Advertisement

ಹೇರಿಕೆ ವಿರುದ್ಧ ಎಚ್‌ಎಎಲ್‌ ಕನ್ನಡ ಸಂಘದ ಪ್ರತಿಭಟನೆ

11:48 AM Sep 15, 2017 | Team Udayavani |

ಬೆಂಗಳೂರು: ಹಿಂದಿ ದಿವಸ್‌ ಆಚರಣೆ ನೆಪದಲ್ಲಿ ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಎಚ್‌ಎಎಲ್‌ ಕೇಂದ್ರೀಯ ಕನ್ನಡ ಸಂಘ ಎಚ್‌ಎಎಲ್‌ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿತು. ಕೇಂದ್ರೀಯ ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು ಮಾತ್ರವಲ್ಲದೆ ಎಚ್‌ಎಎಲ್‌ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಂದಿ ಹೇರಿಕೆ ವಿರುದ್ಧ ಫ‌ಲಕಗಳನ್ನು ಪ್ರದರ್ಶಿಸಿದರು.

Advertisement

ಅಲ್ಲದೆ, ಹಿಂದಿ ಹೇರಿಕೆ ಕೈಬಿಡಬೇಕು ಎಂದು ಆಗ್ರಹಿಸಿದರು. ಇದರಿಂದ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಿಗೆ ಕಂಟಕವಾಗುತ್ತಿದೆ. ಅದೇ ರೀತಿ ಹಿಂದಿ ದಿವಸ್‌ ಮೂಲಕ ಪರೋಕ್ಷವಾಗಿ ಹಿಂದಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ನೀತಿ ಕೈಬಿಟ್ಟು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು. ತ್ರಿಭಾಷಾ ಸೂತ್ರದ ಅನ್ವಯ ರಾಜ್ಯದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next