Advertisement
1952ರಲ್ಲಿ ಈ ಕ್ಷೇತ್ರ ರಚನೆಯಾದ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜೇಶ್ವರ ಪಟೇಲ್ ಗೆದ್ದಿದ್ದರು. 1957 ಮತ್ತು 1962ರ ಚುನಾವಣೆಯಲ್ಲಿ ಪಟೇಲ್ ಅವರೇ ಸ್ಥಾನ ಉಳಿಸಿಕೊಂಡಿದ್ದರು. 1967ರಲ್ಲಿ ಕಾಂಗ್ರೆಸ್‌ನಿಂದ ವಾಲ್ಮೀಕಿ ಚೌಧರಿ ಗೆದ್ದರು. 1971ರಲ್ಲಿ ರಾಮ್‌ಶೇಖರ್ ಪ್ರಸಾದ್ ಸಿಂಗ್ ಜಯ ಸಾಧಿಸಿದ್ದರು. ಹಾಲಿ ಪ್ರಭಾವಿ ನಾಯಕ ಪಾಸ್ವಾನ್ 1977ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲ್ಲುವ ಮೂಲಕ ತಮ್ಮ ಛಾಪು ಮೂಡಿಸಿದರು. 1980, 1989, 1996, 1998, 1999, 2004, 2014ರ ಚುನಾವಣೆಯಲ್ಲಿ ಪಾಸ್ವಾನ್ ಜಯಗಳಿಸಿದ್ದರು. 1991 ಮತ್ತು 2009ರಲ್ಲಿ ಜೆಡಿಯುನ ರಾಂ ಸುಂದರ್ ದಾಸ್ ಗೆದ್ದಿದ್ದರು.
ಜಾತಿ ಲೆಕ್ಕಾಚಾರ: ಇಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚು. ಅಲ್ಪಸಂಖ್ಯಾತ ಸಮುದಾಯದ ಪೈಕಿ ಮುಸ್ಲಿಂ ಸಮುದಾಯದ ಪ್ರತಿನಿಧಿನ್ವ ಶೇ.9.5. ಕ್ರಿಶ್ಚಿಯನ್ ಸಮುದಾಯ ಶೇ.0.06, ಜೈನ, ಸಿಖ್ ಮತ್ತು ಬೌದ್ಧ ಸಮುದಾಯದವರ ಪ್ರಮಾಣ ಶೇ.3ರಷ್ಟು ಇದೆ. ಇನ್ನು ಯಾದವರು, ರಜಪೂತರು, ಭೂಮಿಹಾರರು, ಕುಶ್ವಾಹಾ, ಪಾಸ್ವಾನ್, ರವಿದಾಸ ಸಮುದಾಯಕ್ಕೆ ಸೇರಿದವರೂ ಗಣನೀಯ ಪ್ರಮಾಣದಲ್ಲಿ ಇದ್ದಾರೆ.
Related Articles
Advertisement
ಇಷ್ಟು ಮಾತ್ರವಲ್ಲದೆ ಕ್ಷೇತ್ರದ ಜತೆಗೆ ಬರೋಬ್ಬರಿ ನಲವತ್ತು ವರ್ಷಗಳ ಕಾಲ ನಿಕಟ ಸಂಬಂಧ ಇರಿಸಿಕೊಂಡಿದ್ದಾರೆ. ಜನತಾ ಪರಿವಾರ ವಿಭಜನೆಗೊಂಡು ಪ್ರತ್ಯೇಕಗೊಂಡಾಗಲೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಬಿಹಾರದಲ್ಲಿ ಎನ್‌ಡಿಎ ಸ್ಥಾನ ಹೊಂದಾಣಿಕೆ ವೇಳೆ ತಮಗೆ ರಾಜ್ಯಸಭಾ ಸ್ಥಾನ ಬೇಕೇ ಬೇಕು ಎಂದು ಪಟ್ಟುಹಿಡಿದು ಗಿಟ್ಟಿಸಿಕೊಂಡವರು. ಹೀಗಾಗಿ, ಕ್ಷೇತ್ರದ ಜನತೆಗೆ ಅವರನ್ನು ನಿಜಕ್ಕೂ “ಕಳೆದುಕೊಂಡಂತೆ’ ಆಗಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕ್ಷೇತ್ರದ ಮತದಾರ ಜೋಗೇಶ್ವರ್ ಕುಶ್ವಾಹ ಹೇಳುವ ಪ್ರಕಾರ ಪ್ರತಿ ಬಾರಿಯೂ ನಾವು ಅವರಿಗೆ ಮತ ಹಾಕಿ ಆಯ್ಕೆ ಮಾಡುತ್ತಿದ್ದೆವು.
ನವದೆಹಲಿಯಲ್ಲಿರುವ ಅವರ ಕಚೇರಿಗೆ ತೆರಳಿದ್ದಾಗ ಯಾವ ರೀತಿಯಾಗಿ ಸಿಬ್ಬಂದಿ ಕ್ಷೇತ್ರದ ಜತೆಗೆ ನಡೆದುಕೊಳ್ಳುತ್ತಿದ್ದರು ಮತ್ತು ಯಾವ ರೀತಿಯ ಸಮಸ್ಯೆ, ಪರಿಹಾರ ಬೇಕಾದರೂ ಸ್ಪಂದಿಸುತ್ತಿದ್ದರು ಎನ್ನುವುದನ್ನು ಹತ್ತಿರದ ಬಂಧುಗಳು ಹೇಳುವುದನ್ನು ಕೇಳಿದ್ದೆ ಎಂದು ಹೇಳಿದ್ದಾರೆ. ಸದ್ಯ 72 ವರ್ಷ ವಯಸ್ಸಿನ ಅವರು ಕಾಂಗ್ರೆಸ್ ವಿರೋಧಿಸಿ ರಾಜಕೀಯ ಜೀವನ ಶುರು ಮಾಡಿದ್ದರೂ, ನಂತರದ ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಮತ್ತು ಬಿಜೆಪಿ ಮೈತ್ರಿಕೂಟದ ಜತೆಗೆ ಕೆಲಸ ಮಾಡಿದ್ದಾರೆ.
ಈ ಬಾರಿ ಕಣದಲ್ಲಿ– ಪಶುಪತಿ ಕುಮಾರ್ ಪರಸ್ (ಎಲ್‌ಜೆಪಿ)
– ಶಿವಚಂದ್ರ ರಾಮ್ (ಆರ್‌ಜೆಡಿ)