Advertisement

ಬೆಲೆ ಏರಿಕೆ ಮರೆಮಾಚಲು ಹಲಾಲ್, ಭಗವದ್ಗೀತೆ, ಅಜಾನ್ ವಿವಾದ ಸೃಷ್ಠಿ: ಸಿದ್ಧರಾಮಯ್ಯ

01:17 PM Apr 05, 2022 | Team Udayavani |

ಚಿತ್ರದುರ್ಗ: ರಾಜ್ಯದಲ್ಲಿ ಬೆಲೆ ಏರಿಕೆ ವಿಚಾರವನ್ನು ಜನರಿಂದ ಮರೆಮಾಚಲು ಹಲಾಲ್, ಭಗವದ್ಗೀತೆ, ಅಜಾನ್ ವಿವಾದವನ್ನು ಬಿಜೆಪಿ ಸೃಷ್ಠಿಸಿದೆ ಎಂದು
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರೇಣುಕಾಚಾರ್ಯ ಓರ್ವ ಮತಾಂಧ, ಅವನ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ತಂತ್ರಜ್ಞಾನ ಬೆಳೆದಂತೆ ಹೊಸ ಆವಿಷ್ಕಾರ ಬರುತ್ತವೆ. ಖುರಾನ್ ಬರೆದಾಗ ಮೈಕ್ ವ್ಯವಸ್ಥೆ ಇರಲಿಲ್ಲ ಎಂಬುದು ತಪ್ಪು. ದೇಗುಲಗಳಲ್ಲೂ ಧ್ಚನಿವರ್ಧಕ ಬಳಸುತ್ತಾರೆ, ಮಸೀದಿಯಲ್ಲೂ ಧ್ವನಿವರ್ಧಕ ಬಳಸುತ್ತಾರೆ. ಧ್ವನಿವರ್ಧಕ ಬಳಕೆಯಿಂದ ತೊಂದರೆ ಏನಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಖುರಾನ್ ಕಾಲದಲ್ಲಿ ಧ್ವನಿವರ್ಧಕ ಇಲ್ಲದೆ ಇರಬಹುದು. ಆಗ ವಿದ್ಯುಚ್ಛಕ್ತಿ ಇರಲಿಲ್ಲ. ಅಲಾರಾಮ್ ಅನ್ನು ಇಟ್ಟುಕೊಂಡಿದ್ದರೇನು? ಬಿಜೆಪಿ ಕುಮ್ಮಕ್ಕಿನಿಂದಲೇ ಹಿಜಾಬ್, ಆಜಾನ್ ವಿವಾದ ಸೃಷ್ಠಿಸಲಾಗಿದೆ. ಬಿಜೆಪಿಗೆ ಸಮಾಜದ ಸಾಮರಸ್ಯಗಿಂತ ಚುನಾವಣೆ ಮುಖ್ಯ ಎಂದು ಕಿಡಿಕಾರಿದ್ದಾರೆ.

ಕಾನೂನು ಸುವ್ಯವಸ್ಥೆ ಇಲ್ಲದೆ ಬಂಡವಾಳ ಹೂಡಿಕೆ ಆಗಲ್ಲ, ಉದ್ಯೋಗ ಸೃಷ್ಠಿ ಆಗಲ್ಲ. ಕಳೆದ 2 ವರ್ಷದಿಂದ ಬಂಡವಾಳ ಹೂಡಿಕೆದಾರರು ಬಂದಿಲ್ಲ. ಇರುವ ಕಂಪನಿಗಳೆಲ್ಲಾ ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಕಾಂಗ್ರೆಸ್ ನಾಯಕರು ಜಾತ್ಯಾತೀತ ತತ್ವಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಎಲ್ಲ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೊದಲ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ: ಸಿಎಂ

Advertisement

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಅರಗ ಜ್ಞಾನೇಂದ್ರ ಗೃಹ ಸಚಿವರಾಗಿ ಸಂಪೂರ್ಣ ವಿಫಲವಾಗಿದ್ದಾರೆ. ಮಸೀದಿಗಳಲ್ಲಿ ನಿನ್ನೆ ಮೊನ್ನೆಯಿಂದ ಅಜಾನ್ ಮಾಡುತ್ತಿಲ್ಲ. ಅನೇಕ ವರ್ಷಗಳಿಂದ ಮಸೀದಿಗಳಲ್ಲಿ ಅಜಾನ್ ಮಾಡುತ್ತಿದ್ದಾರೆ. ಚುನಾವಣೆಗಾಗಿ ಬಿಜೆಪಿಯವರು ಅಜಾನ್ ವಿವಾದ ಸೃಷ್ಠಿಸುತ್ತಿದ್ದಾರೆ. ಬಿಜೆಪಿ ಜನಪರವಾದ ಅಭಿವೃದ್ಧಿ ಮಾಡಿಲ್ಲ ಎಂದರು.

ಬೆಲೆ ಏರಿಕೆ ಗಗನಕ್ಕೇರಿದ್ದು, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿದೆ. ವಿದ್ಯುತ್, ಜನೌಷಧಿ ದರ ಎಲ್ಲಾ ಏರಿಕೆ ಆಗಿದೆ. ಹೀಗಾಗಿ, ಹಿಜಾಬ್, ಜಾತ್ರೆ ವ್ಯಾಪಾರ, ಹಲಾಲ್, ಭಗವದ್ಗೀತೆ, ಅಜಾನ್ ವಿವಾದ ಸೃಷ್ಠಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next