ಬೆಂಗಳೂರು: ಹೊಸನಗರದ ಶ್ರೀರಾಮಚಂದ್ರಾಪುರ ಮಠದ ವಿಚಾರವಾಗಿ ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪಗೆ ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕೃಷ್ಣಮೂರ್ತಿ ಮುಗಲೋಡಿ ಅವರನ್ನು ಬಂಧಿಸದಂತೆ ವಿಧಾನಸೌಧ ಠಾಣಾ ಪೊಲೀಸರಿಗೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಉಗ್ರಪ್ಪಗೆ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ತಮ್ಮ ವಿರುದ್ಧ ವಿಧಾನಸೌಧ ಠಾಣಾ ಪೊಲೀಸರು ದಾಖಲಿಸಿದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಕೃಷ್ಣಮೂರ್ತಿ ಮುಗಲೋಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರು ಈ ನಿರ್ದೇಶನ ನೀಡಿದರು.
ಜತೆಗೆ, ಅರ್ಜಿ ಕುರಿತು ವಿಧಾನಸೌಧ ಠಾಣಾ ಪೊಲೀಸರು ಮತ್ತು ವಿ.ಎಸ್. ಉಗ್ರಪ್ಪಗೆ ನೋಟಿಸ್ ಜಾರಿ ಮಾಡಿ
ವಿಚಾರಣೆ ಮುಂದೂಡಿದರು.