Advertisement

Gold smuggled: ದುಬೈನಿಂದ ಅರ್ಧ ಕೆ.ಜಿ ಚಿನ್ನ ಕಳ್ಳಸಾಗಣೆ

11:03 AM Oct 16, 2023 | Team Udayavani |

ಬೆಂಗಳೂರು:  ಪಾಸ್ತಾ ಮಾಡುವ ಯಂತ್ರದಲ್ಲಿ ಚಿನ್ನವಿಟ್ಟು ದುಬೈ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಲಿಟ್ಟಿದ್ದ ವ್ಯಕ್ತಿ ಕಸ್ಟಮ್ಸ್‌ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

Advertisement

ಆರೋಪಿಯಿಂದ 35.37 ಲಕ್ಷ ರೂ. ಮೌಲ್ಯದ 598 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದ ಪ್ರಯಾಣಿಕನೊಬ್ಬನನ್ನು ಚಿನ್ನದಲ್ಲಿ ಅವುಗಳನ್ನು ಮಾಡಿಸಿ ಸಿಲ್ವರ್‌ ಕೋಟ್‌ ಮಾಡಿರುವುದು ಪತ್ತೆಯಾಗಿದೆ. ಆ ಯಂತ್ರವನ್ನು ಕಸ್ಟಮ್ಸ್‌  ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಬಳಿ ಪಾಸ್ತಾ ಮಾಡುವ ಯಂತ್ರ ಕಂಡು ಬಂದಿತ್ತು.  ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿದಾಗ ಯಂತ್ರದ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಯಂತ್ರಕ್ಕೆ ಅಳವಡಿಸಿದ್ದ ಬೋಲ್ಟ್ ಮತ್ತು ಸೂð ಕೂಲಂಕುಷವಾಗಿ ಪರಿಶೀಲಿಸಿದಾಗ ಚಿನ್ನದಲ್ಲಿ ಅವುಗಳನ್ನು ಮಾಡಿಸಿ ಸಿಲ್ವರ್‌ ಕೋಟ್‌ ಮಾಡಿರುವುದು ಪತ್ತೆಯಾಗಿದೆ. ಆ ಯಂತ್ರವನ್ನು ಕಸ್ಟಮ್ಸ್‌  ಅಧಿಕಾರಿಗಳು ತೆರೆದಾಗ 35.37 ಲಕ್ಷ ರೂ. ಮೌಲ್ಯದ 598 ಗ್ರಾಂ ಚಿನ್ನ ಇರುವುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next