆಂದು ತಮ್ಮ ಊರುಗಳಿಗೆ ತೆರಳಿದ್ದರು. ಇದೇ ಕಾರಣಕ್ಕೆ ಜಿಲ್ಲೆಯ ಕೆಲವು ರೂಟ್‌ಗಳಲ್ಲಿ ಬಸ್‌ ಸಂಚಾರದಲ್ಲಿಯೂ ವ್ಯತ್ಯಯವಾಗಿತ್ತು.

 ಸಿಬಂದಿ ಮತದಾನಕ್ಕೆ
ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಸಿಬಂದಿ ಮತದಾನಕ್ಕೆ ತಮ್ಮ ಊರುಗಳಿಗೆ ತೆರಳಿದ್ದಾರೆ. ಉತ್ತರ ಕನ್ನಡ ಮೂಲದ ಕಾರ್ಮಿಕರು ತಮ್ಮ ಎಪಿಕ್‌ ಕಾರ್ಡ್‌ ಅನ್ನು ತಾವು ದುಡಿಯುವ ಪ್ರದೇಶಕ್ಕೆ ವರ್ಗಾವಣೆ ಮಾಡಿಕೊಂಡಿಲ್ಲ. ಇದರಿಂದ ಕೆಲವೊಬ್ಬರು ಮತದಾನಕ್ಕೆ ತಮ್ಮ ಊರುಗಳಿಗೆ ತೆರಳುವಂತಾಗಿದೆ.
 - ದೀಪಕ್‌ ಕುಮಾರ್‌
ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿ

 ಮನವಿ ಮಾಡಿದ್ದೆವು
ಕೆಎಸ್ಸಾರ್ಟಿಸಿಯ ಎಲ್ಲ ಸಿಬಂದಿ ಚುನಾವಣೆಯ ದಿನ ಮತದಾನಕ್ಕೆ ಅವಕಾಶ ಕೊಡಬೇಕು. ಇಲ್ಲವಾದರೆ ಅಂಚೆ ಮತದಾನಕ್ಕೆ ಅವಕಾಶ ನೀಡಬೇಕು. ಈ ಬಗ್ಗೆ ಈಗಾಗಲೇ ಮುಖ್ಯ ಚುನಾವಣ ಆಯುಕ್ತರಿಗೆ ಮತ್ತು ಸಾರಿಗೆ ನಿಗಮಕ್ಕೆ ಮನವಿ ನೀಡಿದ್ದೆವು. ಆದರೆ ಪರಿಗಣಿಸಲಿಲ್ಲ. ಮುಂಬರುವ ಚುನಾವಣೆಯ ವೇಳೆ ನಮ್ಮ ಮನವಿ ಪರಿಗಣಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ.
– ಪ್ರವೀಣ್‌ ಕುಮಾರ್‌
ಕೆಎಸ್ಸಾರ್ಟಿಸಿ ಸಿಬಂದಿ ಮತ್ತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next