ಅಲಪ್ಪುಳ, ಕೇರಳ : ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಲಿಂಗಾಂತರಿ ಮಹಿಳೆಯನ್ನು ಅರೆ ನಗ್ನಗೊಳಿಸಲಾದ ವಿಡಿಯೋ ಚಿತ್ರಿಕೆಯೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವುದನ್ನು ಅನುಸರಿಸಿ ಮಹಿಳಾ ಪೊಲೀಸ್ ಅಧಿಕಾರಿಯನ್ನು, ವಿಚಾರಣೆ ಬಾಕಿ ಇರುತ್ತಾ, ಅಮಾನತುಗೊಳಿಸಲಾಗಿದೆ.
ಕಳೆದ ಮಾರ್ಚ್ 22ರಂದು ಸಾರ್ವಜನಿಕರಿಗೆ ತೊಂದರೆ ಉಂಟಾದ ದೂರನ್ನು ಅನುಸರಿಸಿ ಪೊಲೀಸರು ಲಿಂಗಾಂತರಿ ಮಹಿಳೆಯನ್ನು ಸಾರ್ವಜನಿಕ ಸ್ಥಳದಿಂದ ಅಲಪ್ಪುಳ ದಕ್ಷಿಣ ಪೊಲೀಸ್ ಠಾಣೆಗೆ ಕರೆ ತಂದಿದ್ದರು.
ಮದ್ಯದ ಅಮಲಿನಲ್ಲಿದ್ದ ಲಿಂಗಾಂತರಿ ಮಹಿಳೆಯು ಠಾಣೆಯಲ್ಲಿ ಅನುಚಿತವಾಗಿ ವರ್ತಿಸಿದ ಬಳಿಕ ಅಧಿಕಾರಿಗಳ ಮುಂದೆ ಬಟ್ಟೆ ಬಿಚ್ಚತೊಡಗಿದಳು.
ಲಿಂಗಾಂತರಿ ಮಹಿಳೆಯು ಠಾಣೆಯಲ್ಲಿ ಬಟ್ಟೆ ಬಿಚ್ಚಿ ಅರೆನಗ್ನಳಾಗಿ ನಿಂತ ವಿಡಿಯೋ ಚಿತ್ರಿಕೆಯೊಂದು ಹೇಗೋ ಇಂಟರ್‌ನೆಟ್‌ನಲ್ಲಿ ಹರಿದಾಡಲು ಆರಂಭಗೊಂಡಾಗ ಪೊಲೀಸ್ ಇಲಾಖೆ ಎಚ್ಚರಗೊಂಡಿತು.
ಪರಿಣಾಮವಾಗಿ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಯನ್ನು ವಿಚಾರಣೆ ಬಾಕಿ ಇರುತ್ತಾ ಅಮಾನತು ಗೊಳಿಸಲಾಯಿತು. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್ ಸುರೇಂದ್ರನ್ ತಿಳಿಸಿದ್ದಾರೆ.