Advertisement

ಬೇಗ ಆಗಮಿಸಿದ “ಚೇತಕ್‌’

12:18 AM Jul 25, 2019 | Team Udayavani |

ಹೊಸದಿಲ್ಲಿ/ಬೆಂಗಳೂರು: ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌) ಸಂಸ್ಥೆ, ನೌಕಾಪಡೆಗೆ ನೀಡಬೇಕಿರುವ ಎಂಟು “ಚೇತಕ್‌ ಹೆಲಿಕಾಪ್ಟರ್‌’ಗಳಲ್ಲಿ, ಮೊದಲನೆಯ ಹೆಲಿಕಾಪ್ಟರನ್ನು ಬುಧವಾರ ಹಸ್ತಾಂತರಗೊಳಿಸಿದೆ. ಒಪ್ಪಂದದ ಪ್ರಕಾರ, ಆಗಸ್ಟ್‌ನಲ್ಲಿ ಈ ಹೆಲಿಕಾಪ್ಟರ್‌ ಹಸ್ತಾಂತರ ಗೊಳ್ಳಬೇಕಿತ್ತು. ಗಡುವಿಗೂ ಮೊದಲೇ ಹೆಲಿಕಾಪ್ಟರ್‌ ತಯಾರಿಸಿ ಹಸ್ತಾಂತರಗೊಳಿಸಿರು ವುದು ಎಚ್‌ಎಎಲ್‌ನ ಹೆಗ್ಗಳಿಕೆಯಾಗಿದೆ.

Advertisement

ಬುಧವಾರ, ಎಚ್‌ಎಎಲ್‌ ಕಾರ್ಖಾನೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಚ್‌ಎಎಲ್‌ನ ಹೆಲಿಕಾಪ್ಟರ್‌ ವಿಭಾಗದ ಮುಖ್ಯಸ್ಥರಾದ ಎಸ್‌. ಅನುºವೆಲನ್‌ ಅವರು, ಹೆಲಿಕಾಪ್ಟರ್‌ಗೆ ಸಂಬಂಧಪಟ್ಟ ಕಾಗದಪತ್ರಗ ಳನ್ನು ನೌಕಾಪಡೆಯ ಕಮಾಂಡೊ ವಿಕ್ರಮ್‌ ಮೆನನ್‌ ಅವರಿಗೆ ಹಸ್ತಾಂತರಿಸಿದರು.

2020ಕ್ಕೆ ಒಪ್ಪಂದ ಪೂರ್ಣ: 2017ರಲ್ಲಿ ಎಚ್‌ಎಎಲ್‌-ನೌಕಾಪಡೆ ನಡುವೆ ಏರ್ಪಟ್ಟಿದ್ದ ಒಪ್ಪಂದದ ಪ್ರಕಾರ, ಎಂಟು ವಿಮಾನಗಳನ್ನು ಎಚ್‌ಎಎಲ್‌ ನೌಕಾಪಡೆಗೆ ತಯಾರಿಸಿ ಕೊಡಬೇಕಿದೆ. ಇವುಗಳಲ್ಲಿ, ಎರಡನ್ನು 2019ರ ಆಗಸ್ಟ್‌ನಲ್ಲಿ ಹಾಗೂ ಉಳಿದ ಆರು ಹೆಲಿಕಾಪ್ಟರ್‌ಗಳನ್ನು 2020ರ ಆಗಸ್ಟ್‌ನಲ್ಲಿ ಹಸ್ತಾಂತರಿಸಬೇಕೆಂದು ಒಪ್ಪಂದದಲ್ಲಿ ಉಲ್ಲೇಖೀಸಲಾಗಿದೆ.

ಐದು ದಶಕಗಳ ಉತ್ಪಾದನೆ: ಫ್ರಾನ್ಸ್‌ನ ಯೂರೋಕಾಪ್ಟರ್‌ (ಈಗ ಅದರ ಹೆಸರು ಏರ್‌ಬಸ್‌ ಹೆಲಿಕಾಪ್ಟರ್‌) ಕಂಪೆನಿಯಿಂದ ಪರವಾನಗಿ ಪಡೆದಿರುವ ಎಚ್‌ಎಎಲ್‌, 1966ರಿಂದ ಈವರೆಗೆ, ಅಂದರೆ, ಸುಮಾರು ಐದು ದಶಕಗಳಿಂದಲೂ ಚೇತಕ್‌ ಹೆಲಿಕಾಪ್ಟರ್‌ ತಯಾರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next