Advertisement
ಶನಿವಾರ ನಡೆದ ಸೆಣಸಾಟದಲ್ಲಿ ಅವರು 6-2, 6-2 ನೇರ ಸೆಟ್‌ಗಳ ಅಂತರದಿಂದ ಸೆರೆನಾ ಅವರನ್ನು ಸೋಲಿಸಿದರು. ಈ ಮೂಲಕ ವಿಂಬಲ್ಡನ್ ಗೆದ್ದ ರೊಮಾನಿಯದ ಮೊದಲ ಆಟಗಾರ್ತಿ ಎಂದೆನಿಸಿ ಕೊಂಡಿದ್ದಾರೆ. ಇದು ಹಾಲೆಪ್ ಅವರ 2ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಅವರು 2018ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದರು. 2018ರಲ್ಲಿ ಆಸ್ಟ್ರೇಲಿ ಯನ್ ಓಪನ್ ರನ್ನರ್‌ಅಪ್, 2015 ರಲ್ಲಿ ಯುಎಸ್ ಓಪನ್ ಸೆಮಿಫೈನಲ್ ತನಕ ಪ್ರವೇಶಿಸಿದ್ದನ್ನು ಸ್ಮರಿಸಬಹುದು.
ಈ ಸೋಲಿನೊಂದಿಗೆ ಮಾರ್ಗರೆಟ್ ಕೋರ್ಟ್ ಅವರ ಅತೀ ಹೆಚ್ಚು ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಗೆದ್ದ ವಿಶ್ವ ದಾಖಲೆ ಸಮ ಮಾಡುವ ಅವಕಾಶವೊಂದನ್ನು ಸೆರೆನಾ ಕಳೆದುಕೊಂಡರು. ಹೀಗಾಗಿ ಮತ್ತೆ ಮುಂದಿನ ಕೂಟಗಳವರೆಗೆ ಕಾಯು ವುದು ಸೆರೆನಾಗೆ ಅನಿವಾರ್ಯವಾಗಿದೆ. ಆಸ್ಟ್ರೇಲಿಯದ ಆಟಗಾರ್ತಿ ಮಾರ್ಗ ರೇಟ್ ಕೋರ್ಟ್ 24 ಸಿಂಗ ಲ್ಸ್
ಗ್ರ್ಯಾನ್ ಸ್ಲಾಮ್ ಗೆದ್ದ ವಿಶ್ವದ ಮೊದಲ ಆಟಗಾರ್ತಿ ಆಗಿದ್ದಾರೆ. 37 ವರ್ಷದ ಸೆರೆನಾ ಒಟ್ಟಾರೆ 23 ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಗೆದ್ದು ಸದ್ಯ 2ನೇ ಸ್ಥಾನದಲ್ಲಿದ್ದಾರೆ.
Related Articles
ಸೆರೆನಾ ತಪ್ಪುಗಳನ್ನು ಗೆಲುವಿನ ಮೆಟ್ಟಿಲುಗಳಾಗಿ ಪರಿವರ್ತಿಸಿದ 27 ವರ್ಷದ ಹಾಲೆಪ್ ಸುಲಭವಾಗಿ ಗೆಲುವು ದಾಖಲಿಸಿದರು. ಮೊದಲ ಸೆಟ್‌ನಿಂದಲೂ ಹಾಲೆಪ್ ಅಬ್ಬರಿಸಲು ಆರಂಭಿಸಿದರು. ಮಾಜಿ ನಂ.1 ಆಟಗಾರ್ತಿಯ ಆತ್ಮವಿಶ್ವಾಸಕ್ಕೆ ಹೊಡೆತ ನೀಡುವಂತಹ ಸರ್ವ್ ಗಳನ್ನು ಹಾಲೆಪ್ ಮಾಡಿದರು. ಮೊದಲ ಸೆಟ್ ಅನ್ನು 6-2 ಅಂತರದಿಂದ ಗೆದ್ದರು. 2ನೇ ಸೆಟ್‌ನಲ್ಲೂ ಹಾಲೆಪ್ ಅಂತಹುದೇ ಆಟವನ್ನು ಮುಂದುವರಿಸಿದರು. ಅಲ್ಲೂ 6-2 ಅಂತರದಿಂದ ಸೆಟ್ ತಮ್ಮದಾಗಿಸಿಕೊಂಡರು.
Advertisement