ಗಂಗಾವತಿ: ಯುಗಾದಿ ನೂತನ ವರ್ಷದ ಕರಿ ಕೊನೆಯ ದಿನದ ಹಬ್ಬಕ್ಕೆ ಮಾಂಸದ ಊಟ ಮಾಡುವುದು ವಾಡಿಕೆ. ಈಗಾಗಲೇ ರಾಜ್ಯಾದ್ಯಂತ ಹಲಾಲ್ ಕಟ್ ಜಟ್ಕಾ ಕಟ್ ಮಾಂಸದ ಕುರಿತು ಪರ ವಿರೋಧ ಚರ್ಚೆಗಳು ವ್ಯಾಪಕವಾಗಿರುವ ಸಂದರ್ಭದಲ್ಲಿ ಗಂಗಾವತಿಯಲ್ಲಿ ಯಾವುದೇ ಗೊಂದಲವಿಲ್ಲದೆ ಮಾಂಸದಂಗಡಿಯವರು ಕೋಳಿ ಮತ್ತು ಕುರಿ ಮೇಕೆಯ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಯುಗಾದಿ ಹಬ್ಬದ ಕೊನೆಯ ದಿನವನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಕರಿ ದಿನದಂದು ಮಾಂಸದ ಊಟ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕುರಿ ಅಥವಾ ಮೇಕೆಯನ್ನು ಕೊಯ್ದು ಪಾಲು ಹಾಕಲಾಗುತ್ತದೆ. ಸಾಮಾನ್ಯವಾಗಿ ಕುರಿ ಮೇಕೆಯನ್ನು, ಕೋಳಿಯನ್ನು ಹಲಾಲ್ ಕಟ್ ಮಾಡುತ್ತಾರೆ. ಹಲಾಲ್ ಮಾಡದೇ ಇರುವ ಮಾಂಸವನ್ನು ತಿನ್ನಬಾರದೆಂದು ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಮಹಿಳೆಯರಿಗೆ ಬೆದರಿಕೆ..! ಆರೋಪಿ ಬಂಧನ
ರಾಜ್ಯದಾದ್ಯಂತ ಹಲವು ಸಂಘಟನೆಗಳು ಹಲಾಲ್ ಮಾಡಿದ ಮಾಂಸವನ್ನು ತಿನ್ನಬಾರದು. ಜಟ್ಕಾ ಕಟ್ ಮಾಡಿದ ಮಾಂಸವನ್ನು ತಿನ್ನಬೇಕು ಮತ್ತು ಹಲಾಲ್ ಮಾಂಸವನ್ನು ತಿರಸ್ಕರಿಸುವಂತೆ ಈಗಾಗಲೇ ಕರಪತ್ರವನ್ನು ಹಂಚುತ್ತಿದ್ದಾರೆ.