Advertisement

ಎಚ್‌ಎಎಲ್‌ ರುದ್ರ ಈಗ ಸುಭದ್ರ!

06:22 AM Feb 22, 2019 | |

ಬೆಂಗಳೂರು: ಹಿಂದುಸ್ತಾನ್‌ ಏರೋನಾಟಿಕ್ಸ್‌ ಸಂಸ್ಥೆಯ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ರುದ್ರ ಹೊಸ ತಂತ್ರಾಜ್ಞಾನದೊಂದಿಗೆ ಸಿದ್ಧವಾಗಲಿದೆ. ಸಿಯಾಚಿನ್‌ ಸೇರಿದಂತೆ ಕ್ಲಿಷ್ಟಕರವಾದ ಯುದ್ಧಭೂಮಿ, ಅತ್ಯಂತ ದರ್ಗಮ ಪ್ರದೇಶ, ಸಮುದ್ರದ ಮಧ್ಯಕ್ಕೆ ಯುದ್ಧ ಸಾಮಗ್ರಿಯೊಂದಿಗೆ ಸೈನಿಕರನ್ನು ಕೊಂಡೊಯ್ಯಲು ಅತಿ ಹೆಚ್ಚು ಬಳಕೆಯಾಗುತ್ತಿರುವ ರುದ್ರ ಹೆಲಿಕಾಪ್ಟರ್‌ಗೆ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.

Advertisement

ಗಡಿ ಪ್ರದೇಶ ಅಥವಾ ನೌಕಯ ಮೇಲೆ ಸುಲಭವಾಗಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಹಾಗೂ ನಿಲುಗಡೆ  ಮಾಡಬಹುದಾದ ವ್ಯವಸ್ಥೆಯನ್ನು ಇದಕ್ಕೆ ಜೋಡಿಸಲಾಗುತ್ತಿದೆ. 14 ಮೀಟರ್‌ ಅಗಲ ಹಾಗೂ 4.50 ಮೀಟರ್‌ ಉದ್ದದ ಜಾಗದೊಳಗೆ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಮಾಡಬೇಕಾಗುತ್ತದೆ. ಕೆಲವೊಂದು ಹೆಲಿಕಾಪ್ಟರ್‌ಗಳ ಟೈಲ್‌ ರೋಟರ್‌ (ಹಿಂಭಾಗ) ಉದ್ದವಿರುತ್ತದೆ.

ಅಲ್ಲದೇ ರೆಕ್ಕೆಗಳು ಅಗಲವಾಗಿರುವುದರಿಂದ ನಿಗದಿತ ವ್ಯಾಪ್ತಿಯಲ್ಲಿ ಲ್ಯಾಂಡಿಂಗ್‌ ಮಾಡಲು ಕಷ್ಟವಾಗುತ್ತದೆ. ನೌಕೆಯಲ್ಲಿ ಅಥವಾ ಸಿಯಾಚಿನ್‌ ಮೊದಲಾದ ಪ್ರದೇಶದಲ್ಲಿ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಗದಿತ ವ್ಯಾಪ್ತಿಗಿಂತಲೂ ಚಿಕ್ಕ ಪ್ರದೇಶದಲ್ಲಿ ಕಾಪ್ಟರ್‌ ಇಳಿಸಬಲ್ಲ ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ.

ರುದ್ರ ಹೆಲಿಕಾಪ್ಟರ್‌ನ ಟೈಲ್‌ ರೋಟರ್‌ ಭಾಗವನ್ನು ಹಿಮ್ಮುಖವಾಗಿ ಮಡಿಕೆ ಮಾಡಲು ವ್ಯವಸ್ಥೆ ಮಾಡುವ ತಂತ್ರಜ್ಞಾನ ಅಳವಡಿಸಲು ಸಿದ್ಧತೆ ನಡೆಯುತ್ತಿದೆ. ಹಾಗೇ ರೆಕ್ಕೆಗಳನ್ನು ಒಂದೇ ಕಡೆ ತರಬಹುದಾದ ವ್ಯವಸ್ಥೆಯೂ ಇದೆ. ಈಗ ಪ್ರದರ್ಶನಕ್ಕೆ ಇಟ್ಟಿದ್ದೇವೆ. ಉತ್ಪಾದನೆ ಇನ್ನಷ್ಟೆ ಆರಂಭಿಸಬೇಕು ಎಂದು ಎಚ್‌ಎಎಲ್‌ನ ಎಜಿಎಂ ಮಣಿಪಥಿ ಕುಲಕರ್ಣಿ ಮಾಹಿತಿ ನೀಡಿದರು.

ಟೈಲ್‌ ರೋಟರ್‌ ಮಾಡುವುದರಿಂದ ಪಾರ್ಕಿಂಗ್‌ ಮಾಡುವ ಸಂದರ್ಭದಲ್ಲಿ ಹೆಲಿಕಾಪ್ಟರ್‌ನ ಉದ್ದವು 13.5 ಮೀಟರ್‌ ಹಾಗೂ 3.5 ಮೀಟರ್‌ಗೆ ಇಳಿಯಲಿದೆ. ಇದರಲ್ಲಿ 36 ರಾಕೆಟ್‌, 4 ಮಿಸೈಲ್‌ ಅಳವಡಿಸಬಹುದಾದ ಸಾಮರ್ಥ್ಯ ಇದೆ. ಅದರ ಜತೆಗೆ 1 ಸಾವಿರ ಲೀಟರ್‌ ಸಾಮರ್ಥ್ಯದ ಇಂಧನ ಟ್ಯಾಂಕ್‌, ಹಾಗೆಯೇ ಇನ್ನು ಒಂದು ಸಾವಿರ ಟನ್‌ ಸಾಮರ್ಥ್ಯದ ವಸ್ತುಗಳನ್ನು ಕೊಂಡೊಯ್ಯಬಹುದಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next