Advertisement

ಹಲಾಲ್; ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ನಿಗಾ: ಆರಗ ಜ್ಞಾನೇಂದ್ರ

12:20 PM Mar 30, 2022 | Team Udayavani |

ಬೆಂಗಳೂರು : ಹಲಾಲ್ ಮಾಂಸ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪೊಲೀಸರು ಸಾಮಾಜಿಕ ಜಾಲತಾಣದ‌ ಮೇಲೆ ನಿಗಾ ಇಟ್ಟಿದ್ದಾರೆ.ಪ್ರಚೋದನೆಯ ಹೇಳಿಕೆ ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ.ಒಂದು ಸಮುದಾಯಕ್ಕೆ ಈ ಹೇಳಿಕೆಗಳಿಂದ ಏನೋ ಆಗುತ್ತದೆ ಅಂತ ಭಾವಿಸುವ ಅಗತ್ಯವಿಲ್ಲ ಎಂದರು.

ಒಂದು ಸಮುದಾಯ ಹಲಾಲ್ ಮಾಡದೇ ಮಾಂಸ ಮಾರಾಟ ಮಾಡಲ್ಲ‌ ಅನ್ನುತ್ತದೆ.ಇನ್ನೊಂದು ಸಮುದಾಯದವರು ಹಲಾಲ್ ಮಾಂಸ ನಮ್ಮ ದೇವರಿಗೆ ಆಗುವುದಿಲ್ಲ ಅನ್ನುತ್ತಾರೆ.ಈಗಿನ ವಿವಾದದ ಕೇಂದ್ರವೇ ಇದು ಎಂದರು.

ಮೊದಲು ಹಿಜಾಬ್ ನಿಂದ ಆಕ್ಷನ್ ಶುರು ಆಯಿತು.ಇನ್ನೊಬ್ಬರು ಅದಕ್ಕೆ ರಿಯಾಕ್ಷನ್ ಮಾಡ್ತಿದ್ದಾರೆ. ಇದು ಆದಷ್ಟು ಬೇಗ ತಣ್ಣಗೆ ಆಗಬೇಕು.ಶಾಂತಿ ಸುವ್ಯವಸ್ಥೆ ಕದಡದಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಯುಗಾದಿ‌ ಹಿನ್ನೆಲೆ ಹಲಾಲ್ ಮಾಂಸ ಖರೀದಿ ಮಾಡಲ್ಲ ಅನ್ನೋ ಹೇಳಿಕೆಗಳು ಸಹಜ.ಹಲಾಲ್ ನಮ್ಮ ದೇವರಿಗೆ ಆಗಲ್ಲ ಅಂತ ಅವರು ಖರೀದಿಸಲ್ಲ ಎಂದು ಪ್ರತಿಕ್ರಿಯೆ ಮಾಡುತ್ತಿದ್ದಾರೆ. ಈ ಸಮಸ್ಯೆ ಇದುವರೆಗೆ ಇರಲಿಲ್ಲ.ಇದು ವಿಕೋಪಕ್ಕೆ ಹೊಗಬಾರದು, ಚರ್ಚೆ ನಡೆಯುವುದರಲ್ಲಿ ತಪ್ಪಿಲ್ಲ.ಸಿ ಟಿ ರವಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next