Advertisement
ತನ್ನ ಲಘು ಯುದ್ಧವಿಮಾನ ತೇಜಸ್ ಮತ್ತು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಖರೀದಿಸುವಂತೆ ಇತರೆ ದೇಶಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಚ್‌ಎಎಲ್ ಈ ಚಿಂತನೆ ನಡೆಸಿದೆ. “ಲಾಜಿಸ್ಟಿಕ್ ಬೇಸ್ ನಿರ್ಮಿಸಲು ಆಯ್ಕೆ ಮಾಡಿಕೊಂಡಿರುವ ನಾಲ್ಕೂ ದೇಶಗಳು ರಷ್ಯಾ ದೇಶವು ಉಕ್ಕಿನಿಂದ ನಿರ್ಮಿಸಿರುವ ಮಿಲಿಟರಿ ವಿಮಾನ ಮತ್ತು ಕಾಪ್ಟರ್‌ಗಳನ್ನು ಬಳಸುತ್ತಿವೆ. ಆದರೆ, ಇವುಗಳ ಸೇವಾ ದಕ್ಷತೆ ಅತ್ಯಂತ ಕಳಪೆಯಾಗಿದೆ. ಹೀಗಾಗಿ, ಆಗ್ನೇಯ ಮತ್ತು ಪಶ್ಚಿಮ ಏಷ್ಯಾ ಹಾಗೂ ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿ ಎಚ್‌ಎಎಲ್ ನಿರ್ಮಿತ “ತೇಜಸ್’ ಲಘು ಯುದ್ಧ ವಿಮಾನ ಮತ್ತು “ರುದ್ರ’ ಅಟ್ಯಾಕ್ ಹೆಲಿಕಾಪ್ಟರ್‌ಗಳ ಮಾರಾಟಕ್ಕೆ ಅಗತ್ಯ ವೇದಿಕೆ ಸೃಷ್ಟಿಸಲಾಗುತ್ತಿದೆ,’ ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಮಾಹಿತಿ ನೀಡಿದ್ದಾರೆ.
Advertisement
ಆಗ್ನೇಯ, ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಲಾಜಿಸ್ಟಿಕ್ಸ್ ಬೇಸ್ ಸ್ಥಾಪಿಸಲು HAL ಚಿಂತನೆ
10:20 AM Mar 09, 2020 | sudhir |
Advertisement
Udayavani is now on Telegram. Click here to join our channel and stay updated with the latest news.