Advertisement

HAL: ವಿದೇಶಿ ಮಾರುಕಟ್ಟೆಗೆ ಎಚ್‌ಎಎಲ್‌ ಲಗ್ಗೆ

12:48 AM Dec 13, 2023 | Team Udayavani |

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಕ್ಷಣ ಸಾಧನಗಳ ಸಾಗರೋತ್ತರ ಮಾರಾಟವನ್ನು ಮೂರು ಪಟ್ಟು ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿರುವ ಬೆನ್ನಲ್ಲೇ ಸರಕಾರಿ ಸ್ವಾಮ್ಯದಲ್ಲಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌) ಸ್ವದೇಶಿ ನಿರ್ಮಿತ ಮಲ್ಟಿ ರೋಲ್‌ ಫೈಟರ್‌ ಜೆಟ್‌ಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ರಫ್ತು ಮಾಡಲು ಮುಂದಾಗಿದೆ.

Advertisement

ಯಾವ್ಯಾವ ದೇಶಗಳಿಗೆ ರಫ್ತು
ಮಲ್ಟಿ ರೋಲ್‌ ಫೈಟರ್‌ ಜೆಟ್‌ಗಳನ್ನು ನೈಜೀರಿಯಾ, ಫಿಲಿಪ್ಪೀನ್ಸ್‌ ಮತ್ತು ಅರ್ಜೆಂಟೀನಾಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಎಚ್‌ಎಎಲ್‌ ಈಗ ಮಾತುಕತೆಯಲ್ಲಿ ನಿರತವಾ ಗಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ. ಇದೇ ವೇಳೆ ಲಘು ಯುದ್ಧ ವಿಮಾನಗಳ ಖರೀದಿಗೆ ಈಜಿಪ್ಟ್ ಒಲವು ವ್ಯಕ್ತಪಡಿಸಿದ್ದು ಸದ್ಯ ಮಾತುಕತೆ ಪ್ರಾಥಮಿಕ ಹಂತದಲ್ಲಿದೆ.

ಬ್ರಿಟಿಷ್‌ ನಿರ್ಮಿತ ಸಾಧನ, ಉಪಕರಣಗಳನ್ನು ಬಳಸಿ ನಿರ್ಮಿಸಲಾದ ರಕ್ಷಣ ಸಲಕರಣೆಗಳಿಗೆ ದೇಶದಲ್ಲಿ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಅರ್ಜೆಂಟೀನಾ, ಎಚ್‌ಎಎಲ್‌ ನಿರ್ಮಿತ ಲಘು ಯುದ್ಧ ವಿಮಾನಗಳ ಖರೀದಿಗೆ ಅಲ್ಲಿನ ಸರಕಾರ ಹೆಚ್ಚಿನ ಆಸಕ್ತಿಯನ್ನು ತೋರಿದೆ.

ವಿದೇಶಗಳಲ್ಲಿ ಕಚೇರಿ
ಸರಕಾರಿ ಸ್ವಾಮ್ಯದ ಎಚ್‌ಎಎಲ್‌ ಬಾಹ್ಯಾಕಾಶ ಮತ್ತು ರಕ್ಷಣ ಸಾಧನ, ಸಲಕರಣೆಗಳ ಉತ್ಪಾದನೆಯಲ್ಲಿ ದಾಪುಗಾಲಿಡುತ್ತಿದೆ. ಎಚ್‌ಎಎಲ್‌ ಕೆಲವು ಸಾಗರೋತ್ತರ ದೇಶಗಳ ಮಾರುಕಟ್ಟೆಗಳಲ್ಲಿ ತನ್ನ ಕಚೇರಿಯನ್ನು ತೆರೆದಿದೆ. ನೈಜೀರಿಯನ್‌ ಆರ್ಮಿ ಏವಿಯೇಶನ್‌ ಮತ್ತು ಅರ್ಜೆಂಟೀನಾ ವಾಯುಸೇನೆಯ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದೆಯಲ್ಲದೆ, ರಕ್ಷಣ ಸಾಧನ, ಸಾಮಗ್ರಿಗಳ ಬಿಡಿಭಾಗಗಳ ರಫ್ತಿಗೆ ಉತ್ತೇಜನ ನೀಡುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next